Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್ ಯಾನ
Team Udayavani, Jun 8, 2024, 11:07 AM IST
ಹೊಸದೇನನ್ನೋ ಹೇಳಬೇಕೆಂಬ ತುಡಿತ ಚಿತ್ರರಂಗಕ್ಕೆ ಬರುವವರಲ್ಲಿ ಹೆಚ್ಚಿರುತ್ತದೆ. ಅದೇ ಕಾರಣದಿಂದ ಸಸ್ಪೆನ್ಸ್ ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಹಲವು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ “ಅನರ್ಥ’.
ಆರಂಭದಲ್ಲಿ ಒಂದು ಲವ್‌ಸ್ಟೋರಿಯಂತೆ ಕಾಣುವ ಈ ಸಿನಿಮಾ ಮುಂದೆ ಸಾಗುತ್ತಾ ತನ್ನ ಮಗ್ಗುಲು ಬದಲಿಸುತ್ತದೆ. ನಾಯಕ ಹಾಗೂ ನಾಯಕಿಯ ಲಾಂಗ್ ಜರ್ನಿ ಹಲವು ತಿರುವುಗಳನ್ನು ಪಡೆಯುತ್ತದೆ. ಈ ತಿರುವುನಲ್ಲಿ ತೆರೆದುಕೊಳ್ಳುವ ಕೆಲವು ಅಚ್ಚರಿಯ ಅಂಶಗಳೇ ಈ ಸಿನಿಮಾದ ಜೀವಾಳ.
ಕಥೆಯ ಬಗ್ಗೆ ಹೇಳುವುದಾದರೆ, ಅವಕಾಶ್ ಹಾಗೂ ಆಕೃತಿ ಎಂಬ ಎರಡು ಪಾತ್ರಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಇವರಿಬ್ಬರಲ್ಲಿ ಪ್ರೀತಿ ಹುಟ್ಟಿರುತ್ತದೆ. ಬ್ರೇಕಪ್ ಎನ್ನುವ ಪದವನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಿದ ನಂತರ, ಅಮಾವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದು ಕಥಾಹಂದರ. ಮೊದಲೇ ಹೇಳಿದಂತೆ ಈ ಹಂತದಲ್ಲಿ ಬರುವ ಹಲವು ಘಟನೆಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿದೆ.
ಮುಖ್ಯವಾಗಿ ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್. ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ನಿರ್ದೇಶಕರು ಯೋಚಿಸುವ ಮೂಲಕ ಹೊಸದನ್ನು ಹೇಳಲು ಪ್ರಯತ್ನಿಸಿದ್ದಾರೆ. ಸಿನಿಮಾದ ನಿರೂಪಣೆ ಇನ್ನಷ್ಟು ಬಿಗಿಯಾಗಿದ್ದರೆ ಕಥೆಗೆ ಹೆಚ್ಚಿನ ಓಘ ಸಿಗುತ್ತಿತ್ತು. ನಾಯಕ ವಿಶಾಲ್ ಹಾಗೂ ನಾಯಕಿ ವಿಹಾನಿ ಈ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಆರ್.ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.