Aparoopa Movie Review: ಅಪರೂಪದ ಜೋಡಿಯ ಪ್ರೇಮ್ ಕಹಾನಿ
Team Udayavani, Jul 15, 2023, 1:16 PM IST
ಪ್ರೀತಿಯ ನಡುವೆ ಅಹಂ ಬಂದಾಗ ಏನಾಗುತ್ತದೆ, ಕೋಪದ ಕೈಗೆ ಬುದ್ಧಿ ಕೊಟ್ಟಾಗ ಅದು ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ, ಇದರಿಂದ ಯುವ ಜೋಡಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಈ ವಾರ “ಅಪರೂಪ’ ಚಿತ್ರ ತೆರೆಗೆ ಬಂದಿದೆ.
ಇದೊಂದು ಅಪ್ಪಟ ಲವ್‌ಸ್ಟೋರಿ. ನಿರ್ದೇಶಕ ಮಹೇಶ್ ಬಾಬು ನವಜೋಡಿಗಳನ್ನಿಟ್ಟುಕೊಂಡು ಒಂದು ಕ್ಯೂಟ್ ಲವ್‌ಸ್ಟೋರಿಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿರುವುದರಿಂದ ನಾಯಕನ ಇಂಟ್ರೋಡಕ್ಷನ್, ಖಡಕ್ ಡೈಲಾಗ್, ರಗಡ್ ಫೈಟ್, ಕಲರ್‌ಫುಲ್ ಸಾಂಗ್… ಹೀಗೆ ಎಲ್ಲಾ ಅಂಶಗಳೊಂದಿಗೆ “ಅಪರೂಪ’ ಮೂಡಿಬಂದಿದೆ.
ಚಿತ್ರದ ಒನ್‌ಲೈನ್ ಬಗ್ಗೆ ಹೇಳುವುದಾದರೆ ಜವಾಬ್ದಾರಿ ಇಲ್ಲದೇ ತಿರುಗಾಡಿ ಕೊಂಡಿರುವ ಹುಡುಗ ಒಂದು ಕಡೆಯಾದರೆ, ಶ್ರೀಮಂತ ಕುಟುಂಬ ಹುಡುಗಿ ಇನ್ನೊಂದು ಕಡೆ… ಇವರಿಬ್ಬರ ಮಧ್ಯೆ ಚಿಗುರುವ ಪ್ರೀತಿ ಮುಂದೆ ಹಲವು ಆಯಾಮಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಾದಿಯಲ್ಲಿ ಸಾಕಷ್ಟು ಟ್ವಿಸ್ಟ್ ಟರ್ನ್ಗಳು ಬಂದು ಹೋಗುತ್ತವೆ. ಅದೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಲವ್‌ಸ್ಟೋರಿಯಾದರೂ ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮಾ. ಯಾವುದೇ ಅಶ್ಲೀಲ ಅಂಶಗಳಿಲ್ಲದಿರುವುರಿಂದ ಚಿತ್ರವನ್ನು ಕುಟುಂಬ ಸಮೇತ ಕುಳಿತು ನೋಡಬಹುದು.
“ಅಪರೂಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ನಾಯಕ-ನಾಯಕಿ ಪರಿಚಯವಾಗಿದ್ದಾರೆ. ಚಿತ್ರದಲ್ಲಿ ಸುಘೋಷ್ ನಾಯಕ. ನಟನೆಯಲ್ಲಿ ಇನ್ನೊಂದಿಷ್ಟು ಪಳಗಬೇಕಿದೆ ಎನ್ನುವುದು ಬಿಟ್ಟರೆ ಆ್ಯಕ್ಷನ್, ಡ್ಯಾನ್ಸ್‌ನಲ್ಲಿ ಮಿಂಚುವ ಸುಘೋಷ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಹೃತಿಕಾ ಸರಳ ಸುಂದರಿ. ನಟನೆ ಹಾಗೂ ಗ್ಲಾಮರ್ ಎರಡರಲ್ಲೂ ಹೃತಿಕಾ ಸ್ಕೋರ್ ಮಾಡುತ್ತಾರೆ. ಉಳಿದಂತೆ ಚಿತ್ರದಲ್ಲಿ ಅರುಣಾ ಬಾಲರಾಜ್, ಅವಿನಾಶ್, ಅಶೋಕ್, ಕುರಿಪ್ರತಾಪ್ ಸೇರಿದಂತೆ ಇತತರು ನಟಿಸಿದ್ದಾರೆ. ಚಿತ್ರದ ಹಾಡುಗಳು ಹಾಗೂ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.