Appa I Love You Review; ತಂದೆ-ಮಗನ ಭಾವ ಲಹರಿ
Team Udayavani, Apr 13, 2024, 11:19 AM IST
ಕಷ್ಟಪಟ್ಟು ಸಾಕಿ ಬೆಳೆಸಿದ ಮಕ್ಕಳು, ದೊಡ್ಡವರಾದ ಮೇಲೆ ಪೋಷಕರನ್ನು ಕಡೆಗಣಿಸಿದರೆ ಅವರ ಪರಿಸ್ಥಿತಿ ಏನಾಗುತ್ತದೆ, ಇದಕ್ಕೆ ಪಾಲಕರು ಏನು ಮಾಡ ಬಹುದು, ಇಂತಹ “ಭಾವನಾತ್ಮಕ’ ಸಂಕಷ್ಟಕ್ಕೆ ಪರಿಹಾರ ಎಂಬುದೇ ಇಲ್ಲವೇ… ಇಂತಹ ಒಂದು ಗಂಭೀರ ವಿಚಾರವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಅಪ್ಪಾ ಐ ಲವ್ ಯು’. ಹೆಸರಿಗೆ ತಕ್ಕಂತೆ ಇದು ತಂದೆ-ಮಗನ ನಡುವೆ ನಡೆಯುವ ಕಥೆ.
ನಿರ್ದೇಶಕ ಅಥರ್ವ್ ಆರ್ಯ ಇವತ್ತಿನ ಸಮಾಜದಲ್ಲಿ ಹಲವು ತಂದೆ-ತಾಯಂದಿರು ಅನುಭವಿಸುತ್ತಿರುವ ಸಂಕಟದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಕಾರಣದಿಂದ ಸಿನಿಮಾ ಹೆಚ್ಚು ಆಪ್ತವಾಗುತ್ತಾ, ಭಾವನಾತ್ಮಕವಾಗಿ ಕಾಡುತ್ತಾ ಸಾಗುತ್ತದೆ. ಮುಖ್ಯವಾಗಿ ನಿರ್ದೇಶಕರು ಸಿನಿಮಾ ಆರಂಭದಿಂದಲೇ ಕಥೆಗೆ ಹೆಚ್ಚು ಮಹತ್ವ ಕೊಟ್ಟು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ, ಚಿತ್ರ ಒಂದಷ್ಟು ಕುತೂಹಲ ಹಾಗೂ ಟ್ವಿಸ್ಟ್‌ಗಳೊಂದಿಗೆ ಸಾಗುತ್ತದೆ.
ಮೊದಲೇ ಹೇಳಿದಂತೆ ಇಲ್ಲಿ ಕಥೆಗೆ ಹೆಚ್ಚು ಮಹತ್ವ ಕೊಟ್ಟಿದ್ದು, ಹೀರೋ, ಹೀರೋಯಿನ್, ಆ್ಯಕ್ಷನ್, ಕಾಮಿಡಿ.. ಇಂತಹ ಸಿದ್ಧಸೂತ್ರಗಳಿಂದ ಮುಕ್ತವಾಗಿ ಕಂಟೆಂಟ್‌ಗೆ ಹೆಚ್ಚು ಗಮನ ಕೊಡಲಾಗಿದೆ. ಒಬ್ಬ ತಂದೆ, ತನ್ನ ಮಗನಿಗಾಗಿ ಹೇಗೆಲ್ಲಾ ಕಷ್ಟಪಡುತ್ತಾನೆ, ಕೊನೆಗೆ ಆ ಪುತ್ರನ ವರ್ತನೆ ಹೇಗಿರುತ್ತದೆ, ಅದರಿಂದ ಒಂದು ಸಂಸಾರದಲ್ಲಿ ಹೇಗೆ ಬಿರುಗಾಳಿ ಬೀಸುತ್ತದೆ ಎಂಬುದು ಸಿನಿಮಾದ ಕಥಾಹಂದರ.
ತಾನು ಏನು ಹೇಳಬೇಕೆಂಬ ಸ್ಪಷ್ಟತೆ ನಿರ್ದೇಶಕರಿಗೆ ಇದ್ದ ಕಾರಣ ಸಿನಿಮಾ ಯಾವುದೇ ಗೊಂದಲವಿಲ್ಲದೇ ಮೂಡಿಬಂದಿದೆ. ಚಿತ್ರದಲ್ಲಿ ಒಂದಷ್ಟು ಯೋಚಿಸುವ ವಿಚಾರಗಳಿರುವುದು ಈ ಸಿನಿಮಾದ ಪ್ಲಸ್. ಇಡೀ ಸಿನಿಮಾದ ಕಥೆ ಸಾಗುವುದು ತಬಲ ನಾಣಿ ಅವರ ಸುತ್ತ. ಮಗನಿಗಾಗಿಯೇ ತನ್ನ ಜೀವನ ಮುಡಿಪಾಗಿಟ್ಟ ತಂದೆಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದ ಕಾಮಿಡಿ ಬಯಸುವವರಿಗೆ ಅವರು “ಸೆಂಟಿಮೆಂಟ್’ ದರ್ಶನ ಮಾಡಿಸಿದ್ದಾರೆ.
ಚಿತ್ರದಲ್ಲಿ ಪ್ರೇಮ್ ಹಾಗೂ ಮಾನ್ವಿತಾ ಕೆಲವೇ ಕೆಲವು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಉಳಿದಂತೆ ಸಂಜಯ್, ಜೀವಿತಾ, ಅರವಿಂದ್ ರಾವ್, ಬಲರಾಜವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.