ಅಪ್ಪಟ ಪ್ರೇಮಿಯೊಬ್ಬನ ಆತ್ಮಕಥೆ

ಚಿತ್ರ ವಿಮರ್ಶೆ

Team Udayavani, Feb 1, 2020, 7:06 AM IST

kanadante

“ಇಷ್ಟು ದಿನ ಅದು ಅವರ ಮನೆ, ಇನ್ನು ಮುಂದೆ ಅದು ನನ್ನ ಮನೆ…’ ಹೀಗೆ ಹೇಳಿ ವಿಲನ್‌ಗೆ ಟಕ್ಕರ್‌ ಕೊಡುತ್ತಾನೆ ನಾಯಕ ರಮ್ಮಿ. ವಿಲನ್‌ ಜಯಣ್ಣನ ಬಹುತೇಕ ಎಲ್ಲಾ ಕೆಲಸಗಳಲ್ಲಿ ಬಲಗೈ ಬಂಟನಂತಿದ್ದ ರಮ್ಮಿ ಏಕಾಏಕಿ ಹೀಗೆ ಹೇಳಲು ಕಾರಣವೇನೆಂದು ಜಯಣ್ಣ ತಲೆಕೆಡಿಸಿಕೊಂಡಾಗ ಆತನಿಗೆ “ರಮ್ಮಿ ಇನ್‌ ಲವ್‌’ ಎಂದು ಗೊತ್ತಾಗುತ್ತದೆ. ಮುಂದೆ ಆಗೋದು “ಪ್ರೇಮಯುದ್ಧ’. ಅದೇನೆಂಬುದನ್ನು ನೀವು ತೆರೆಯ ಮೇಲೆಯೇ ನೋಡಿ.

“ಕಾಣದಂತೆ ಮಾಯವಾದನು’ ಒಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ. ಇಲ್ಲಿ ಪ್ರೀತಿ ಇದೆ, ದ್ವೇಷವಿದೆ, ಕಾಮಿಡಿ ಇದೆ, ಜೊತೆಗೆ ಆತ್ಮದ ಸಂಕಟವೂ ಇದೆ. ಲವ್‌ಸ್ಟೋರಿಯಲ್ಲಿ ಆತ್ಮ ಹೇಗೆ ಸೇರಿಕೊಂಡಿತು ಎಂದು ನಿಮಗೆ ಆಶ್ಚರ್ಯವಾಗಬಹುದು. ಅದೇ ಈ ಸಿನಿಮಾದ ಪ್ಲಸ್‌. ರೆಗ್ಯುಲರ್‌ ಲವ್‌ಸ್ಟೋರಿಗಿಂತ ಈ ಸಿನಿಮಾ ಕೊಂಚ ಭಿನ್ನವಾಗಿ ಕಾಣಲು ಕಾರಣ ಆ ಆತ್ಮದ ಕಥೆ. ಹಾಗಂತ ಕನ್ನಡಕ್ಕೆ ಆತ್ಮದ ಕಥೆ ತೀರ ಹೊಸದಲ್ಲ.

ಆತ್ಮವೊಂದು ಮತ್ತೂಬ್ಬರ ದೇಹ ಸೇರಿಕೊಂಡು ಸೇಡು ತೀರಿಸೋದು, ತನ್ನ ಪ್ರೀತಿ ಪಾತ್ರರ ಹಿಂದೆ ಸುತ್ತೋದು ಹೊಸದೇನಲ್ಲ. ಈ ಚಿತ್ರದಲ್ಲೂ ಅಂತಹದ್ದೇ ಸಾಕಷ್ಟು ಅಂಶಗಳಿವೆ. ಆದರೆ, ನಿರೂಪಣಾ ಶೈಲಿ ಭಿನ್ನವಾಗಿದೆ. ಕೇವಲ ಲವ್‌ಸ್ಟೋರಿ ಹಾಗೂ ಆತ್ಮದ ಆಟವನ್ನಷ್ಟೇ ತೋರಿಸಿದರೆ ಬೋರಾಗಬಹುದು ಎಂಬುದು ನಿರ್ದೇಶರಿಗೆ ಗೊತ್ತಾಗಿದೆ. ಅದೇ ಕಾರಣದಿಂದ ಚಿತ್ರದಲ್ಲಿ ಆ್ಯಕ್ಷನ್‌ಗೂ ಹೆಚ್ಚಿನ ಜಾಗ ಕೊಟ್ಟಿದ್ದಾರೆ.

ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಏನೇನು ಇರಬೇಕೋ, ಆ ಎಲ್ಲಾ ಅಂಶಗಳನ್ನು ಸೇರಿಸಿ “ಕಾಣದಂತೆ ಮಾಯವಾದನು’ ಚಿತ್ರ ಕಟ್ಟಿಕೊಡಲಾಗಿದೆ. ಇಲ್ಲಿ ಆತ್ಮವಿದ್ದರೂ ರೆಗ್ಯುಲರ್‌ ಹಾರರ್‌ ಸಿನಿಮಾಗಳ ಶೈಲಿ ಇಲ್ಲ. ಇಲ್ಲಿ ಯಾರೂ ಕಿಟಾರನೇ ಕಿರುಚೋದಾಗಲಿ, ಬಾಗಿಲುಗಳು ಏಕಾಏಕಿ ಬಡಿದುಕೊಳ್ಳುವುದಾಗಲಿ, ಕುರ್ಚಿಯೊಂದು ಅಲ್ಲಾಡುವುದಾಗಲೀ ಆಗೋದಿಲ್ಲ. ಇದು ಅದರಾಚೆಗಿನ ಹಾರರ್‌ ಟಚ್‌ ಇರುವ ಸಿನಿಮಾ.

ಚಿತ್ರದಲ್ಲಿ ಬರುವ ಒಂದಷ್ಟು ಟ್ವಿಸ್ಟ್‌ಗಳು ಸಿನಿಮಾವನ್ನು ಚುರುಕುಗೊಳಿಸಿವೆ. ಅದರಲ್ಲೂ ಹಾಸ್ಯನಟ ಧರ್ಮಣ್ಣ ಎಂಟ್ರಿ ನಂತರ ಚಿತ್ರಕ್ಕೊಂದು ಹೊಸ ಆಯಾಮ ಸಿಗುತ್ತದೆ. ಹಾಗೆ ನೋಡಿದರೆ ಸಿನಿಮಾದ ನಿಜವಾದ ಜೀವಾಳ ಕೂಡಾ ಇದೇ ಅಂಶ ಎನ್ನಬಹುದು. ಲವ್‌ಸ್ಟೋರಿ ಜೊತೆಗೆ ಇವತ್ತಿನ ಸಮಾಜದ ಹಲವು ವಿಚಾರಗಳನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ. ರೌಡಿ ಶೀಟರ್‌ ಒಬ್ಬ ಸ್ವಾಮಿಯಾಗಿ ಜನರನ್ನು ಯಾಮಾರಿಸೋದು, ರಾಜಕಾರಣಿಯೊಬ್ಬನ ದುಡ್ಡು ಆ ನಕಲಿ ಸ್ವಾಮಿ ಬಳಿ ಇರೋದು, ಅನಾಥ ಮಕ್ಕಳ ಕಾಳಜಿ ಸೇರಿದಂತೆ ಹಲವು ಅಂಶಗಳು ಸಿನಿಮಾದಲ್ಲಿವೆ.

ಚಿತ್ರದಲ್ಲಿ ನಾಯಕ ವಿಕಾಸ್‌ ಪ್ರೇಮಿಯಾಗಿ, ಆ್ಯಕ್ಷನ್‌ ಹೀರೋ ಆಗಿ, ಆರಂಭದಲ್ಲಿ ನೆಗೆಟೀವ್‌ ಶೇಡ್‌ … ಹೀಗೆ ವಿಭಿನ್ನ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಲು ವಿಕಾಸ್‌ ಪ್ರಯತ್ನಿಸಿದರೂ ಲವರ್‌ ಬಾಯ್‌ ಆಗುವಲ್ಲಿ ಇನ್ನಷ್ಟು ದೂರ ಸಾಗಬೇಕು. ನಾಯಕಿ ಸಿಂಧು ಲೋಕನಾಥ್‌ ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಮೊದಲಾರ್ಧ ಉದಯ್‌ ಹಾಗೂ ದ್ವಿತೀಯಾರ್ಧ ಲೋಕಿ ಅಬ್ಬರಿಸಿದ್ದಾರೆ. ಇನ್ನು, ಅಚ್ಯುತ್‌, ಸುಚೇಂದ್ರ ಪ್ರಸಾದ್‌, ಧರ್ಮಣ್ಣ ಸೇರಿದಂತೆ ಇತರರು ನಟಿಸಿದ್ದಾರೆ.

ಚಿತ್ರ: ಕಾಣದಂತೆ ಮಾಯವಾದನು
ನಿರ್ಮಾಣ: ಚಂದ್ರ ಶೇಖರ್‌ ನಾಯ್ಡು, ಸೋಮ್‌ ಸಿಂಗ್‌
ನಿರ್ದೇಶನ: ರಾಜ್‌ ಪತಿಪಾಟಿ
ತಾರಾಗಣ: ವಿಕಾಸ್‌, ಸಿಂಧು, ಅಚ್ಯುತ್‌, ಧರ್ಮಣ್ಣ, ಸುಚೇಂದ್ರ ಪ್ರಸಾದ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Hagga movie review

Hagga movie review: ರೋಚಕ ರಹಸ್ಯದ ಕಥಾನಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.