“ಬೆಂಗಳೂರು 69” ವಿಮರ್ಶೆ: ಕಿಡ್ನ್ಯಾಪ್ ವೊಂದರ ಜಾಡು ಹಿಡಿದು..
Team Udayavani, Feb 12, 2023, 3:27 PM IST
ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳು ಬಂದಿವೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ, ಪ್ರೇಕ್ಷಕರನ್ನು ಹಿಡಿದಿಡಬೇಕೆಂಬ ಉದ್ದೇಶ ಈ ಜಾನರ್ ಸಿನಿಮಾಗಳದ್ದು. ಈಗ ಇದೇ ಸಾಲಿಗೆ ಈ ಸೇರುವ ಚಿತ್ರ “ಬೆಂಗಳೂರು 69′.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ,ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತದೆ. ಇದೇ ಅಂಶವನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲೊಂದು ಕಿಡ್ನಾಪ್ ಇದೆ. ಆ ಕಿಡ್ನಾಪ್ ಯಾಕಾಗುತ್ತದೆ? ಕಿಡ್ನಾಪ್ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್. ಅಷ್ಟಕ್ಕೂ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ನೀವು “ಬೆಂಗಳೂರು 69′ ಸಿನಿಮಾ ನೋಡಬಹುದು.
ಇಡೀ ಸಿನಿಮಾ ಐದು ಪಾತ್ರಗಳ ಸುತ್ತ ಸಾಗುತ್ತದೆ. ಈ ಪಾತ್ರಗಳೇ ಸಿನಿಮಾದ ಹೈಲೈಟ್ ಕೂಡಾ. ಇನ್ನು, ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್-ಟರ್ನ್ಗಳಿದ್ದು, ಇದೇ ಸಿನಿಮಾದ ಜೀವಾಳ ಎಂದರೆ ತಪ್ಪಲ್ಲ. ಈ ಚಿತ್ರಕ್ಕೆ ಇಂಟರ್‌ನ್ಯಾಶನಲ್ ಕ್ರೈಮ್‌ನ ಟಚ್‌ಕೂಡಾ ನೀಡಲಾಗಿದೆ. ಚಿತ್ರದಲ್ಲಿ ಪವನ್ ಶೆಟ್ಟಿ, ಅನಿತಾ ಭಟ್ ಸೇರಿದಂತೆ ಇತರರು ನಟಿಸಿದ್ದು, ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ನಟಿ ಅನಿತಾ ಭಟ್ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.