‘ಬಾಂಡ್ ರವಿ’ ಚಿತ್ರ ವಿಮರ್ಶೆ: ಸೆಟ್ಲಮೆಂಟ್‌ ಹುಡುಗನ ಸೆಂಟಿಮೆಂಟ್‌!


Team Udayavani, Dec 10, 2022, 3:54 PM IST

‘ಬಾಂಡ್ ರವಿ’ ಚಿತ್ರ ವಿಮರ್ಶೆ: ಸೆಟ್ಲಮೆಂಟ್‌ ಹುಡುಗನ ಸೆಂಟಿಮೆಂಟ್‌!

ಆತ ಕಾಸಿಲ್ಲದೇ ಕನೆಕ್ಟ್ ಆಗುವ ವ್ಯಕ್ತಿಯಲ್ಲ, ಸೆಂಟಿಮೆಂಟ್‌ಗಿಂತ ಸೆಟ್ಲಮೆಂಟ್‌ ಮುಖ್ಯ ಎಂಬ “ಕಮಿಟ್‌ಮೆಂಟ್‌’ನೊಂದಿಗೆ ಬದುಕುತ್ತಿರುವ ಹುಡುಗ..ಇಂತಹ ರಗಡ್‌ ಹುಡುಗನ ದಿಲ್‌ಗೊಂದು ಪ್ರೀತಿಯ ಸಿಂಚನ, ಅಲ್ಲಿಂದ “ಬಿಸಿ’ ರಕ್ತ ಕೂಲ್‌ ಕೂಲ್‌… ಹೀಗೆ “ತಂಪಾಗಿ’ ಪ್ರೀತಿಯ ಅಮಲಿನಲ್ಲಿ ಇರುವ ಆತನ ಹಿಂದೊಂದು ಸಂಚು, ಹೊಂಚು… ಕ್ಲೈಮ್ಯಾಕ್ಸ್‌ನಲ್ಲೊಂದು ಬಿಗ್‌ ಟ್ವಿಸ್ಟ್‌….

ಈ ವಾರ ತೆರೆಕಂಡಿರುವ “ಬಾಂಡ್‌ ರವಿ’ ಆ್ಯಕ್ಷನ್‌ ಇಮೇಜ್‌ ನೊಂದಿಗೆ ಆರಂಭವಾಗಿ ಲವ್‌ಸ್ಟೋರಿ ಮೂಲಕ ಕೊನೆಯಾಗುವ ಸಿನಿಮಾ. ಒಂದು ಮಾಸ್‌ ಸಿನಮಾದಲ್ಲಿ ಏನೆಲ್ಲಾ ಇರಬೇಕೋ, ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿದೆ. ಮಾಸ್‌ ಎಂಟ್ರಿ, ಫೈಟ್‌, ಹಾಡು.. ಹೀಗೆ ಎಲ್ಲವೂ “ಬಾಂಡ್‌ ರವಿ’ಯಲ್ಲಿದೆ. ಕಥೆಯ ವಿಚಾರಕ್ಕೆ ಬರುವುದಾದರೆ ಮಾಸ್‌ ಕಥೆಗೆ ಲವ್‌ ಟಚ್‌ ಕೊಡಲಾಗಿದೆ.

ಮೊದಲರ್ಧ ಸಿನಿಮಾ ಜೈಲು, ಗಲಾಟೆ, ಸೆಟ್ಲಮೆಂಟ್‌ಗಳಲ್ಲಿ ಸಾಗಿದರೆ, ಸಿನಿಮಾದ ನಿಜವಾದ ಜೀವಾಳ ದ್ವಿತೀಯಾರ್ಧ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್‌. ಆರಂಭದಲ್ಲಿ ಪ್ರೇಕ್ಷಕನ ಊಹೆಗೆ ತಕ್ಕಂತೆ ಸಿನಿಮಾ ಸಾಗಿದರೆ, ಚಿತ್ರದ ಕ್ಲೈಮ್ಯಾಕ್ಸ್‌ ಮಾತ್ರ ಭಿನ್ನವಾಗಿದೆ. ಆ ಮಟ್ಟಿಗೆ ನಿರ್ದೇಶಕರ ಶ್ರಮವನ್ನು ಮೆಚ್ಚಬಹುದು.

ಕೆಲವೇ ಕೆಲವು ಲೊಕೇಶನ್‌ಗಳಲ್ಲಿ ಈ ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಸಿನಿಮಾ ಒಂದೇ ಕಡೆ ಸುತ್ತಿದಂತೆ ಭಾಸವಾಗುತ್ತದೆ. ಆರಂಭದಲ್ಲಿ ಬರುವ ಒಂದಷ್ಟು ಜೈಲು ದೃಶ್ಯಗಳಿಗೆ ಕತ್ತರಿ ಹಾಕಿ, ಸಿನಿಮಾದ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಹೈಲೈಟ್‌ಗಳಲ್ಲಿ ಸಂಭಾಷಣೆ ಕೂಡಾ ಒಂದು. ಮಾಸ್‌ ಸಿನಿಮಾಗಳಿಗೆ ಬೇಕಾದ ಪಂಚಿಂಗ್‌ ಡೈಲಾಗ್‌ ಮೂಲಕ ಸಿನಿಮಾದ “ಖದರ್‌’ ಹೆಚ್ಚಿಸಲು ಪ್ರಯತ್ನಿಸಿದ್ದಾರೆ.

ನಾಯಕ ಪ್ರಮೋದ್‌ ಮತ್ತೂಮ್ಮೆ ತಾನು ಭವಿಷ್ಯದ ಮಾಸ್‌ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. ರಗಡ್‌ ಲುಕ್‌ನಲ್ಲಿ ಅವರ ಮ್ಯಾನರಿಸಂ, ಡೈಲಾಗ್‌ ಡೆಲಿವರಿ ಶೈಲಿ ಎಲ್ಲವೂ “ಮಾಸ್‌’ ಇಮೇಜ್‌ಗೆ ಒತ್ತು ನೀಡುವಂತಿದೆ. ನಾಯಕಿ ಕಾಜಲ್‌ ಕುಂದರ್‌ ಕ್ಲೈಮ್ಯಾಕ್ಸ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಶೋಭರಾಜ್‌, ರವಿಕಾಳೆ ಸೇರಿದಂತೆ ಇತರರು ನಟಿಸಿದ್ದಾರೆ. ಒಂದು ಮಾಸ್‌ ಲವ್‌ಸ್ಟೋರಿ ಇಷ್ಟಪಡುವವರಿಗೆ ಬಾಂಡ್‌ ರವಿ ಮೆಚ್ಚುಗೆಯಾಗಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.