C Movie Reciew; ಭಾವನೆ ಅರಳಿಸುವ ಬಾಂಧವ್ಯ
Team Udayavani, Aug 24, 2024, 12:15 PM IST
ಚಂದನವನದಲ್ಲಿ ಹೊಸ ಪ್ರತಿಭೆಗಳಿಗೇನು ಕಮ್ಮಿ ಇಲ್ಲ. ದೊಡ್ಡ ಚಿತ್ರಗಳ ನಡುವೆಯೂ ಅಲ್ಲಲ್ಲಿ ಬರುವ ಹೊಸಬರ ಸಿನಿಮಾಗಳು ತಮ್ಮ ಕಥೆಗಳಿಂದ ಸದ್ದು ಮಾಡುತ್ತಿವೆ. ಕಥೆ ಸರಳವಾಗಿದ್ದರೂ ಅದನ್ನು ಭಿನ್ನ, ವಿಶೇಷವಾಗಿ ನಿರೂಪಿಸುವ ಖಯಾಲಿ ಹೊಸ ಪೀಳಿಗೆಯ ನಿರ್ದೇಶಕರದ್ದು. ಹೀಗೆ ಕನ್ನಡಕ್ಕೆ ಬಂದ ಹೊಸ ಕಥೆಯೇ “ಸಿ’.
ಅವರಿಬ್ಬರು ತಂದೆ ಮಗಳಲ್ಲ. ಆದರೂ ಆತ ಕಣ್ಣ ರೆಪ್ಪೆಯಂತೆ ಆಕೆಯನ್ನು ಜೋಪಾನ ಮಾಡುತ್ತಾನೆ. ಈಕೆಯೂ ಮಗಳಂತೆ ಅಕ್ಕರೆ ತೋರುತ್ತಾಳೆ. ಇವರಿಬ್ಬರ ಭೇಟಿ ಆಕಸ್ಮಿಕ. ದೃಷ್ಟಿ ಕಳೆದುಕೊಂಡ ಮಗುವೊಂದನ್ನು ಹೆತ್ತವರಿಗಿಂತ ಹೆಚ್ಚಾಗಿ ಸಾಕಿ ಸಲಹುತ್ತಾನೆ. ಅವಳಿಗೆ ದೃಷ್ಟಿ ಮರಳಿಸಲು ಆತ ಪಡುವ ಪಾಡು ಅಷ್ಟಿಷ್ಟಲ್ಲ. ಅಷ್ಟಕ್ಕೂ ಆತ ಯಾರು? ಆ ಮಗು ಯಾರು? ಎಂದು ತಿಳಿಯಲು “ಸಿ’ ಚಿತ್ರ ನೋಡಬೇಕು. “ಸಿ’ ಶೀರ್ಷಿಕೆಯಿಂದಲೇ ಈ ಚಿತ್ರ ಹೊಸತೆನಿಸುತ್ತದೆ. ಇಲ್ಲಿ ತಂದೆ-ಮಗಳ ಬಾಂಧವ್ಯವಿದೆ, ಕಥೆ ಸಾಗುತ್ತಿದ್ದಂತೆ ಮುಂದೆನಾಗುತ್ತದೆ ಎಂಬ ಕುತೂಹಲ ಅಂಶಗಳಿವೆ, ಮನ ತಟ್ಟುವ ಕಥೆ, ಅದಕ್ಕೆ ತಕ್ಕ ಅಭಿನಯವೂ ಇದೆ. ಮೆಡಿಕಲ್ ಮಾಫಿಯಾ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ ಈ ಚಿತ್ರ.
ನಿರ್ದೇಶನ ಹಾಗೂ ನಾಯಕ ನಟ ಎರಡೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿರುವ ಕಿರಣ್ ಸುಬ್ರಮಣಿ ಭರವಸೆ ಮೂಡಿಸಿದ್ದಾರೆ. ಬಾಲನಟಿ ಸಾನ್ವಿಕಾ ಅಭಿನಯ ಚಿತ್ರದ ಇನ್ನೊಂದು ಹೈಲೈಟ್. ಎ.ಬಿ. ಮುರಳೀಧರನ್ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಗಮನ ಸೆಳೆಯುತ್ತವೆ. ಉಳಿದಂತೆ ಪ್ರಶಾಂತ್ ನಟನ, ಶ್ರೀಧರ ರಾಮ್ ಮಧುಮಿತಾ, ನಿರ್ಮಲಾ, ಆರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.