‘ಚೇಸ್’ ಚಿತ್ರ ವಿಮರ್ಶೆ: ಬೆನ್ನಟ್ಟಿ ಬೇಟೆಯಾಡುವ ಥ್ರಿಲ್ಲಿಂಗ್‌ ಸ್ಟೋರಿ


Team Udayavani, Jul 17, 2022, 2:22 PM IST

chase movie review

ಮಧ್ಯರಾತ್ರಿ ವೇಳೆಯಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಭೀಕರ ಅಪಘಾತವೊಂದು ನಡೆಯುತ್ತದೆ. ನಂತರ ನೋಡಿದರೆ, ಅಪಘಾತಕ್ಕೆ ಒಳಗಾದ ವ್ಯಕ್ತಿಯೇ ನಾಪತ್ತೆ! ಘಟನೆಯ ಸ್ಥಳದಲ್ಲಿದ್ದ ಕೆಲವೇ ಕೆಲವರಿಗೆ ಕೂಡ ಈ ಅಪಘಾತ ಘಟನೆ ಅಸ್ಪಷ್ಟ ಚಿತ್ರಣ. ಹಾಗಾದರೆ, ನಿಜಕ್ಕೂ ಆ ರಾತ್ರಿ ನಡೆದಿದ್ದೇನು? ಅಪಘಾತ ಮಾಡಿದರು ಯಾರು? ಅಪಘಾತಕ್ಕೆ ಒಳಗಾದವರು ಏನಾದರು? ಇದರ ತನಿಖೆಯ ಹಿಂದೆ ಬೀಳುವ ಸಿಸಿಬಿ ಇನ್ಸ್‌ಪೆಕ್ಟರ್‌ ಅವಿನಾಶ್‌ಗೆ ಈ ಘಟನೆಯ ಹಿಂದಿನ ಒಂದೊಂದೆ ಎಳೆ ತೆರೆದುಕೊಳ್ಳುತ್ತದೆ. ಅಂತಿಮವಾಗಿ ಈ ಅಪಘಾತದ ಹಿಂದಿನ ಕಾರಣ ಯಾವುದು ಅನ್ನೋದು ಕ್ಲೈಮ್ಯಾಕ್ಸ್‌ ವೇಳೆಗೆ ರಿವೀಲ್‌ ಆಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಚೇಸ್‌’ ಸಿನಿಮಾದ ಕಥಾಹಂದರ.

ಸಿನಿಮಾದ ಟೈಟಲ್ಲೇ ಹೇಳುವಂತೆ, ನಡೆಯುವ ಅಪರಾಧ ಘಟನೆಯೊಂದನ್ನು ತನಿಖೆಯ ಮೂಲಕ ಹೇಗೆಲ್ಲ “ಚೇಸ್‌’ ಮಾಡುತ್ತ ಕಥೆ ಸಾಗುತ್ತದೆ ಅನ್ನೋದೇ “ಚೇಸ್‌’ ಸಿನಿಮಾ.

ಒಂದು ಅಪಘಾತ, ಮೆಡಿಕಲ್‌ ಮಾಫಿಯಾ, ವೈಟ್‌ ಕಾಲರ್‌ ಕ್ರೈಂ, ಪೊಲೀಸ್‌ ತನಿಖೆ, ವ್ಯವಸ್ಥೆಯ ಲೋಪ ಎಲ್ಲವನ್ನೂ ಜೋಡಿಸಿ ಒಂದು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಸಿನಿಮಾವನ್ನು ಕುತೂಹಲಭರಿತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಲೋಕ್‌ ಶೆಟ್ಟಿ. ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಸಿನಿಮಾಗಳಲ್ಲಿ ಕಥೆಯನ್ನು ಹೇಳುವ ರೀತಿ ಮತ್ತು ವೇಗ ಎರಡೂ ಕೂಡ ತುಂಬ ಮುಖ್ಯವಾಗಿರುತ್ತದೆ. ಅದನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ “ಚೇಸ್‌’ ಯಶಸ್ವಿಯಾಗಿದೆ. ಸಿನಿಮಾದ ನಿರೂಪಣೆ ಗಂಭೀರವಾಗಿ ಸಾಗುವುದರಿಂದ ಬಹುತೇಕ ಪಾತ್ರಗಳು ಗಂಭೀರವಾಗಿಯೇ ಪ್ರೇಕ್ಷಕರ ಮುಂದೆ ಬರುತ್ತವೆ.

ಅವಿನಾಶ್‌ ನರಸಿಂಹರಾಜು, ರಾಧಿಕಾ ನಾರಾಯಣ್‌, ಶೀತಲ್‌ ಶೆಟ್ಟಿ, ಅರ್ಜುನ್‌ ಯೋಗೇಶ್‌, ಅರವಿಂದ್‌ ರಾವ್‌, ರಾಜೇಶ್‌ ನಟರಂಗ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಕಾಮಿಡಿಗಾಗಿಯೇ ಅರವಿಂದ್‌ ಬೋಳಾರ್‌ ಪಾತ್ರವನ್ನು ಸೃಷ್ಟಿಸಿ, ತೆರೆಮೇಲೆ ತಂದಂತಿದೆ.

ಉಳಿದಂತೆ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ, ತಾಂತ್ರಿಕ ಕಾರ್ಯಗಳು ತೆರೆಮೇಲೆ “ಚೇಸ್‌’ ಸಿನಿಮಾವನ್ನು ಗುಣಮಟ್ಟದಲ್ಲಿ ಕಾಣುವಂತೆ ಮಾಡಿದೆ. ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ “ಚೇಸ್‌’ ನಿಂದ ಖಂಡಿತವಾಗಿಯೂ ಒಂದಷ್ಟು ಮನರಂಜನೆ ಸಿಗಬಹುದು

 ಜಿ.ಎಸ್‌.ಕಾರ್ತಿಕ ಸುಧನ್

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.