Diamond Cross Movie Review; ಸೈಬರ್ ಬಲೆಯೊಳಗೆ ಹ್ಯಾಕರ್ಸ್ ಹುಡುಕಾಟ
Team Udayavani, Jul 30, 2023, 10:29 AM IST
ಇಂದು ಜಗತ್ತು ಸಂಪೂರ್ಣ ಆನ್ ಲೈನ್ ಮಯವಾಗುತ್ತಿದೆ. ತಂತ್ರಜ್ಞಾನ ಕ್ರಾಂತಿಯ ಉಪಯೋಗ ಪಡೆಯುವವರು ಒಂದೆಡೆಯಾದರೆ, ಅದನ್ನು ದುರುಪಯೋಗಪಡಿಸಿಕೊಳ್ಳುವವರು ಮತ್ತೂಂದೆಡೆ. ಇಂಥ ಆನ್ ಲೈನ್ ಅಥವ ಸೈಬರ್ ಲೋಕದೊಳಗೆ ಅರಿತು ನಡೆದರೆ ಅನುಕೂಲ, ಕೊಂಚ ಎಚ್ಚರ ತಪ್ಪಿದರೂ ಕಾಣದ ಆಗಂತುಕನ ಆತಂಕ ಕಟ್ಟಿಟ್ಟ ಗ್ಯಾರಂಟಿ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಡೈಮಂಡ್ ಕ್ರಾಸ್’.
ಇಂದಿನ ದಿನಗಳಲ್ಲಿ ಪೊಲೀಸರಿಗೆ ದಿನದಿಂದ ದಿನಕ್ಕೂ ತಲೆ ನೋವಾಗುತ್ತಿರುವ ಆನ್ ಲೈನ್ ವಂಚನೆ, ಸೈರ್ಬ ಕ್ರೈಂ ಕೃತ್ಯಗಳನ್ನು ಭೇದಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಇಂಥದ್ದೇ ಸೈಬರ್ ಕ್ರೈಂನ ಗಂಭೀರ ಪ್ರಕರಣವೊಂದರ ಬೆನ್ನು ಹತ್ತುವ ಸೈಬರ್ ಕ್ರೈಂ ಅಧಿಕಾರಿ ಅಭಯಂಕರ್ ಪ್ರಸಾದ್ ಕಣ್ಣಿಗೆ ಕಾಣದ ಹ್ಯಾಕರ್‌ಗಳ ಹೆಡೆ ಮುರಿ ಕಟ್ಟಲು ಮುಂದಾಗುತ್ತಾನೆ. ಕಣ್ಣಿಗೆ ಕಾಣುವ ಕಳ್ಳರನ್ನು ಹಿಡಿಯುವುದು ಸುಲಭ. ಆದರೆ ಕಣ್ಣಿಗೆ ಕಾಣದ ಹ್ಯಾಕರ್‌ಗಳನ್ನು ತಮ್ಮ ಬಲೆಯೊಳಗೆ ಬೀಳಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಬಂದಾಗ, ಅಭಯಂಕರ್ ಪ್ರಸಾದ್ ಹೊಸ ಉಪಾಯವೊಂದನ್ನು ಹುಡುಕುತ್ತಾನೆ. ಕಳ್ಳನೊಬ್ಬ ಏನು ಮಾಡುತ್ತಾನೆ, ಅವನ ಯೋಜನೆ ಹೇಗಿರುತ್ತದೆ ಎನ್ನವುದು ಮತ್ತೂಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಒಬ್ಬ ಕಳ್ಳನನ್ನು ಹಿಡಿಯಲು ಮತ್ತೂಬ್ಬ ಕಳ್ಳನನ್ನೇ ಬಳಸಿಕೊಳ್ಳುವುದು ಜಾಣ್ಮೆಯ ತಂತ್ರ. ಅದೇ ತಂತ್ರವನ್ನು ಈ ಸೈಬರ್ ಹ್ಯಾಕರ್ ಗಳನ್ನು ಹುಡುಕಲು ಪೊಲೀಸರು ಬಳಸಿಕೊಳ್ಳುತ್ತಾರೆ. ಅಂತಿಮವಾಗಿ ಈ ತಂತ್ರ, ಪ್ರತಿತಂತ್ರ ಹೇಗಿರುತ್ತದೆ? ಕಳ್ಳ-ಪೊಲೀಸರ ಆಟದಲ್ಲಿ ಕೊನೆಗೂ ಗೆದ್ದು ಬೀಗುವವರು ಯಾರು ಎಂಬುದೇ “ಡೈಮಂಡ್ ಕ್ರಾಸ್’ ಸಿನಿಮಾದ ಕಥಾಹಂದರ. “ಡೈಮಂಡ್ ಕ್ರಾಸ್’ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ದಿನನಿತ್ಯ ಕೇಳುವ, ಮಾಧ್ಯಮಗಳಲ್ಲಿ ವರದಿಯಾಗುವ ಸೈಬರ್ ಕ್ರೈಂ ವಿಷಯವನ್ನು ರೋಚಕವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಸೈಬರ್ ಲೋಕದ, ಖತರ್‌ನಾಕ್ ಹ್ಯಾಕರ್ಸ, ಪೊಲೀಸರ ಹುಡುಕಾಟ, ತಂತ್ರಲೋಕದ ಸವಾಲುಗಳು ಎಲ್ಲವನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇತ್ತೀಚೆಗೆ ಬಂದಿರುವ ಮಾಮೂಲಿ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಿ ಗಿಂತ “ಡೈಮಂಡ್ ಕ್ರಾಸ್’ ಸಿನಿಮಾ ತನ್ನ ಸಬ್ಜೆಕ್ಟ್ ಮತ್ತು ನಿರೂಪಣೆಯ ಕಾರಣಕ್ಕೆ ವಿಭಿನ್ನವಾಗಿ ನಿಲ್ಲುತ್ತದೆ.
ಇನ್ನು ರೋಜರ್ ನಾರಾಯಣ್, ರಜತ್ ಅಣ್ಣಪ್ಪ ಪಾತ್ರಗಳು ಇಡೀ ಸಿನಿಮಾವನ್ನು ಆವರಿಸಿಕೊಂಡಿವೆ. ಕಥೆಯಲ್ಲಿ ನಾಯಕಿ ರೂಪಿಕಾಗೆ ಹೆಚ್ಚಿನ ಜಾಗವಿಲ್ಲ. ಉಳಿದಂತೆ ಒಂದಷ್ಟು ಹೊಸ ಕಲಾವಿದರು ತೆರೆಮೇಲೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಹೈಲೈಟ್ಸ್ ಎನ್ನಬಹುದು.
ಸಂಕಲನ ಮತ್ತು ಕಲರಿಂಗ್ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಅದೆಲ್ಲವನ್ನು ಬದಿಗಿಟ್ಟು ಹೇಳುವುದಾದರೆ, “ಡೈಮಂಡ್ ಕ್ರಾಸ್’ ಬೆನ್ನು ತಟ್ಟಬಹುದಾದ ಹೊಸಬರ ಪ್ರಯತ್ನ ಎನ್ನಬಹುದು. ಸಸ್ಪೆನ್ಸ್-ಥ್ರಿಲ್ಲರ್ ಕಣ್ಣಾಮುಚ್ಚಾಲೆ ಆಟವನ್ನು ಕಣ್ತುಂಬಿಕೊಳ್ಳುವ ಕುತೂಹಲವಿದ್ದರೆ, ನೀವು ಒಮ್ಮೆ “ಡೈಮಂಡ್ ಕ್ರಾಸ್’ ಕಡೆಗೆ ಮುಖ ಮಾಡಿ ಬರಬಹುದು
ಕಾರ್ತಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.