ದೃಶ್ಯ-2 ಚಿತ್ರ ವಿಮರ್ಶೆ: ಕುತೂಹಲದ ಹಾದಿಯಲ್ಲಿ ಪೊನ್ನಪ್ಪ ಕೇಸ್‌!


Team Udayavani, Dec 11, 2021, 10:06 AM IST

drusya-2

ಒಂದು ಕಡೆ ಭಯ, ಇನ್ನೊಂದು ಕಡೆ ಬುದ್ಧಿವಂತಿಕೆ… ಈ ಎರಡರ ಸಮ್ಮಿಲನ “ದೃಶ್ಯ’. “ದೃಶ್ಯ’ ಚಿತ್ರದ ಮೊದಲ ಭಾಗದಲ್ಲಿ, ಅನಿರೀಕ್ಷಿತವಾಗಿ ನಡೆದ ಕೊಲೆ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಂಡಿದ್ದ ರಾಜೇಂದ್ರ ಪೊನ್ನಪ್ಪ, ಮತ್ತೆಎದುರಾಗುವ ಆ ಕೊಲೆಯ ಮರುತನಿಖೆಯಲ್ಲಿ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎಂಬುದು “ದೃಶ್ಯ-2’ನಲ್ಲಿ ಮುಂದುವರೆದಿದೆ.

“ದೃಶ್ಯ’ ಚಿತ್ರದ ಕಥೆಯ ಎಳೆ ಮತ್ತು ಹಲವು ಪಾತ್ರಗಳು “ದೃಶ್ಯ-2′ ಚಿತ್ರದಲ್ಲೂ ಮುಂದುವರೆದಿರುವುದರಿಂದ, ಈ ಹಿಂದೆ ದೃಶ್ಯ’ ನೋಡಿದವರಿಗೆ ದೃಶ್ಯ-2′ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಬಹುಬೇಗ ಅರ್ಥವಾಗುತ್ತದೆ. ಆದರೆ ಚಿತ್ರದ ಮೊದಲರ್ಧ ಚಿತ್ರಕಥೆ ಮಂದಗತಿಯಲ್ಲಿ ಸಾಗುವಂತಿದೆ. ಇಲ್ಲಿ ಮೂಲಕಥೆಗೆ ಸಂಬಂಧವೇ ಇಲ್ಲದಂತಹ ಒಂದಷ್ಟು ದೃಶ್ಯಗಳಿವೆ. ಚಿತ್ರಮಂದಿರ ಆರಂಭಿಸುವ ಕನಸು, ಕಥೆಗಾರನ ಜೊತೆ ಚರ್ಚೆ… ಇಂತಹ ಅಂಶಗಳ ಮೂಲಕ ಮೊದಲರ್ಧವನ್ನು ತುಂಬಿಸಲಾಗಿದೆ. ಚಿತ್ರದಲ್ಲಿ ಯಾವುದೇ ಅಚ್ಚರಿಯ ತಿರುವುಗಳನ್ನು ಮಧ್ಯಂತರದವರೆಗೂ ನಿರೀಕ್ಷಿಸುವಂತಿಲ್ಲ. ಹೀಗಾಗಿ ಇಡೀ ಚಿತ್ರದ ಕಥೆಯ ಪ್ರಮುಖ ಘಟ್ಟ ತಲುಪಿ, ಕಥೆಗೊಂದು ತಾರ್ಕಿಕ ಅಂತ್ಯ ಸಿಗುವುದು ಚಿತ್ರದ ದ್ವಿತಿಯಾರ್ಧದಲ್ಲಿ, ಅದರಲ್ಲೂ ಕೊನೆಯ ಹತ್ತು ನಿಮಿಷಗಳಲ್ಲಿ ಎನ್ನಬಹುದು.

ಒಟ್ಟಾರೆ “ದೃಶ್ಯ’ ಚಿತ್ರದಿಂದ ಪ್ರೇರಣೆಗೊಂಡು, “ದೃಶ್ಯ-2′ ನೋಡಲು ಮುಂದಾಗಿದ್ದರೆ, ಆ ಮಟ್ಟದ ಥ್ರಿಲ್ಲಿಂಗ್‌ ಅನುಭವ “ದೃಶ್ಯ-2’ನಲ್ಲಿ ನಿರೀಕ್ಷಿಸುವಂತಿಲ್ಲ. ಆದರೆ, ಮುಂದುವರೆದ ಭಾಗದಲ್ಲಿ ಯಾವ ಅಂಶ ದೊಂದಿಗೆ ಕೇಸ್‌ ರೀ ಓಪನ್‌ ಆಗುತ್ತದೆ ಎಂಬ ಕುತೂಹಲವಿದ್ದವರು ಈ ಸಿನಿಮಾ ನೋಡಬಹುದು. ಆ ತರಹದ ಒಂದು ಅದ್ಭುತ ಕಲ್ಪನೆಯನ್ನು ಮೂಲಕಥೆಗಾರ ಜೀತು ಜೋಸೆಫ್ ಕಂಡಿದ್ದರ ಪರಿಣಾಮ “ದೃಶ್ಯ-2′ ಆಗಿದೆ. ಹಾಗಾಗಿ, ಅದರ ಕ್ರೆಡಿಟ್‌ ಮೂಲಕಥೆಗಾರರಿಗೆ ಸಲ್ಲಬೇಕು.

ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಕಥಾನಾಯಕ ರಾಜೇಂದ್ರ ಪೊನ್ನಪ್ಪನ ಪಾತ್ರದಲ್ಲಿ ನಟ ರವಿಚಂದ್ರನ್‌ “ದೃಶ್ಯ-2′ ಚಿತ್ರದಲ್ಲೂ ಇಷ್ಟವಾಗುತ್ತಾರೆ. ಉಳಿದಂತೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ ಒಳಗೊಳಗೆ ತಳಮಳ ಅನುಭವಿಸುವ ಗೃಹಿಣಿಯಾಗಿ ನವ್ಯಾ ನಾಯರ್‌, ಆರೋಹಿ ತಮ್ಮ ಅಭಿನಯದಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಅನಂತ್‌ನಾಗ್‌ ಅವರದು ತೂಕದ ನಟನೆ. ಶಿವರಾಮ್‌, ಪ್ರಮೋದ್‌ ಶೆಟ್ಟಿ, ಪ್ರಭು ಗಣೇಶ್‌ ಸೇರಿದಂತೆ ಬಹುತೇಕರದ್ದು ಅಚ್ಚುಕಟ್ಟು ಅಭಿನಯ. ಇನ್ನೂ ಅನೇಕ ಕಲಾವಿದರು ಚಿತ್ರದ ಪಾತ್ರಗಳಲ್ಲಿ ಅಭಿನಯಿಸಿದ್ದರೂ, ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ.

ಇನ್ನು ತಾಂತ್ರಿಕವಾಗಿ “ದೃಶ್ಯ-2′ ಚಿತ್ರದ ಛಾಯಾಗ್ರಹಣ, ಸಂಕಲನ ಮತ್ತು ಲೊಕೇಶನ್‌ ಗಳು ತೆರೆಮೇಲೆ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು.

ಜಿ.ಎಸ್‌.ಕಾರ್ತಿಕ ಸುಧನ್

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.