ಲವ್‌ಗ್ರಾಫ್‌ನಲ್ಲಿ ಎಮೋಶನಲ್‌ ಜರ್ನಿ

ಚಿತ್ರ ವಿಮರ್ಶೆ

Team Udayavani, Feb 1, 2020, 7:07 AM IST

Love-Moctail

“ಆಲ್ಕೋಹಾಲ್ಸ್‌ ಮಿಕ್ಸ್‌ ಆದ್ರೆ ಕಾಕ್ಟೇಲ್‌. ವಿವಿಧ ಹಂತದ ಪ್ರೀತಿ ಮಿಕ್ಸ್‌ ಆದ್ರೆ ಅದು “ಲವ್‌ ಮಾಕ್ಟೇಲ್‌’… ವಿಷಯವಷ್ಟೇ, ಇಲ್ಲೀಗ ಹೇಳಹೊರಟಿದ್ದು, ಮೂರು ಕ್ಯೂಟ್‌ ಲವ್‌ಸ್ಟೋರಿ ಕುರಿತು. ಹೌದು, ತರಹೇವಾರಿ ಹಣ್ಣಿನ ರಸವನ್ನೆಲ್ಲಾ ಮಿಕ್ಸ್‌ ಮಾಡಿ ಸವಿದ “ಮಾಕ್ಟೇಲ್‌’ ಡ್ರಿಂಕ್‌ನಷ್ಟೇ ಫೀಲ್‌, ಈ “ಲವ್‌ ಮಾಕ್ಟೇಲ್‌’ನ ಬಗೆ ಬಗೆಯ ಪ್ರೀತಿಯಲ್ಲೂ ತುಂಬಿದೆ. ಒಂದೇ ಮಾತಲ್ಲಿ ಹೇಳ್ಳೋದಾದರೆ, “ಲವ್‌ ಮಾಕ್ಟೇಲ್‌’ ಮಜವೆನಿಸುವ ಚಿತ್ರ ಎಂಬುದನ್ನು ಮುಲಾಜಿಲ್ಲದೆ ಹೇಳಬಹುದು.

ಕನ್ನಡದಲ್ಲಿ ಅದೆಷ್ಟೋ ಲವ್‌ಸ್ಟೋರಿ ಚಿತ್ರಗಳು ಬಂದಿವೆ. ಆ ಪೈಕಿ ಕಾಡುವ ಲವ್‌ಸ್ಟೋರಿ ಚಿತ್ರಗಳ ವರ್ಗವೇ ಇದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಚಿತ್ರವಿದು ಎಂಬುದನ್ನು ಹೇಳಲ್ಲಡ್ಡಿಯಿಲ್ಲ. ಈಗಿನ ಹೊಡಿ, ಬಡಿ, ಕಡಿ, ಸಿನಿಮಾಗಳ ನಡುವೆ, ಮುದ್ದಾದ ಪ್ರೀತಿ ಕಥೆಯಲ್ಲಿ ಹಾಸ್ಯದ ಹೊನಲಷ್ಟೇ ಅಲ್ಲ, ಪ್ರೀತಿಯೊಳಗಿನ ಭಾವನೆ, ಭಾವುಕತೆ, ಧನ್ಯತೆ ಎಲ್ಲವೂ ಮೇಳೈಸಿದೆ.

ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿ, ಕ್ರೀಡಾಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದ ಹಾಗೆ, ಮೊದಲ ನಿರ್ದೇಶನದಲ್ಲೇ ನೋಡುಗರಲ್ಲಿ ಭರವಸೆ ಮೂಡಿಸಿದ್ದಾರೆ ಡಾರ್ಲಿಂಗ್‌ ಕೃಷ್ಣ. ಮೂರು ಹಂತದ ಪ್ರೀತಿ ಕಥೆಯಲ್ಲೊಂದು ನವೋಲ್ಲಾಸವಿದೆ. ಜೊತೆಗೊಂದಷ್ಟು ತರಲೆ, ಜಗಳ, ಕೋಪ, ನಂಬಿಕೆ, ಕಣ್ಣೀರು ಇತ್ಯಾದಿ ವಿಷಯಗಳ ಜೀವನೋತ್ಸಾಹವೂ ಇದೆ. ಈಗಿನ ಟ್ರೆಂಡ್‌ಗೆ ಬೇಕಾದ ಕಥೆ ಜೊತೆ ಅಷ್ಟೇ ವೇಗದ ಚಿತ್ರಕಥೆಯಲ್ಲಿ ಲವಲವಿಕೆಯೂ ತುಂಬಿದೆ.

ಹೊಸತು ಬಯಸುವ ಮನಸ್ಸುಗಳಿಗೆ ಭರಪೂರ ಮನರಂಜನೆ ಇದೆ. ಹಾಗಾಗಿ, “ಲವ್‌ ಮಾಕ್ಟೇಲ್‌’ ಮೂಲಕ ಈಗಿನ ಜನರೇಷನ್‌ ನಾಡಿಮಿಡಿತ ಅರ್ಥ ಮಾಡಿಕೊಂಡೇ ಎಲ್ಲವನ್ನೂ ಕಟ್ಟಿಕೊಡುವ ಮೊದಲ ಪ್ರಯತ್ನದಲ್ಲೇ ಕೃಷ್ಣ ಸಾರ್ಥಕತೆ ಮೆರೆದಿದ್ದಾರೆ ಎನ್ನಬಹುದು. ಇಲ್ಲಿ ವಿನಾಕಾರಣ ಕಾಣಿಸಿಕೊಳ್ಳುವ ದೃಶ್ಯಗಳಿಲ್ಲ. ಆರಂಭದಿಂದ ಮಧ್ಯಂತರ ಬರುವವರೆಗೆ ಅತ್ತಿತ್ತ ಅಲುಗಾಡದಂತೆ ನೋಡಿಸಿಕೊಂಡು ಹೋಗುವ ಚಿತ್ರದ ದ್ವಿತಿಯಾರ್ಧ, ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ಎಲ್ಲೋ ಒಂದು ಕಡೆ ಅದೇ ಮಾತು, ಅದೇ ಪ್ರೀತಿ ಅಂದುಕೊಳ್ಳುವ ಹೊತ್ತಿಗೆ ಒಂದೊಂದು ತಿರುವು ಕಾಣಿಸಿಕೊಂಡು ಪುನಃ ಸ್ಟಡಿಯಾಗಿ ಪರದೆ ಮೇಲೆ ಕಣ್ಣಿಡುವಂತಹ ದೃಶ್ಯಗಳು ರಾರಾಜಿಸುತ್ತವೆ. ಮತ್ತೆಲ್ಲೋ ಅದೇ ಲವ್‌ಸ್ಟೋರಿ ಅಂದುಕೊಂಡವರಿಗೆ ಇಂಪಾದ ಹಾಡಿನ ಸದ್ದು ಮುದ ನೀಡುತ್ತದೆ. ತುಂಬ ದಿನಗಳ ಬಳಿಕ ಅಪ್ಪಟ ಲವ್‌ಸ್ಟೋರಿ ಎನಿಸಿಕೊಳ್ಳುವ ಈ ಚಿತ್ರದಲ್ಲಿ ಪ್ರತಿ ದೃಶ್ಯ, ಮಾತು-ಕತೆ, ಹಾಡು ಎಲ್ಲವೂ ಚಿತ್ರಕ್ಕೆ ಹೆಗಲು ಕೊಟ್ಟಿವೆ.

ಇಲ್ಲಿ ಸ್ಕೂಲ್‌ ಡೇಸ್‌ನ ಮುಗ್ಧ ಲವ್‌ ಇದೆ, ಕಾಲೇಜ್‌ ಡೇಸ್‌ ಲವ್‌ಸ್ಟೋರಿಯೂ ಇದೆ. ಮದ್ವೆ ಬಳಿಕ ಮಾಡುವ ಲವ್‌ ಕೂಡ ಇದೆ. ಸಿನಿಮಾ ನೋಡೋರಿಗೆ ತಮ್ಮ ಹಳೆಯ ಲವ್‌ಸ್ಟೋರಿಗಳು ರೀ ಓಪನ್‌ ಆದರೂ ಅಚ್ಚರಿ ಇಲ್ಲ. ಅಷ್ಟೇ ಅಲ್ಲ, ತಮ್ಮ ಹೆಂಡತಿಯನ್ನೂ ಹೀಗೆ ಪ್ರೀತಿಸಬೇಕು ಎಂಬ ಆಸೆ ಹುಟ್ಟುವ ಅಂಶವೂ ಇದೆ. ಕೆಲ ದೃಶ್ಯ ಅನಗತ್ಯವಾಗಿದ್ದರೂ, ಹಿನ್ನೆಲೆ ಸಂಗೀತ, ಸಂಭಾಷಣೆ ಹೇಗೋ ತೂಗಿಸಿಕೊಂಡು ಹೋಗುತ್ತದೆ. ಒಟ್ಟಾರೆ, ಒಂದು ಕ್ಯೂಟ್‌ ಲವ್‌ಸ್ಟೋರಿಯನ್ನು ವಿವಿಧ ಹಂತಗಳಲ್ಲಿ ಹೇಗೆಲ್ಲಾ ತೋರಿಸಬಹುದು,

ವಾಸ್ತವದಲ್ಲಿ ಹೀಗೂ ಇದೆ ಎಂಬ ಸತ್ಯ ಹೇಳುತ್ತಲೇ, ಕೊನೆಯ ಇಪ್ಪತ್ತು ನಿಮಿಷ ನೋಡುಗರನ್ನು ಭಾವುಕತೆಗೆ ಕರೆದೊಯ್ಯುತ್ತೆ. ಇಲ್ಲಿ ಪ್ರತಿಯೊಬ್ಬರೂ ಒಳ್ಳೇ ಸ್ಕೋರ್‌ ಮಾಡುವ ಮೂಲಕ ನೋಡುಗರನ್ನು ಹಾಗೊಮ್ಮೆ ಭಾವುಕರನ್ನಾಗಿಸುವಲ್ಲಿ ಯಶಸ್ವಿ. ಸಣ್ಣಪುಟ್ಟ ದೋಷ ಕಂಡುಬಂದರೂ, ಮೊದಲ ನಿರ್ದೇಶನವಾದ್ದರಿಂದ ಅದನ್ನು ಬದಿಗೊತ್ತಿ “ಲವ್‌’ ಮಾಕ್ಟೇಲ್‌ ಸವಿಯಲ್ಲಡ್ಡಿಯಿಲ್ಲ. ಆದಿಗೆ ಶಾಲಾ ದಿನದಲ್ಲೊಂದು ಪ್ರೀತಿ ಹುಟ್ಟುತ್ತೆ. ಕಾಲೇಜ್‌ ಡೇಸ್‌ನಲ್ಲೂ ಲವ್‌ ಆಗುತ್ತೆ. ಆ ಪ್ರೀತಿ ಉಳಿಯುತ್ತಾ? ಕೊನೆಗೆ ಮದ್ವೆ ಆಗುವ ಅವನು ಪ್ರೀತಿಸಿದ ಹುಡುಗಿಯನೇ ಕೈ ಹಿಡಿತಾನಾ?

ಈ ಬಗ್ಗೆ ಕುತೂಹಲವಿದ್ದರೆ, ಸಿನಿಮಾ ನೋಡಬಹುದು. “ಡಾರ್ಲಿಂಗ್‌’ ಕೃಷ್ಣ ನಟನೆಯಲ್ಲಿ ಎಂದಿಗಿಂತ ಪಕ್ವ. ಎರಡು ಹಂತದ ಲವ್ವರ್‌ ಬಾಯ್‌ ಆಗಿ ಇಷ್ಟವಾಗುತ್ತಾರೆ. ಮಿಲನಾ ನಾಗರಾಜ್‌ ಪಾತ್ರದ ಮೂಲಕ ಕಾಡುತ್ತಾರೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುತ್ತಾರೆ. ಉಳಿದಂತೆ ಅಮೃತಾ, ರಚನಾ, ಅಭಿ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ರಘುದೀಕ್ಷಿತ್‌ ಅವರ ಹಾಡು ಹಾಗು ಹಿನ್ನೆಲೆ ಸಂಗೀತ ಜೀವಾಳ. ಕ್ರೇಜಿ ಮೈಂಡ್ಸ್‌ ಅವರ ಕ್ಯಾಮೆರಾ ಕೈಚಳಕ “ಮಾಕ್ಟೇಲ್‌’ ಡ್ರಿಂಕ್‌ ಸವಿದಷ್ಟೇ ಅಂದವೆನಿಸಿದೆ.

ಚಿತ್ರ: ಲವ್‌ ಮಾಕ್ಟೇಲ್‌
ನಿರ್ಮಾಣ: ಡಾರ್ಲಿಂಗ್‌ ಕೃಷ್ಣ, ಮಿಲನ ನಾಗರಾಜ್‌
ನಿರ್ದೇಶನ: ಡಾರ್ಲಿಂಗ್‌ ಕೃಷ್ಣ
ತಾರಾಗಣ: ಡಾರ್ಲಿಂಗ್‌ ಕೃಷ್ಣ, ಮಿಲನ ನಾಗರಾಜ್‌, ಅಮೃತಾ ಅಯ್ಯಂಗಾರ್‌, ರಚನಾ, ಅಭಿ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.