ಇಂಜಿನ್‌ ಸೌಂಡು ಜೋರಾಗಿದೆ …


Team Udayavani, Jul 14, 2018, 11:08 AM IST

doubloe-engine.jpg

ಸಿಂಪಲ್‌ ಕಥೆಯನ್ನು ಮಜವಾಗಿ ಹೇಳುವುದು ಕೂಡಾ ಒಂದು ಕಲೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನೀವು ಎರಡು ಗಂಟೆ ಯಾವ ರೀತಿ ರಂಜಿಸುತ್ತೀರಿ ಅನ್ನೋದಷ್ಟೇ ಮುಖ್ಯವಾಗುತ್ತದೆ. ಪ್ರೇಕ್ಷಕ ಬಯಸೋದು ಕೂಡಾ ಅದನ್ನೇ. ತೆರೆಹಿಂದೆ ಚಿತ್ರತಂಡ ಪಟ್ಟ ಶ್ರಮ ಆತನಿಗೆ ಮುಖ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ “ಡಬಲ್‌ ಇಂಜಿನ್‌’ ತಂಡ ಒಂದು ಮಟ್ಟಕ್ಕೆ ಯಶಸ್ಸು ಸಾಧಿಸಿದೆ ಎನ್ನಬಹುದು. ಇಲ್ಲಿ ಒಂದಂಶವನ್ನು ಮೊದಲೇ ಹೇಳಿಬಿಡಬೇಕು.

ಪಡ್ಡೆಹುಡುಗರು, ಔಟ್‌ ಅಂಡ್‌ ಔಟ್‌ ಕಾಮಿಡಿಯನ್ನು ಇಷ್ಟಪಡುವವರು, ಕಥೆಗಿಂತ ನಗು ಮುಖ್ಯ ಎಂದುಕೊಂಡವರೇ ಈ ಸಿನಿಮಾದ ಟಾಗೇìಟ್‌. ಅದೇ ಕಾರಣದಿಂದ ಚಿತ್ರತಂಡ ಪ್ರೇಕ್ಷಕರನ್ನು ನಗಿಸಲು ಏನೆಲ್ಲಾ ಕಸರತ್ತು ಮಾಡಬೇಕೋ, ಅವೆಲ್ಲವನ್ನು ಮಾಡಿದೆ. ಮಾಡೋಕೆ ಕೆಲಸವಿಲ್ಲದ, ಹಳ್ಳಿಯಲ್ಲಿ ಉಪಟಳ ಮಾಡಿಕೊಂಡಿರುವ ಮೂವರು ಬೇಜವಾಬ್ದಾರಿ ಯುವಕರ ಕಥೆಯೇ “ಡಬಲ್‌ ಇಂಜಿನ್‌’. 

ಕಥೆ ತೀರಾ ಸರಳ. ಅಡ್ಡದಾರಿಯಲ್ಲಿ ಕಾಸು ಮಾಡಲು ಹೊರಡುವ ಹುಡುಗರು ಎದುರಿಸುವ ತೊಂದರೆ ಹಾಗೂ ಕೊನೆಗೊಂದು ಸಂದೇಶವೇ ಈ ಸಿನಿಮಾದ ಒಟ್ಟು ಜೀವಾಳ. ಆದರೆ, ಈ ಅಂಶವನ್ನು ವಿವಿಧ ಸನ್ನಿವೇಶಗಳ ಮೂಲಕ ನಿರ್ದೇಶಕರು ಡಿಸೈನ್‌ ಡಿಸೈನ್‌ ಆಗಿ ಕಟ್ಟಿಕೊಟ್ಟಿದ್ದಾರೆ. ನೀವು ಲಾಜಿಕ್‌ ಹುಡುಕದೇ ಸಿನಿಮಾದ ಮ್ಯಾಜಿಕ್‌ನ°ಷ್ಟೇ ನೋಡಿದರೆ ನಿಮಗೆ ಇಂಜಿನ್‌ ಮಜಾ ಕೊಡುತ್ತದೆ. ಮುಖ್ಯವಾಗಿ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕರು ವೇಗ ಕಾಯ್ದುಕೊಂಡಿದ್ದಾರೆ.

ಒನ್‌ಲೈನ್‌ ಕಥೆಯನ್ನು ಹೇಗೆ ವಿಭಿನ್ನ ಸನ್ನಿವೇಶಗಳ ಮೂಲಕ ಕಟ್ಟಿಕೊಡಬಹುದು ಮತ್ತು ಆ ಮೂಲಕ ಪ್ರೇಕ್ಷಕರನ್ನು ಹೇಗೆ ನಗಿಸಬಹುದೆಂಬುದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಅದೇ ಕಾರಣದಿಂದ ಆರಂಭದಿಂದ ಕೊನೆವರೆಗೂ “ಇಂಜಿನ್‌’ ಸುತ್ತ ನಗುವಿನ ಸದ್ದು ಕೇಳಿಬರುತ್ತಲೇ ಇರುತ್ತದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಟಾಗೇಟ್‌ ಪಡ್ಡೆಗಳು ಹಾಗೂ ಹಾಸ್ಯಪ್ರಿಯರು.

ಆ ಕಾರಣದಿಂದ ಆಗಾಗ ಒಂದಷ್ಟು ಡಬಲ್‌ ಮೀನಿಂಗ್‌ ಸಂಭಾಷಣೆಗಳು ಕೂಡಾ ಬಂದು ಹೋಗುತ್ತವೆ. ಹಾಗಂತ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಮೂವರು ಪಡ್ಡೆ ಹುಡುಗರು ಒಟ್ಟಾದಾಗ ಸನ್ನಿವೇಶ ಹೇಗಿರಬಹುದೆಂಬುದನ್ನು ಕಟ್ಟಿಕೊಡಲಾಗಿದೆ. ಅದು ಬಿಟ್ಟರೆ “ಡಬಲ್‌ ಇಂಜಿನ್‌’ ಈ ಹಿಂದೆ ನೋಡದಂತಹ ಅದ್ಭುತ ಸಿನಿಮಾವಂತೂ ಅಲ್ಲ. ಆದರೆ, ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರಷ್ಟೇ. 

ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌ ಅವರದು ಒಂದು ಟ್ರ್ಯಾಕ್‌ ಆದರೆ, ಸಾಧುಕೋಕಿಲ ಅವರದು ಮತ್ತೂಂದು ಟ್ರ್ಯಾಕ್‌. ಇನ್ನು, ಹಳ್ಳಿಯ ಪಡ್ಡೆಹುಡುಗನಾಗಿ ಚಿಕ್ಕಣ್ಣ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಹಾಗಾಗಿ, ಚಿಕ್ಕಣ್ಣ ಎಂದಿನಂತೆ ನಟಿಸಿದ್ದಾರೆ. ಉಳಿದಂತೆ ಅಶೋಕ್‌ ಪಾತ್ರ ಗಮನ ಸೆಳೆಯುತ್ತದೆ. ಪ್ರಭು ಕಾಮಿಡಿಯಲ್ಲಿ ಇನ್ನಷ್ಟು ದೂರ ಸಾಗಬೇಕು. ಸುಮನ್‌ ರಂಗನಾಥ್‌, ಸುಚೇಂದ್ರ ಪ್ರಸಾದ್‌, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಡಬಲ್‌ ಇಂಜಿನ್‌
ನಿರ್ಮಾಣ: ಎಸ್‌ಆರ್‌ಎಸ್‌ ಗ್ರೂಪ್‌
ನಿರ್ದೇಶನ: ಚಂದ್ರಮೋಹನ್‌
ತಾರಾಗಣ: ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌, ಮುಂತಾದವರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.