Evidence movie review: ತ್ರಿಕೋನ ಪ್ರೇಮದ ಕರಾಳ ಮುಖ
Team Udayavani, May 25, 2024, 3:42 PM IST
![Evidence movie review](https://www.udayavani.com/wp-content/uploads/2024/05/evidence-1-620x342.jpg)
![Evidence movie review](https://www.udayavani.com/wp-content/uploads/2024/05/evidence-1-620x342.jpg)
ಆತ ಸಮಾಜದಲ್ಲಿ ಪ್ರತಿಷ್ಠಿತ ವೈದ್ಯ. ಆದರೆ, ಕೇಸ್‌ವೊಂದರ ಕಾರಣ ಆತನನ್ನು ವಿಚಾರಣಾ ಕೊಠಡಿಯಲ್ಲಿ ಕೂರಿಸಿ ವಿಚಾರಣೆ ನಡೆಸಲಾಗುತ್ತಿರುತ್ತದೆ. ಅಷ್ಟಕ್ಕೂ ಆತನಿಗೂ, ಕೇಸ್ ಗೂ ಸಂಬಂಧವೇನು, ವೈದ್ಯನ ಹಿಂದಿನ “ರಹಸ್ಯ’ವೇನು ಎಂಬ ಕುತೂಹಲವಿದ್ದರೆ ನೀವು “ಎವಿಡೆನ್ಸ್’ ಸಿನಿಮಾ ನೋಡಬಹುದು.
ಇದೊಂದು ಔಟ್ ಆ್ಯಂಡ್ ಔಟ್ ಸಸ್ಪೆನ್ಸ್- ಥ್ರಿಲ್ಲರ್ ಕ್ರೈಂ ಸ್ಟೋರಿ ಸಿನಿಮಾ ಜೊತೆಗೆ ಇದರಲ್ಲೊಂದು ತ್ರಿಕೋನ ಪ್ರೇಮಕಥೆಯೂ ಇದೆ. ಆ ತ್ರಿಕೋನ ಪ್ರೇಮಕಥೆಯೇ ಈ ಸಿನಿಮಾದ ಜೀವಾಳ ಕೂಡಾ. ಬಹುತೇಕ ಸಿನಿಮಾ ವಿಚಾರಣಾ ಕೊಠಡಿಯಲ್ಲೇ ನಡೆಯುತ್ತದೆ. ಈ ನಡುವೆಯೇ ಚಿತ್ರದ ಫ್ಲಾಶ್‌ಬ್ಯಾಕ್ ತೆರೆದುಕೊಳ್ಳುತ್ತಾ ಸಾಗುತ್ತದೆ. ನಿರ್ದೇಶಕ ಪ್ರವೀಣ್ ಒಂದು ಥ್ರಿಲ್ಲರ್ ಕಥೆಯನ್ನು ರೋಚಕವಾಗಿ
ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಅಂಶಗಳನ್ನು ತಂದಿದ್ದಾರೆ. ಅಲ್ಲಲ್ಲಿ ಕುತೂಹಲವನ್ನು ಬಿಟ್ಟು ಮುಂದೆ ಸಾಗುವ ಟೆಕ್ನಿಕ್ ಮೂಲಕ ಒಂದಷ್ಟು ಗಮನ ಸೆಳೆಯುತ್ತಾರೆ.
ಮೊದಲೇ ಹೇಳಿದಂತೆ ಇದೊಂದು ತ್ರಿಕೋನ ಪ್ರೇಮ. ಜೊತೆಗೆ ಕಥೆಗೊಂದು ಸ್ನೇಹದ ಲೇಪವೂ ಇದೆ. ನಿರ್ದೇಶಕ ಪ್ರವೀಣ್‌ಗೆ ತಾನು ಏನು ಹೇಳಬೇಕು ಮತ್ತು ಎಷ್ಟು ಹೇಳಬೇಕು ಎಂಬ ಸ್ಪಷ್ಟತೆ ಇದ್ದಿದ್ದರಿಂದ ಸಿನಿಮಾದ ಕಥೆ ಹಾದಿ ತಪ್ಪಿಲ್ಲ. ಒಂದು ಪ್ರಯತ್ನವಾಗಿ “ಎವಿಡೆನ್ಸ್’ ಮೆಚ್ಚಬಹುದು.