ಲವ್ ಮಾಕ್ಟೇಲ್-2 ಚಿತ್ರ ವಿಮರ್ಶೆ: ಜೊತೆಗಿರದ ಜೀವ ಎಂದೆಂದಿಗೂ ಜೀವಂತ…

Team Udayavani, Feb 12, 2022, 9:55 AM IST

ಲವ್ ಮಾಕ್ಟೇಲ್-2 ಚಿತ್ರ ವಿಮರ್ಶೆ

ಆದಿ ಫೋನ್‌ ಸ್ವೀಚಾಫ್ ಆಗಿರುತ್ತದೆ. ಗೆಳೆಯರಿಗೆ ಟೆನÒನ್‌. ಮತ್ತೆ ಗೊತ್ತಾಗುತ್ತದೆ, ಆದಿ ನಿಧಿಮಾನ ಹುಡುಕಿಕೊಂಡು ಹೋಗಿದ್ದಾನೆ ಎಂದು. ಹೀಗೆ ಹುಡುಕಿಕೊಂಡು ಹೋದ ಆದಿಗೆ ಕೊನೆಗೂ ನಿಧಿ ಸಿಗುತ್ತಾಳೆ! ಅಲ್ಲಾ, ಸಿನಿಮಾದ ಮೊದಲ ಭಾಗದಲ್ಲಿ ಸತ್ತೋಗಿರೋ ನಿಧಿಮಾ ಹೇಗೆ ಸಿಗೋಕೆ ಸಾಧ್ಯ… ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದೇ ಈ ಸಿನಿಮಾದ ಬ್ಯೂಟಿ.

“ಲವ್‌ ಮಾಕ್ಟೇಲ್‌’ ಸಿನಿಮಾದ ಮುಂದುವರೆದ ಭಾಗವಾಗಿರುವ “ಲವ್‌ ಮಾಕ್ಟೇಲ್‌ -2′ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಸ್ನೇಹಿತರ ಕಿತ್ತಾಟದಿಂದ ಆರಂಭವಾಗಿ, ಹುಡುಕಾಟ, ತಿರುಗಾಟ, ಕೊನೆಗೊಂದು ನಿಲುಗಡೆ … ಹೀಗೆ ಸಾಗುವ ಸಿನಿಮಾಕ್ಕೆ ನಗಿಸುವ, ಅಳಿಸುವ, ಅಲ್ಲಲ್ಲಿ ಕಣ್ಣಂಚು ಒದ್ದೆಯಾಗಿಸುವ ಗುಣವಿದೆ. ಅದೇ ಕಾರಣದಿಂದ ಸಿನಿಮಾ ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ನೋಡಿಸಿಕೊಂಡು ಹೋಗುತ್ತದೆ.

ಚಿತ್ರದ ಮೊದಲ ಭಾಗಕ್ಕೂ ಇದಕ್ಕೂ ಹೆಚ್ಚಿನ ಸಂಬಂಧವಿಲ್ಲ. ಅಲ್ಲಿನ ಒಂದಷ್ಟು ದೃಶ್ಯಗಳನ್ನು ಇಲ್ಲಿಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ಉಳಿದಂತೆ ಇದು ಫ್ರೆಶ್‌ ಸಬ್ಜೆಕ್ಟ್. ಇಲ್ಲಿ ಕಥೆಗಿಂತ ಒಂದಷ್ಟು ಸನ್ನಿವೇಶಗಳ ಮೂಲಕ ಸಿನಿಮಾವನ್ನು ಮುಂದೆ ತಗೊಂಡು ಹೋಗಿರೋದು ನಿರ್ದೇಶಕ ಕೃಷ್ಣ ಅವರ ಜಾಣ್ಮೆ. ಇನ್ನೇನು ದೃಶ್ಯಗಳು ಸ್ವಲ್ಪ ಅತಿಯಾಯಿತು ಎನಿಸುವ ಹೊತ್ತಿಗೆ ಒಂದಷ್ಟು ಫ‌ನ್‌ ಮಾಡಿ, ಪ್ರೇಕ್ಷಕರನ್ನು ಮತ್ತೆ ರಿಲ್ಯಾಕ್ಸ್‌ ಮೂಡ್‌ಗೆ ಕೊಂಡೊಯ್ಯುತ್ತಾರೆ. ಇಡೀ ಸಿನಿಮಾ ನಿಂತಿರೋದು ದ್ವಿತೀಯಾರ್ಧದಲ್ಲಿ. ಇಲ್ಲಿಂದ ಒಂದಷ್ಟು ಕುತೂಹಲ, ನಗು, ಸುಂದರವಾದ ಲೊಕೇಶನ್‌… ಎಲ್ಲವೂ ತೆರೆದುಕೊಂಡು ಹೋಗುತ್ತದೆ. ಜೊತೆಗೆ ಸೆಕೆಂಡ್‌ ಹಾಫ್ನ ಆರಂಭದಲ್ಲೇ ಪ್ರೇಕ್ಷಕರಲ್ಲಿ ಮೂಡುವ ಸಂದೇಹವನ್ನು ಬಗೆಹರಿಸಿಯೇ ಚಿತ್ರ ಮುಂದೆ ಹೋಗುವುದರಿಂದ ಪ್ರೇಕ್ಷಕ ನಿರಾಳ.

ಚಿತ್ರದ ಹೈಲೈಟ್‌ಗಳಲ್ಲಿ ಸಂಭಾಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣ ಸಣ್ಣ ಸನ್ನಿವೇಶಗಳಲ್ಲೂ ಡೈಲಾಗ್‌ ಮೂಲಕ ನಗೆಬುಗ್ಗೆ ಎಬ್ಬಿಸಿದ್ದಾರೆ. ಅಲ್ಲದೇ, ಎದೆಗೆ ನಾಟುವಂತಹ ಡೈಲಾಗ್‌ಗಳು ಕೂಡಾ ಈ ಸಿನಿಮಾದ ಹೈಲೈಟ್‌. ಇನ್ನು, ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಒಂದಷ್ಟು ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಸಿನಿಮಾದ ಕಥೆಗೆ ಎಷ್ಟು ಬೇಕೋ, ಅಷ್ಟನ್ನೇ ಹೈಲೈಟ್‌ ಮಾಡಿ, ಮುಂದೆ ಸಾಗಿಸಿರೋದು ನಿರ್ದೇಶಕರು ಕಥೆ ಹಾಗೂ “ಬಜೆಟ್‌’ನಲ್ಲಿ ತೋರಿದ ಜಾಣ್ಮೆಗೆ ಸಾಕ್ಷಿ.

ಅಂದಹಾಗೆ, ಚಿತ್ರದಲ್ಲಿ ಮಿಲನಾ ಅವರಿಗೆ ಪ್ರಮುಖ ಪಾತ್ರವಿದೆ. ಮೊದಲ ಭಾಗದಲ್ಲಿ ಸತ್ತೋಗಿರೋ ನಿಧಿಮಾ, ಎರಡನೇ ಭಾಗದಲ್ಲೂ ಮಿಂಚಿದ್ದಾರೆ. ಅದು ಹೇಗೆ ಕುತೂಹಲಕ್ಕೆ ಚಿತ್ರಮಂದಿರದಲ್ಲಿ ಉತ್ತರ ಕಂಡುಕೊಳ್ಳಿ.

ಚಿತ್ರದಲ್ಲಿ ನಾಯಕ ಕೃಷ್ಣ ಈ ಬಾರಿಯೂ ಮಿಂಚಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಪತಿಯಾಗಿ, ಹುಡುಕಾಟದ ಹುಡುಗನಾಗಿ, ಭಾವನೆಗಳ ಭಾರ ಹೊತ್ತ ಪ್ರೇಮಿಯಾಗಿ ಇಷ್ಟವಾಗುತ್ತಾರೆ.

ಇನ್ನು, ನಾಯಕಿ ರಚೆಲ್‌ ಕನ್ನಡಕ್ಕೆ ಸಿಕ್ಕ ಅಚ್ಚರಿಯ ನಾಯಕಿ. ಮೊದಲ ಚಿತ್ರದಲ್ಲೇ ಮನ ಸೆಳೆಯುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಅಮೃತಾ, ಮಿಲನಾ ಸೇರಿದಂತೆ ಇತರರು ನಟಿಸಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್‌ ಛಾಯಾಗ್ರಹಣದಲ್ಲಿ “ಲವ್‌ ಮಾಕ್ಟೇಲ್‌-2′ ಸುಂದರ. ಪ್ರಕೃತಿ ಸೌಂದರ್ಯವನ್ನು ಶ್ರೀ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ನಕುಲ್‌ ಹಾಡುಗಳು ಗುನುಗುವಂತಿದೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.