ಮುಗ್ಧ ಹುಲಿರಾಯನ ಹಾರಾಟ ಮತ್ತು ಹೋರಾಟ


Team Udayavani, Oct 6, 2017, 10:00 PM IST

STILL30.jpg

ಆತನಿಗೆ ಬೇಕಾಗಿರೋದು ಒಂದು ಕೋಟಿ ರೂಪಾಯಿ. ಆದರೆ, ಆತ ಎತ್ತಿಕೊಂಡು ಬರೋದು ಬರೋಬ್ಬರಿ ಮೂರು ಕೋಟಿ ರೂಪಾಯಿ. ಹಾಗಂತ ಆತ ನೆಮ್ಮದಿಯಾಗಿರುತ್ತಾನಾ ಎಂದರೆ ಖಂಡಿತಾ ಇಲ್ಲ. ಏಕೆಂದರೆ, ಆತ ರಫ್ ಅಂಡ್‌ ಟಫ್ ಲುಕ್‌ನಲ್ಲಿರುವ ಮುಗ್ಧ. ಕಾಸಿನ ಆಸೆ ಇಲ್ಲದ, ಕಾಸು ಎಣಿಸಲೂ ಬಾರದಂತಹ ಆತನಿಗೆ ಕೋಟಿಯ ಆಸೆ ಹುಟ್ಟಲು ಒಂದು ಕಾರಣವಿದೆ. ಅನಿವಾರ್ಯವಾಗಿ ಆತ ಕೋಟಿ ಎತ್ತಿಕೊಂಡು ಕಾಡಿಗೆ ಬಂದೇ ಬಿಡುತ್ತಾನೆ. 

 “ಹುಲಿರಾಯ’ ಚಿತ್ರ ನಿಮಗೆ ಇಷ್ಟವಾಗೋದೇ ಅದರ ಕೆಲವು ಸೂಕ್ಷ್ಮಅಂಶಗಳಿಂದ. ಅತ್ತ ಕಡೆ ಕಾಡು, ಇತ್ತ ಕಡೆ ಸಿಟಿ ಈ ಎರಡು ಅಂಶಗಳನ್ನಿಟ್ಟುಕೊಂಡು ಸಾಗುವ ಸಿನಿಮಾದಲ್ಲಿ ಎರಡು ಬದುಕುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅರವಿಂದ್‌ ಕೌಶಿಕ್‌. ಆ ಮಟ್ಟಿಗೆ “ಹುಲಿರಾಯ’ ಕಮರ್ಷಿಯಲ್‌ ಅಂಶಗಳನ್ನು ಮೈಗೆ ಮೆತ್ತಿಕೊಳ್ಳದೆಯೂ ಮಜಾ ಕೊಡುತ್ತಾ ಸಾಗುತ್ತದೆ.

ಕಾಡಿನಲ್ಲೇ ಹುಟ್ಟಿಬೆಳೆದ, ಕಾಡು, ಅಲ್ಲಿನ ಬದುಕು, ಜನಜೀವನವನ್ನು ಅತಿಯಾಗಿ ಪ್ರೀತಿಸುವ ಒಬ್ಬ ಮುಗ್ಧ ಯುವಕ ಸಿಟಿಗೆ ಬಂದಾಗ ಹೇಗೆಲ್ಲಾ ಚಡಪಡಿಸುತ್ತಾನೆ, ಸ್ವತ್ಛಂದವಾಗಿ ಕಾಡಲ್ಲಿ ಓಡಾಡಿಕೊಂಡಿದ್ದ ಆತ ಸಿಟಿಯ ಉಸಿರುಗಟ್ಟುವ ವಾತಾವರಣದಲ್ಲಿ ಹೇಗೆ ಬದುಕುತ್ತಾನೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಹಾಗಂತ ಇದು ಬರೀ ಸಿಟಿ ಮತ್ತು ಹಳ್ಳಿಯ ಜೀವವನ್ನು ಕಟ್ಟಿಕೊಡುವುದಕ್ಕೆ ಸೀಮಿತವಾಗಿಲ್ಲ ಮತ್ತು ಅದನ್ನೇ ಎಳೆದಾಡಿಲ್ಲ.

ಒಂದು ಸಣ್ಣ ಎಳೆಯೊಂದಿಗೆ ಎರಡು ಕಡೆಯ ಬದುಕಿನ ಚಿತ್ರಣವನ್ನು ನೀಡಲಾಗಿದೆ. ಇಲ್ಲಿ ಲವ್‌ ಇದೆ, ಸೆಂಟಿಮೆಂಟ್‌ ಇದೆ, ಕಾಮಿಡಿಯೂ ಇದೆ. ಹಾಗಂತ ಯಾವುದನ್ನು ಅತಿಯಾಗಿ ಬಳಸಿಕೊಂಡಿಲ್ಲ. ಹಾಗೆ ಬಂದು ಹೀಗೆ ಹೋಗುವ ಆ ದೃಶ್ಯಗಳೆಲ್ಲವೂ ಚಿತ್ರಕ್ಕೆ ಪೂರಕವಾಗಿವೆ. ಜವಾಬ್ದಾರಿ ಇಲ್ಲದ, ಬೇಕಾಬಿಟ್ಟಿ ಇರುವ “ಮುಗ್ಧ’ ಯುವಕನ ಜೀವನಕಥೆಯೇ “ಹುಲಿರಾಯ’. ಮೊದಲೇ ಹೇಳಿದಂತೆ ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ.

ಇಲ್ಲಿ ಹೀರೋ ಬಿಲ್ಡಪ್‌ ಆಗಲಿ, ಹೈವೋಲ್ಟೆಜ್‌ ಫೈಟ್‌ಗಳಾಗಲೀ ಇಲ್ಲ. ಗಾಂಧಿನಗರದ ಸಿದ್ಧಸೂತ್ರಗಳನ್ನು ಬದಿಗಿಟ್ಟು ಮಾಡಿರುವ ಸಿನಿಮಾವಿದು. ಮುಖ್ಯವಾಗಿ ನಾಯಕನ ಪಾತ್ರವನ್ನು ಡಿಸೈನ್‌ ಮಾಡಿದ ರೀತಿಯೇ ಮಜಾವಾಗಿದೆ. ಸಿನಿಮಾದಲ್ಲಿ ಮೇಲ್ನೋಟಕ್ಕೆ ಕಮರ್ಷಿಯಲ್‌ ಅಂಶಗಳಿಲ್ಲ. ಆದರೆ, ನಾಯಕನ ಪಾತ್ರದಲ್ಲಿ ಒಬ್ಬ ಕಮರ್ಷಿಯಲ್‌ ಹೀರೋಗೆ ಬೇಕಾದ ಎಲ್ಲಾ ಅಂಶಗಳನ್ನು ತುಂಬಲಾಗಿದೆ. ಆ ಅಟಿಟ್ಯೂಡ್‌, ಗತ್ತು ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ.

ಚಿತ್ರದ ಮೊದಲರ್ಧ ನಾಯಕನ ಹಿನ್ನೆಲೆ, ಪರಿಸರ ಸೊಬಗು, ಆತ ಸಿಟಿಗೆ ಬರುವ ಅಂಶಗಳಲ್ಲಿ ಮುಗಿದು ಹೋಗುತ್ತದೆ. ಇಲ್ಲಿನ ನಿರೂಪಣೆ ಕೂಡಾ ವೇಗದಿಂದ ಕೂಡಿದೆ. ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳೋದು ಸೆಕೆಂಡ್‌ಹಾಫ್ನಲ್ಲಿ. ಇಲ್ಲಿ ನಾಯಕನ ಉದ್ದೇಶ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇಲ್ಲಿ ಬರುವ ಕ್ಯೂಟ್‌ ಲವ್‌ಸ್ಟೋರಿ, ಸಣ್ಣದೊಂದು ಚೇಸಿಂಗ್‌, ತಣ್ಣಗೆ ಬಂದು ಹೋಗುವ ಭೂಗತಲೋಕ … ಹೀಗೆ ಎಲ್ಲವೂ ಇಲ್ಲಿ ಬಂದು ಹೋಗುತ್ತದೆ ಮತ್ತು ಕಥೆಗೆ ಪೂರಕವಾಗಿದೆ.

ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದ ವೇಗ ಕಡಿಮೆ. ಇಲ್ಲಿನ ಒಂದೆರಡು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು.ಮೊದಲೇ ಹೇಳಿದಂತೆ ಇದು ಕಾಡಿನ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಅದಕ್ಕೆ ಪೂರಕವಾಗಿ ಇಡೀ ಕಾಡನ್ನು ಅಲ್ಲಿ ಸೊಬಗನ್ನು ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. “ಹುಲಿರಾಯ’ ಚಿತ್ರದ ಮೂಲಕ ಕನ್ನಡಕ್ಕೆ ಬಾಲು ನಾಗೇಂದ್ರ ಎಂಬ ಒಳ್ಳೆಯ ನಟ ಸಿಕ್ಕಿದ್ದಾರೆ ಎಂದರೆ ತಪ್ಪಾಗಲಾರದು.

“ಹುಲಿರಾಯ’ನ ಸುರೇಶ ಪಾತ್ರದಲ್ಲಿ ಬಾಲು ನಾಗೇಂದ್ರನ ಬಿಟ್ಟು ಮತ್ತೂಬ್ಬರನ್ನು ಕಲ್ಪಿಸಿಕೊಳ್ಳೋದು ಕಷ್ಟ. ಅಷ್ಟರ ಮಟ್ಟಿಗೆ ಬಾಲು ಪಾತ್ರವನ್ನು ಆವರಿಸಿಕೊಂಡಿದ್ದಾರೆ. ರಗಡ್‌ ಲುಕ್‌, ಮುಗ್ಧತನ, ಹಳ್ಳಿ ಪ್ರೀತಿ, ಸಿಟಿ ಅಲರ್ಜಿ, ಡೈರೆಕ್ಟ್ ಹಿಟ್‌ ಲವ್‌ … ಹೀಗೆ ಪ್ರತಿ ಸನ್ನಿವೇಶಗಳಲ್ಲೂ ಬಾಲು ನಾಗೇಂದ್ರ ಇಷ್ಟವಾಗುತ್ತಾರೆ. ನಾಯಕಿಯರಲ್ಲಿ ಚಿರಶ್ರೀ ಹಾಗೆ ಬಂದು ಹೀಗೆ ಹೋದರೆ, ದಿವ್ಯಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚಿತ್ರದ ಹಾಡುಗಳು ಹಾಗೂ ಅದನ್ನು ಚಿತ್ರೀಕರಿಸಿರುವ ರೀತಿ ಇಷ್ಟವಾಗುತ್ತದೆ. ಮುಖ್ಯವಾಗಿ ಛಾಯಾಗ್ರಾಹಕ ರವಿ, “ಹುಲಿರಾಯ’ನನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 

ಚಿತ್ರ: ಹುಲಿರಾಯ
ನಿರ್ಮಾಣ: ನಾಗೇಶ್‌ ಕೋಗಿಲು
ನಿರ್ದೇಶನ: ಅರವಿಂದ್‌ ಕೌಶಿಕ್‌
ತಾರಾಗಣ: ಬಾಲು ನಾಗೇಂದ್ರ, ಚಿರಶ್ರೀ, ದಿವ್ಯಾ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.