ಗುಂಡಿನ ಮತ್ತೆ ಗಮ್ಮತ್ತು!
ಚಿತ್ರ ವಿಮರ್ಶೆ
Team Udayavani, Jun 22, 2019, 3:00 AM IST
ಅವರಿಬ್ಬರೂ ಬಾಲ್ಯದ ಸ್ನೇಹಿತರು. “ಹಫ್ತಾ’ ವಸೂಲಿ, ಸುಫಾರಿ ಕಿಲ್ಲಿಂಗ್ ಮೂಲಕವೇ ಅಂಡರ್‌ವರ್ಲ್ಡ್ಗೆ ಎಂಟ್ರಿಯಾದ ಒಬ್ಬನ ಹೆಸರು ಕುಡ್ಲ ಅಲಿಯಾಸ್ ಕೃಷ್ಣ. ಮತ್ತೂಬ್ಬನ ಹೆಸರು ಯರವಾಡ ಅಲಿಯಾಸ್ ಶಂಕರ್ ಯರವಾಡ. ಮಂಗಳೂರಿನಿಂದ ಹಿಡಿದು ಮುಂಬೈವರೆಗಿನ ಕೋಸ್ಟಲ್‌ನಲ್ಲಿ ಅವರದ್ದೇ ಹವಾ.
ಹಾಗಾದ್ರೆ, ಈ ಸ್ನೇಹಿತರು “ಹಫ್ತಾ’ ವಸೂಲಿಗೆ ಇಳಿದಿರುವುದೇಕೆ? “ಹಫ್ತಾ’ ವಸೂಲಿ ಹಿಂದಿನ ಕಾರಣ – ಉದ್ದೇಶವೇನು, “ಹಫ್ತಾ’ ಹೆಸರಿನಲ್ಲಿ ಕರಾವಳಿಯಲ್ಲಿ ಹರಿಯುವ ನೆತ್ತರ ಕಹಾನಿಗೆ ಬ್ರೇಕ್ ಬೀಳುತ್ತಾ, ಇಲ್ಲವಾ? ಇವೆಲ್ಲದರ ನಡುವೆಯುವ ಕಥೆಯೇ ಈ ವಾರ ತೆರೆಗೆ ಬಂದಿರುವ “ಹಫ್ತಾ’ ಚಿತ್ರ.
ಹೆಸರೇ ಹೇಳುವಂತೆ “ಹಫ್ತಾ’ ಔಟ್ ಆ್ಯಂಡ್ ಔಟ್ ಮಾಸ್ ಎಲಿಮೆಂಟ್ ಇಟ್ಟುಕೊಂಡು ಬಂದಿರುವ ಚಿತ್ರ. ಅದರಲ್ಲೂ ಕಳೆದ ಕೆಲ ತಿಂಗಳಿನಿಂದ ಅಂಡರ್‌ವರ್ಲ್ಡ್, ಮಾಫಿಯಾ, ರೌಡಿಸಂ ಕಥಾಹಂದರದ ಚಿತ್ರಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು ಹಾರರ್, ಥ್ರಿಲ್ಲರ್ ಚಿತ್ರಗಳ ಹಿಂದೆ ಬಿದ್ದಿದ್ದ ಕನ್ನಡ ಸಿನಿ ಪ್ರಿಯರಿಗೆ “ಹಫ್ತಾ’ ಮತ್ತೂಮ್ಮೆ ಭೂಗತ ಲೋಕನ ದರ್ಶನ ಮಾಡಿಸುವಂತಿದೆ.
“ಹಫ್ತಾ’ದಲ್ಲಿ ಕ್ರೌರ್ಯ – ಅಟ್ಟಹಾಸವಿದೆ. ಲಾಂಗು-ಮಚ್ಚು, ಗುಂಡಿನ ಮೊರೆತವಿದೆ. ಅದರ ಜೊತೆಗೊಂದು ನವಿರಾದ ಲವ್‌ಸ್ಟೋರಿಯೂ ಇದೆ. ಒಂದು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಚಿತ್ರಕ್ಕೆ ಏನೇನು ಎಲಿಮೆಂಟ್ಸ್ ಇರಬೇಕೋ, ಅದೆಲ್ಲವನ್ನೂ ಅರ್ಥೈಸಿಕೊಂಡು, ಚಿತ್ರದಲ್ಲಿ ಅಳವಡಿಸಿದ್ದಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ. ಆದರೆ ಅದೆಷ್ಟು ವರ್ಕೌಟ್ ಆಗಿದೆ ಎನ್ನುವುದುದೇ ಮುಂದಿರುವ ಪ್ರಶ್ನೆ.
ಸಂಪೂರ್ಣ ಕರಾವಳಿ ಹಿನ್ನೆಲೆಯಲ್ಲಿ ಸಾಗುವ “ಹಫ್ತಾ’ದಲ್ಲಿ ಕರಾವಳಿಯ ಜನಜೀವನ, ಭೂಗತಲೋಕದ ಕ್ರೌರ್ಯ ಎಲ್ಲವೂ ಅನಾವರಣಗೊಂಡಿದೆ. ಆದರೆ ಭಾಷಾ ಸೊಗಡು ಕಾಣೆಯಾಗಿದೆ. ಕೆಲವೊಮ್ಮೆ ಶರವೇಗದಲ್ಲಿ ಸಾಗುವ ಚಿತ್ರಕಥೆ, ಅಲ್ಲಲ್ಲಿ “ಜರ್ಕ್’ ತೆಗೆದುಕೊಳ್ಳುತ್ತದೆ.
ಚಿತ್ರಕಥೆ, ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಎಚ್ಚರ ವಹಿಸಿದ್ದರೆ, “ಹಫ್ತಾ’ದ ಇಂಪ್ಯಾಕ್ಟ್ ಇನ್ನೂ ಹೆಚ್ಚಾಗಿರುತ್ತಿತ್ತು. ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಮೊದಲ ಬಾರಿಗೆ ನಾಯಕನಾಗಿ ವರ್ಧನ್ ತೀರ್ಥಹಳ್ಳಿ ಪಾತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ.
ಅಭಿನಯದಲ್ಲಿ ಇನ್ನಷ್ಟು ಮಾಗಿದರೆ, ವರ್ಧನ್ ಮಾಸ್ ಹೀರೋ ಆಗಬಲ್ಲರು. ರಾಘವ ನಾಗ್, ಬಿಂಬಶ್ರೀ ನೀನಾಸಂ, ಸೌಮ್ಯ ಅವರ ಅಭಿನಯ ಪರವಾಗಿಲ್ಲ ಎನ್ನಬಹುದಷ್ಟೇ. ಖಳನಾಯಕನಾಗಿ ಬಲರಾಜವಾಡಿ ಎಂದಿನಂತೆ ಅಬ್ಬರದ ಅಭಿನಯ ನೀಡಿದ್ದಾರೆ.
ಉಳಿದಂತೆ ಇತರ ಕಲಾವಿದರು ಹಾಗೆ ಬಂದು ಹೀಗೆ ಹೋಗುವಂತಿರುವುದರಿಂದ, ಅವರ ಬಗ್ಗೆ ಹೆಚ್ಚೇನು ಮಾತನಾಡುವಂತಿಲ್ಲ. ತಾಂತ್ರಿಕವಾಗಿ “ಹಫ್ತಾ’ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುತ್ತದೆ.
ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ಚೆನ್ನಾಗಿದ್ದರೆ, ಜಿ. ಯಾರ್ಡ್ಲಿ ಸಂಗೀತದ ಹಾಡುಗಳು ಕಿವಿಯಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಒಟ್ಟಾರೆ ಪಕ್ಕಾ ಮಾಸ್ ಆಡಿಯನ್ಸ್‌ಗೆಂದೇ ಮಾಡಲಾದ “ಹಫ್ತಾ’ ಆ್ಯಕ್ಷನ್ ಪ್ರಿಯರಿಗೆ ಹೆಚ್ಚು ಇಷ್ಟವಾದೀತು.
ಚಿತ್ರ: ಹಫ್ತಾ
ನಿರ್ಮಾಣ: ಮೈತ್ರಿ ಮಂಜುನಾಥ್, ಬಾಲರಾಜ್
ನಿರ್ದೇಶನ: ಪ್ರಕಾಶ್ ಹೆಬ್ಬಾಳ
ತಾರಾಗಣ: ವರ್ಧನ್ ತೀರ್ಥಹಳ್ಳಿ, ರಾಘವ್ ನಾಗ್, ಬಿಂಬಶ್ರೀ ನೀನಾಸಂ, ಸೌಮ್ಯ ತತೀರ, ಬಲ ರಾಜವಾಡಿ, ದಶಾವರ ಚಂದ್ರು, ಉಗ್ರಂ ರವಿ ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.