Garadi movie review: ಕುಸ್ತಿ ಆಟ ಮತ್ತು ಪ್ರೇಮಪಾಠ


Team Udayavani, Nov 12, 2023, 9:02 AM IST

garadi movie review

ಗರಡಿ ಎಂದಾಗ ಮೊದಲು ನೆನಪಾಗುವುದು ಕುಸ್ತಿ ಕಾಳಗ. ದೇಸಿ ಕ್ರೀಡೆಯಾದ ಕುಸ್ತಿಯಲ್ಲಿ ಸೆಣಸುವವರ ನೆಚ್ಚಿನ ತಾಣ “ಗರಡಿ’. ನಿರ್ದೇಶಕ ಯೋಗರಾಜ್‌ ಭಟ್‌ ಇದೇ “ಗರಡಿ’ ಮನೆಯಲ್ಲಿ ಕುಸ್ತಿ ಕಾಳಗದ ಜೊತೆ ಪ್ರೇಮಯಾನವನ್ನು ಮಾಡಿಸಿದ್ದಾರೆ. ಆ ಮಟ್ಟಿಗೆ “ಗರಡಿ’ ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಈ ವಾರ ತೆರೆಕಂಡಿರುವ “ಗರಡಿ’ ಚಿತ್ರದಲ್ಲಿ ಏನಿದೆ ಎಂದು ಕೇಳಿದರೆ ಮಾಸ್‌ಗೆ ಬೇಕಾದ ಭರ್ಜರಿ ಫೈಟ್‌, ಡೈಲಾಗ್‌, ಕ್ಲಾಸ್‌ಗೆ ಸೆಂಟಿಮೆಂಟ್‌, ಲವ್‌, ಕಾಮಿಡಿ, ಚೆಂದದ ಹಾಡುಗಳಿವೆ. ಈ ಮೂಲಕ “ಗರಡಿ’ಯಲ್ಲಿ ಎರಡೂ ವರ್ಗಗಳನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ ಭಟ್ಟರು.

ಲವ್‌ಸ್ಟೋರಿ, ಫ‌ನ್‌ ಸಿನಿಮಾಗಳನ್ನು ಮಾಡುವಲ್ಲಿ ಭಟ್ಟರು ಎತ್ತಿದ ಕೈ. ಆದರೆ, ಈ ಬಾರಿ ತಮ್ಮದಲ್ಲದ ಹೊಸ ಜಾನರ್‌ ಅನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ಭಟ್ಟರು ಯಶಸ್ವಿಯಾಗಿದ್ದಾರೆ. ಆ ಮೂಲಕ ಕ್ರೀಡೆ ಹಿನ್ನೆಲೆಯ “ಗರಡಿ’ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಎಲ್ಲಾ ಓಕೆ, ಸಿನಿಮಾ ಕಥೆಯೇನು ಎಂದು ನೀವು ಕೇಳಬಹುದು. “ಗರಡಿ’ ಮನೆಯಲ್ಲೇ ಬೆಳೆದ ಹುಡುಗನೊಬ್ಬನಿಗೆ ಕುಸ್ತಿ ಕಲಿಯಲು ಅವಕಾಶ ಸಿಗುವುದಿಲ್ಲ. ಅದಕ್ಕೊಂದು ಕಾರಣವಿದೆ. ಹೀಗಿರುವಾಗ ಆ ಹುಡುಗ ಏನು ಮಾಡುತ್ತಾನೆ, ತನ್ನ ಆಸೆಯನ್ನು ಈಡೇರಿಸಿಕೊಂಡು ಜಯಿಸುತ್ತಾನಾ ಅಥವಾ ಬೇರೆ ಹಾದಿ ಹಿಡಿಯುತ್ತಾನಾ.. ಇದು ಸಿನಿಮಾದ ಮೂಲ ಅಂಶ. ಇದನ್ನು ಒಂದಷ್ಟು “ಪ್ರಭಾವಳಿ’ಯೊಂದಿಗೆ ಕಲರ್‌ಫ‌ುಲ್‌ ಆಗಿ ಕಟ್ಟಿಕೊಡಲಾಗಿದೆ.

ಈ ಹಾದಿಯಲ್ಲಿ ಮೋಸ, ದ್ವೇಷ, ಪ್ರೀತಿ, ಪ್ರೇಮ, ಹೊಡೆದಾಟ ಎಲ್ಲವೂ ಬಂದು ಹೋಗುತ್ತದೆ. ಕ್ರೀಡೆ ಹಿನ್ನೆಲೆಯ ಸಿನಿಮಾ ಎಂದಾಕ್ಷಣ ಅದನ್ನು ಗಂಭೀರವಾಗಿಯೇ ಹೇಳಿದರೆ ಪ್ರೇಕ್ಷಕರಿಗೆ ಬೋರ್‌ ಆಗಬಹುದು ಎಂಬ ಅರಿವು ಭಟ್ಟರಿಗೆ ಚೆನ್ನಾಗಿಯೇ ಇದ್ದ ಕಾರಣ ಅಲ್ಲಲ್ಲಿ ಕಲರ್‌ಫ‌ುಲ್‌ ಹಾಡು, ಡೈಲಾಗ್‌ ಹಾಗೂ ಫ‌ನ್‌ ಅಂಶಗಳನ್ನು ಸೇರಿಸಿದ್ದಾರೆ.

ಮೊದಲರ್ಧ ಎಲ್ಲಾ ಸಿನಿಮಾಗಳಂತೆ ಪಾತ್ರ, ಪರಿಚಯ ಸೇರಿದಂತೆ ಇತರ ಅಂಶಗಳೊಂದಿಗೆ ಸಾಗುತ್ತದೆ. ಆದರೆ, ಸಿನಿಮಾದ ಕಥೆ ಹಾಗೂ ಟ್ವಿಸ್ಟ್‌-ಟರ್ನ್ಗಳು ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಈ ಮೂಲಕ ಪ್ರೇಕ್ಷಕರ ಕುತೂಹಲ ಕೂಡಾ ತೆರೆದುಕೊಳ್ಳುತ್ತದೆ. ಇನ್ನು ಸಿನಿಮಾದ ಹೈಲೈಟ್‌ಗಳಲ್ಲಿ ದರ್ಶನ್‌ ಅವರ ಎಂಟ್ರಿ ಕೂಡಾ ಒಂದು. ಸಖತ್‌ ರಗಡ್‌ ಎಂಟ್ರಿ ಮೂಲಕ ಮಾಸ್‌ ಪ್ರೇಕ್ಷಕರಿಗೆ ಖುಷಿ ನೀಡುತ್ತಾರೆ. ಅವರ ಎಂಟ್ರಿಗೊಂದು ಕಾರಣವಿದೆ. ಅದನ್ನು ತೆರೆಮೇಲೆಯೇ ನೋಡಿದರೆ ಚೆಂದ.

ನಾಯಕ ಯಶಸ್‌ ಸೂರ್ಯ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿ ಮತ್ತೂಮ್ಮೆ ಭರವಸೆ ಮೂಡಿಸಿದ್ದಾರೆ. ಗರಡಿ ಮನೆಯಲ್ಲಿ ಬೆಳೆದ ಹುಡುಗನಿಂದ ಹಿಡಿದು ಹುಡುಗಿ ಹಿಂದೆ ಬೀಳುವ ಲವರ್‌ಬಾಯ್‌ ಶೇಡ್‌ನ‌ಲ್ಲೂ ಯಶಸ್‌ ಇಷ್ಟವಾಗುತ್ತಾರೆ. ನಾಯಕಿ ಸೋನಾಲ್‌ ಪಾತ್ರಕ್ಕೊಂದು ತೂಕವಿದೆ. ಗರಡಿ ಮನೆಯ ಗುರುವಾಗಿ ನಟಿಸಿರುವ ಬಿ.ಸಿ.ಪಾಟೀಲ್‌ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಅವರ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ರವಿಶಂಕರ್‌, ಸುಜಯ್‌ ಸೇರಿದಂತೆ ಇತರರು ನಟಿಸಿದ್ದಾರೆ. ಹಾಡೊಂದರಲ್ಲಿ ನಿಶ್ವಿ‌ಕಾ ನಾಯ್ಡು ಬೋಲ್ಡ್‌ ಸ್ಟೆಪ್‌ ಹಾಕಿದ್ದಾರೆ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.