Genius Mutta review: ಎಲ್ಲರಂತಲ್ಲ ಈ ಜಾಣ!
Team Udayavani, Aug 10, 2024, 10:53 AM IST
ಕಷ್ಟ ಯಾರಿಗಿಲ್ಲ ಹೇಳಿ? ಅದನ್ನು ಎದುರಿಸಲು ಹಿಂಜರಿಯದ ಛಲ ಇರಬೇಕು. ಮುಖ್ಯವಾಗಿ ಜಾಣ್ಮೆ ತೋರಬೇಕು. ಅದು ಹೇಗೆ ಎಂಬುದನ್ನು “ಜೀನಿಯಸ್ ಮುತ್ತ’ನಿಂದ ನೋಡಿ ಕಲಿಯಬಹುದು. ಸಣ್ಣ ವಯಸ್ಸಿನಲ್ಲೇ ದೊಡ್ಡತನದ ಪ್ರಬುದ್ಧತೆ ತೋರಿಸುವ ಪೋರನೊಬ್ಬನ್ನ ಪಯಣವಿದು.
ಬಾಲ್ಯದಿಂದಲೇ ಆಸ್ಪತ್ರೆ, ರೋಗಿಗಳು ..ಇದೇ ವಾತಾವರಣದಲ್ಲಿ ಬೆಳೆದ ಮುತ್ತನಿಗೆ, ವೈದ್ಯಕೀಯದಲ್ಲಿ ಅಪಾರ ಆಸಕ್ತಿ. ಹೀಗೆ ಸಾಗುವ ಕಥೆಯಲ್ಲಿ ಇದಕ್ಕಿದ್ದಂತೆ ಮುತ್ತನ ತಾಯಿ ವಿರಳ ಕಾಯಿಲೆಗೆ ತುತ್ತಾಗುತ್ತಾಳೆ. ಹೆಚ್ಚಿನ ಚಿಕಿತ್ಸೆಗೆಂದು ತಾಯಿಯನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆತರುವ ಮುತ್ತನಿಗೆ ಎದುರಾಗುವ ಕಷ್ಟ ಹಲವಾರು. ಅರಿಯದ ಊರಲ್ಲಿ ತನ್ನ ತಾಯಿಗೆ ಚಿಕಿತ್ಸೆ ಕೊಡಿಸುತ್ತಾನೋ ಇಲ್ಲವೋ ಎಂಬುದೆ ಚಿತ್ರದ ಕಥಾವಸ್ತು.
ಜೀನಿಯಸ್ ಹೆಸರಿಗೆ ತಕ್ಕಂತೆ, ಎದುರಾಗುವ ಪ್ರತಿ ಕಷ್ಟದ ಸನ್ನಿವೇಶಗಳನ್ನು ಜಾಣ್ಮೆಯಿಂದ ಎದುರಿಸುವ ಮುತ್ತ ಎಲ್ಲರಿಗೂ ಆಪ್ತವಾಗುತ್ತಾನೆ. ಇಲ್ಲಿ ಮುತ್ತನ ಪಾತ್ರದ ಮುಗ್ಧತೆ, ಜಾಣ್ಮೆ, ಆತ ತೋರುವ ಆತ್ಮೀಯ ಭಾವ, ಲವಲವಿಕೆಯ ವಾತಾವರಣ ಇವೇ ಚಿತ್ರದ ಹೈಲೈಟ್ಸ್. ಮಕ್ಕಳಿಗೊಂದು ಪ್ರೇರಣೆಯಿರಲಿ ಎಂಬಂತೆ ಈ ಸಿನಿಮಾ ಮೂಡಿಬಂದಿದೆ. ನಾಗಿಣಿ ಭರಣ ಅವರು ಕಥೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ಹೊಸದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಬಾಲನಟನಾಗಿ ಸಿನಿರಂಗಕ್ಕೆ ಕಾಲಿಟ್ಟಿರುವ ಮಾಸ್ಟರ್ ಶ್ರೇಯಸ್ ಜೈಪ್ರಕಾಶ್ ಭರವಸೆ ಮೂಡಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಗಮನ ಸೆಳೆಯುತ್ತಾರೆ. ಮುತ್ತನ ಜಾಣ್ಮೆಯ ಸನ್ನಿವೇಶಗಳು ಇಷ್ಟವಾಗುತ್ತವೆ. ಚಿತ್ರದ ಛಾಯಾಗ್ರಹಣ ಉತ್ತಮವಾಗಿದೆ. ಟಿ.ಎಸ್. ನಾಗಾಭರಣ, ಪದ್ಮಾ ವಾಸಂತಿ, ಸುಂದರ್‌ರಾಜ್, ಪ್ರಿಯಾ ಅವಿನಾಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.