Gowri Movie Review; ಪ್ರೀತಿ-ಪ್ರತಿಭೆಗಳ ಸಂಗಮ
Team Udayavani, Aug 16, 2024, 10:38 AM IST
ಸಾಧಕರ ಪಯಣ ಎಂದೂ ಸುಲಭದ್ದಾಗಿರುವುದಿಲ್ಲ. ಅಲ್ಲಿ ನೂರಾರು ಅಡೆ-ತಡೆ, ಏಳು-ಬೀಳು ಎಲ್ಲವೂ ಇರುತ್ತದೆ. ಎಲ್ಲ ಮಿತಿಗಳನ್ನು ಮೀರಿ ಸಾಧಿಸುವುದರ ಜತೆಗೆ ಮತ್ತೂಬ್ಬರಿಗೆ ಪ್ರೇರಣೆಯಾಗುವುದು ಜೀವನದ ಸಾರ್ಥಕ ಕ್ಷಣವೆನ್ನಬಹುದು. ಇದೇ ಅಂಶವನ್ನಿಟ್ಟುಕೊಂಡು ತೆರೆಕಂಡ ಸಿನಿಮಾ “ಗೌರಿ’
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೆ, ತನ್ನ ನ್ಯೂನತೆಯನ್ನು ಮೀರಿ ಹಿರಿದಾದ ಗುರಿ ಸಾಧಿಸಲು ಹೊರಡುವ ನಾಯಕ ಒಂದೆಡೆ ಯಾದರೆ, ತನ್ನ ಪ್ರಿಯಕರನ ಕೊನೆ ಯಾಸೆ ಪೂರೈಸು ವುದರಲ್ಲೇ ವ್ಯಸ್ಥಳಾ ಗುವ ನಾಯಕಿ ಇನ್ನೊಂ ದೆಡೆ. ಇವರಿಬ್ಬರ ಭೇಟಿ ಆಕಸ್ಮಿಕ. ನಾಯಕನ ಬಾಳಲ್ಲಿ ಎದುರಾಗುವ ಸನ್ನಿವೇಶ, ನಾಯಕಿಯ ಜೀವನದಲ್ಲಾದ ವಿಷಾದದ ಘಟನೆ ಹೀಗೆ ಕಥೆ ಸಾಗುತ್ತದೆ. ಅಂತಿಮವಾಗಿ ಇಬ್ಬರೂ ಸೇರಿ ಹೊಸ ಸಾಧನೆಯ ಮುನ್ನುಡಿ ಬರೆಯುತ್ತಾರೆ. ಅದೇನೆಂದು ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಸಂಗೀತ ಲೋಕದ ಕಾಣದ ಮುಖವೊಂದು ಇಲ್ಲಿ ಅನಾವರಣಗೊಂಡಿರುವುದು, ಪ್ರೇಕ್ಷಕನ ಮನಸ್ಸು ತಟ್ಟುತ್ತದೆ. ಚಿತ್ರದಲ್ಲಿ ಒಂದಿಷ್ಟು ನೈಜ ಘಟನೆಗಳು ಅಡಕವಾಗಿವೆ. ಸಾಧಿಸುವವನಿಗೆ ಯಾವುದೂ ಅಡ್ಡಿಯಲ್ಲ ಎಂಬ ಧ್ಯೇಯವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಲ್ಲಿ ಪ್ರಬಲವಾಗಿ ಬಿಂಬಿಸಿದ್ದಾರೆ. ಸರಳ ಕಥೆಯಲ್ಲೇ ಅನೇಕ ವಿಶೇಷತೆಗಳನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರೆ. ವರ್ಣರಂಜಿತ ನಿರೂಪಣಾ ಶೈಲಿ ಸಿನಿಮಾದ ಹೈಲೈಟ್ ಎನ್ನಬಹುದು
ನಾಯಕ ನಟನಿಗಿರಬೇಕಾದ ಸಾಮರ್ಥ್ಯ ಹೊಂದಿರುವ ಸಮರ್ಜಿತ್ ಲಂಕೇಶ್, ತಮ್ಮ ಚೊಚ್ಚಲ ಚಿತ್ರದಲ್ಲೇ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಗನ ನಟನೆಗೆ ತಂದೆಯೇ ಆ್ಯಕ್ಷನ್-ಕಟ್ ಹೇಳಿರುವುದು ವಿಶೇಷವಾಗಿದ್ದು, ಅಪ್ಪ-ಮಗನ ಜೋಡಿ ಚಿತ್ರದ ತೂಕ ಹೆಚ್ಚಿಸಿದೆ.
ಇನ್ನೂ ಭರವಸೆಯ ಹೆಜ್ಜೆಯೊಂದಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಾನ್ಯಾ ಅಯ್ಯರ್, ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಕುಮಾರ್ ಹಾಗೂ ಮಾನಸಿ ಸುಧೀರ್ ಅವರ ನಟನೆ ಗಮನ ಸೆಳೆಯುತ್ತದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಬಂದು ಹೋಗುವ ಪ್ರಿಯಾಂಕಾ ಉಪೇಂದ್ರ, ಮುಖ್ಯಮಂತ್ರಿ ಚಂದ್ರು, ಯೋಗೇಶ್, ಸುಚೇಂದ್ರ ಪ್ರಸಾದ್ ರಿಕ್ಕಿ ಕೇಜ್, ಸಂಜನಾ ಆನಂದ್, ಅಕುಲ್ ಬಾಲಾಜಿ ಈ ತಾರಾ ಕಲಾವಿದರ ಅತಿಥಿ ಪಾತ್ರಗಳು ಸಿನಿಮಾವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
ಸಂಗೀತವೇ ಚಿತ್ರದ ಮೂಲ ವಸ್ತು ವಿಷಯವಾದ್ದರಿಂದ, ಇಲ್ಲಿನ ಹಾಡುಗಳು ಹೊಸ ಇಂಪು ತಂದಿವೆ. ಎ.ವಿ. ಕೃಷ್ಣ ಕುಮಾರ್ ಅವರ ಛಾಯಾಗ್ರಹಣದಲ್ಲಿ ಚಿತ್ರದ ದೃಶ್ಯಗಳು ಸುಂದರ. ಚಿತ್ರದ ಅಂತ್ಯಕ್ಕೆ ಪ್ರೇಕ್ಷಕರಲ್ಲಿ ಸ್ಫೂ³ರ್ತಿಯ ಛಾಯೆ ಅರಳುವುದಂತೂ ಖಂಡಿತ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.