Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ
Team Udayavani, Dec 7, 2024, 3:58 PM IST
ಕಾಲವೇ ಹಾಗೆ, ತಾನು ಬದಲಾಗುವುದಲ್ಲದೇ ಮನುಷ್ಯರನ್ನು ಬದಲಾಯಿಸುತ್ತದೆ. ಹಳೆಯದನ್ನೆಲ್ಲ ಮರೆಸಿ, ಹೊಸ ಜಂಜಡದೊಳಗೆ ಸಿಲುಕಿಸುತ್ತದೆ. ಜೀವನ ಮುಂದೆ ಸಾಗಿದಂತೆ, ಹಿಂದಿನದೂ ಬೇಡವೆನ್ನಿಸುವುದು ಸಹಜ. ಇದನ್ನೆ ಕಥೆಯಾಗಿಸಿ ಜೊತೆಗೆ ಕರಾವಳಿ ಭಾಗದ ವಿಶಿಷ್ಟ ಸಮುದಾಯವೊಂದರ ಆಚರಣೆಯನ್ನು ಅನಾವರಣಗೊಳಿಸಿದೆ ಗುಂಮ್ಟಿ ಚಿತ್ರ.
ಯಾವುದೇ ಅಬ್ಬರದ ಸಂಗೀತ, ಫೈಟ್, ಡ್ಯಾನ್ಸ್ ಇಲ್ಲದ ಅಪ್ಪಟ ಕಲಾತ್ಮಕ ಸಿನಿಮಾ ಗುಂಮ್ಟಿ. ಹೆಸರೇ ಆಕರ್ಷಕವಾಗಿದೆ. ಗುಂಮ್ಟಿ ಎಂದರೆ ಕುಡುಬಿ ಸಮುದಾಯದ ಸಾಂಪ್ರದಾಯಿಕ ವಾದ್ಯ ಹಾಗೂ ಆಚರಣೆ. ಪ್ರತಿ ವರ್ಷ ಹೋಳಿ ಹಬ್ಬದ ಸಮಯದಲ್ಲಿ ಸಮುದಾಯದವರೆಲ್ಲ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಕಾಲಕ್ರಮೇಣ ಉದ್ಯೋಗಕ್ಕೆಂದು ನಗರಕ್ಕೆ ವಲಸೆ ಹೋದ ಜನರಿಂದ ಈ ಹಬ್ಬದ ಸಂಭ್ರಮ ಕಳೆಗುಂದುತ್ತದೆ. ಆಗ ನಾಯಕ ಊರಿಗೆ ಮರಳಿ ಗುಂಮಿr ಆಚರಣೆಗೆ ಮತ್ತಷ್ಟು ಜೀವ ತುಂಬಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಊರೂರು ಅಲೆದಾಡುತ್ತಾನೆ. ಕೊನೆಗೆ ಆ ಪ್ರಯತ್ನದಲ್ಲಿ ನಾಯಕ ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಂಡರೆ ಚೆಂದ.
ಸಂದೇಶ್ ಶೆಟ್ಟಿ ನಿರ್ದೇಶಕ ಹಾಗೂ ನಾಯಕನ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಥೆಯನ್ನು ಅತ್ಯಂತ ನಿಧಾನವಾಗಿ ಹೇಳಲಾಗಿದೆ. ಕುಡುಬಿ ಸಮುದಾಯ, ಗುಂಮ್ಟಿ ಆಚರಣೆ ಬಗ್ಗೆ ಇನ್ನಷ್ಟು ಹೇಳಬಹುದಿತ್ತು. ಅನೀಷ್ ಡಿಸೋಜಾ ಅವರ ಛಾಯಾಗ್ರಹಣದಲ್ಲಿ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ಉಳಿದಂತೆ ವೈಷ್ಣವಿ ನಾಡಿಗ್, ರಂಜನ್, ಕರಣ್, ಯಶ್, ರಘು ಪಾಂಡೇಶ್ವರ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.