ಚಿತ್ರ ವಿಮರ್ಶೆ: ಬೇರೆ ಬೇರೆ ಮನಸ್ಥಿತಿಯ ಒಂದು ಕಥೆ ಹೊಸ ದಿನಚರಿ


Team Udayavani, Dec 24, 2022, 12:21 PM IST

hosa dinachari review

ಪ್ರೀತಿಗೆ ನಾನಾ ಅರ್ಥಗಳಿರುತ್ತವೆ. ಅದನ್ನು ಯಾವುದೋ ಒಂದು ಆಯಾಮದಲ್ಲಿ ನೋಡಲಾಗದು. ಹಾಗೆ ನೋಡಿದರೆ, ಪ್ರೀತಿಯ ಅರ್ಥ ಕಿರಿದಾಗುತ್ತದೆ. ಪ್ರೀತಿ ಯಾವಾಗಲೂ ಹಿರಿದಾಗುತ್ತ ಹೋಗಬೇಕೆ ಹೊರತು ಕಿರಿದಾಗುತ್ತ ಹೋಗಬಾರದು. ಪ್ರೀತಿ ವಿಸ್ತರಿದಷ್ಟು ಅದು ಬದುಕನ್ನು ಇನ್ನಷ್ಟು ಆವರಿಸಿಕೊಂಡು ವರ್ಣಮಯವಾಗಿಸುತ್ತದೆ. ಅದೇ ಪ್ರೀತಿ ಬದುಕಿನ ಬೇರೆ ಬೇರೆ ಹಂತದಲ್ಲಿ ಹೇಗೆಲ್ಲ ಅನುಭವಕ್ಕೆ ಬರುತ್ತದೆ ಎಂಬುದನ್ನು ತೆರೆಮೇಲೆ ಹೇಳಿರುವ ಚಿತ್ರ ಹೊಸ ದಿನಚರಿ’ ವಯೋವೃದ್ಧ ದಂಪತಿ, ಯುವ ಜೋಡಿ, ಸಂಗಾತಿಗಾಗಿ ಹುಡುಕಾಡುವ ಕ್ಯಾಬ್‌ ಡ್ರೈವರ್‌, ತನ್ನ ಬೇರುಗಳನ್ನು ಹುಡುಕಿಕೊಂಡು ವಿದೇಶದಿಂದ ಬರುವ ಹುಡುಗಿ… ಹೀಗೆ ನಾಲ್ಕು ಬೇರೆ ಬೇರೆ ಹಿನ್ನೆಲೆಯ, ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳ ಕಥೆಯನ್ನು ಒಂದಕ್ಕೊಂದು ಬೆಸೆದು ಅದೆಲ್ಲದರ ಸಾರವನ್ನು “ಹೊಸ ದಿನಚರಿ’ಯ ಮೂಲಕ ತೆರೆದಿಡಲಾಗಿದೆ.

ಇಲ್ಲಿ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಂತೆ, ಆ್ಯಕ್ಷನ್‌ ಡ್ಯಾನ್ಸ್‌, ಮಾಸ್‌ ಡೈಲಾಗ್ಸ್‌ ಅಬ್ಬರವಿಲ್ಲ. ನಮ್ಮ ನಡುವೆಯೇ ನಡೆಯುವ ವಿಷಯಗಳನ್ನು ಆತುರವಿಲ್ಲದೆ ಸಿನಿಮಾದಲ್ಲಿ ಹೇಳಿರುವುದರಿಂದ, ಅದನ್ನು ಅಷ್ಟೇ ನಿಧಾನವಾಗಿ ಕೇಳುವ ತಾಳ್ಮೆ ಪ್ರೇಕ್ಷಕರಿಗೂ ಇರಬೇಕು. ಅಂಥದ್ದೊಂದು ತಾಳ್ಮೆಯಿದ್ದರೆ, ಖಂಡಿತವಾಗಿಯೂ “ಹೊಸ ದಿನಚರಿ’ಯಲ್ಲಿ ಒಂದಷ್ಟು ಹೊಸ ವಿಷಯಗಳ ಅನಾವರಣವಾಗುತ್ತದೆ.

ಇನ್ನು ಯಾವುದೇ ಸ್ಟಾರ್‌ ಕಲಾವಿದರಿಲ್ಲದಿದ್ದರೂ, ಸಿನಿಮಾದ ಕೆಲ ಪಾತ್ರಗಳು ಮನಸ್ಸನ್ನು ಮುಟ್ಟುವಂತಿದೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್‌, ದೀಪಕ್‌ ಸುಬ್ರಹ್ಮಣ್ಯ, ಚೇತನ್‌ ವಿಕ್ಕಿ, ಮಂದಾರ, ಬೇಬಿ ಮನಿನಿ, ವರ್ಷ ಸುಸಾನ ಕುರಿಯನ್‌ ಹೀಗೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸರಳವಾಗಿ, ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುತ್ತಾರೆ. ಅತಿಯಾದ ವೈಭವಿಕರಣವಿಲ್ಲ ಕಾರಣ, ಬಹುತೇಕ ಎಲ್ಲ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ತೆರೆಮೇಲೆ ಸಿಕ್ಕಿದೆ.

ಉಳಿದಂತೆ ಇನ್ನಿತರ ಪಾತ್ರಗಳು, ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ತೆರೆಮೇಲೆ ಗಮನ ಸೆಳೆಯುತ್ತದೆ. ಛಾಯಾಗ್ರಹಣ, ಸಂಕಲನ, ಲೈಟಿಂಗ್‌, ಹಿನ್ನೆಲೆ ಸಂಗೀತ, ಒಂದೆರಡು ಹಾಡುಗಳು ಸಿನಿಮಾದ ಹೈಲೈಟ್ಸ್‌ ಪಟ್ಟಿಗೆ ಸೇರುತ್ತದೆ.

ಒಟ್ಟಾರೆ ಆಧುನಿಕ ಬದುಕಿನ ದಿನಚರಿಯಲ್ಲಿ ಸೇರಿಕೊಂಡಿರುವ ಜಂಜಾಟಗಳು, ಸಂಬಂಧಗಳನ್ನು, ಹಂಬಲಗಳು ಎಲ್ಲವನ್ನು ಹೊಸದಾಗಿ ಹೇಳಿರುವ ಪ್ರಯತ್ನ ಪ್ರಶಂಸನಾರ್ಹ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.