ಬಿಸಿ ತಾಗದ ಬಂಡಾಯ
Team Udayavani, Mar 15, 2020, 7:00 AM IST
ಉತ್ತರ ಕರ್ನಾಟಕದ ನರಗುಂದದ ಯುವ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಸ್ವಾಭಿಮಾನಿಯಾಗಿ ಒಕ್ಕಲುತನವನ್ನು ನಡೆಸಿಕೊಂಡು, ಊರಿನವರಿಗೆಲ್ಲ ಅಚ್ಚುಮೆಚ್ಚಾಗಿರುವಾತ. ಈತನ ನೇರ ನಡೆ, ನುಡಿ, ನ್ಯಾಯಪರ ನಿಲುವು ಸಹಜವಾಗಿಯೇ ಒಂದಷ್ಟು ವಿರೋಧಿಗಳ ಸಂಖ್ಯೆಗೂ ಕಾರಣವಾಗಿರುತ್ತದೆ. ಹೀಗಿರುವಾಗಲೇ, ರೈತರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸಬೇಕಾದ ಸರಕಾರ ಇದ್ದಕ್ಕಿದ್ದಂತೆ ನೀರಿನ ಮೇಲಿನ ಸುಂಕ ಮತ್ತು ಅಭಿವೃದ್ಧಿ ಕರವನ್ನು ಹೆಚ್ಚಿಸುತ್ತದೆ.
ಇದು ಸಹಜವಾಗಿಯೇ ರೈತರಿಗೆ ಹೊರೆ ಯಾಗುವುದರ, ಜೊತೆ ಆಕ್ರೋಶಕ್ಕೂ ಕಾರಣವಾಗುತ್ತದೆ. ಈ ಆದೇಶವನ್ನು ಹಿಂಪಡೆ ಯು ವಂತೆ ರೈತರು ಮಾಡಿದ ಮನವಿಗಳಿಗೆ ಅಧಿಕಾರಿಗಳು, ಸರಕಾರ ಕಿಮ್ಮತ್ತು ನೀಡದಿದ್ದರಿಂದ, ಕೊನೆಗೆ ಅನಿವಾರ್ಯವಾಗಿ ರೈತರು ಸರಕಾರದ ಆದೇಶದ ವಿರುದ್ಧ ಬೀದಿಗಿಳಿಯುತ್ತಾರೆ. ಈ ಹೋರಾಟದ ನೇತೃತ್ವ ವಹಿಸುವ ಯುವ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮನಾಗುತ್ತಾನೆ.
1980ರ ದಶಕದಲ್ಲಿ ನಡೆದ ಈ ಘಟನೆ ನಂತರ ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳಿಗೂ ಕಾರಣವಾಗಿತ್ತು. ಇದೇ ಕಥೆಯನ್ನು ಇಟ್ಟು ಕೊಂಡು ತೆರೆಗೆ ಬಂದಿರುವ ಚಿತ್ರ “ನರಗುಂದ ಬಂಡಾಯ’. ನೈಜ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು, ಅದಕ್ಕೆ ಒಂದಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ “ನರಗುಂದ ಬಂಡಾಯ’ವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ನಾಗೇಂದ್ರ ಮಾಗಡಿ. ಆದರೆ ಅದು ಎಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ಮೂಡಿ ಬಂದಿದೆ ಅನ್ನೋದೆ ಮುಂದಿರುವ ಪ್ರಶ್ನೆ.
ಯಾವುದೇ ನೈಜ ಘಟನೆಯ ಕಥೆಯಾದರೂ, ತೆರೆಮೇಲೆ ಬರುವಾಗ ಅದರ ಚಿತ್ರಕಥೆ ಮತ್ತು ನಿರೂ ಪಣೆ ತುಂಬ ಮಹತ್ವ ಪಡೆದು ಕೊಳ್ಳು ತ್ತದೆ. ಚಿತ್ರಕಥೆ, ನಿರೂಪಣೆ ವಿಭಿನ್ನ ವಾಗಿ, ಪರಿಣಾಮ ಕಾರಿ ಯಾಗಿ ತೆರೆಮೇಲೆ ಬರದಿದ್ದರೆ, ಮಿಕ್ಕೆಲ್ಲವೂ ನೋಡುಗನಿಗೆ ಗೌಣ ಎನಿಸಲು ಶುರು ವಾಗುತ್ತದೆ. “ನರಗುಂದ ಬಂಡಾಯ’ ಚಿತ್ರದಲ್ಲೂ ಹಾಗೆಯೇ ಆಗಿದೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಕಥೆಗೆ ಕೊಟ್ಟಷ್ಟು ಗಮನವನ್ನು ಅದರ ಚಿತ್ರಕಥೆ, ನಿರೂಪಣೆ ಕಡೆಗೆ ಕೊಟ್ಟಂತೆ ಕಾಣುತ್ತಿಲ್ಲ.
ಸರಾಗ ವಾಗಿ ಸಾಗುವ ಕಥೆಗೆ ಚಿತ್ರಕಥೆ, ನಿರೂಪಣೆ ಅಲ್ಲಲ್ಲಿ ಹಾದಿ ತಪ್ಪಿಸುವಂತಿವೆ. ಅನಗತ್ಯ ಸನ್ನಿವೇಶಗಳು, ಅಲ್ಲಲ್ಲಿ ಕಿರಿಕಿರಿಯನ್ನು ಉಂಟು ಮಾಡುವ ಹಾಡು ಗಳು ಕಥೆಯ ಗಂಭೀರತೆಯನ್ನು ಕುಗ್ಗಿಸುತ್ತವೆ. ಕಮರ್ಶಿಯಲ್ ಕಂಟೆಂಟ್ ಇರಬೇಕು ಎಂದು ಮಾಡಿದ ಫೈಟ್ಸ್, ಸಾಂಗ್ಸ್, ಕಾಮಿಡಿ ಯಾವುದೂ ಚಿತ್ರದ ಕೈ ಹಿಡಿಯುವುದಿಲ್ಲ. ಒಂದು ಅಪರೂಪದ ಕಥಾವಸ್ತುವನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದಿ ರುವ ಎಲ್ಲ ಅವಕಾಶವನ್ನು ಚಿತ್ರತಂಡ ಎಲ್ಲೂ ಸಮರ್ಥವಾಗಿ ಬಳಸಿಕೊಂಡಂತಿಲ್ಲ.
ಇನ್ನು ಕಲಾವಿದರ ಅಭಿನಯ ಬಗ್ಗೆ ಹೇಳುವು ದಾದರೆ, ನವನಟ ರಕ್ಷ್ ಮೆಲ್ನೋಟಕ್ಕೆ ಯುವ ರೈತನಂತೆ ಕಂಡರೂ, ತನ್ನ ಹಾವ- ಭಾವ ಅಭಿನ ಯದಲ್ಲಿ ಅದನ್ನು ಪೂರ್ಣವಾಗಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಇನ್ನು ನಾಯಕಿ ಶುಭಾ ಪೂಂಜಾ ಪಾತ್ರ ಕೂಡ ಮನಸ್ಸಿನಲ್ಲಿ ಉಳಿ ಯು ವುದಿಲ್ಲ. ಎಂದಿನಂತೆ ಕಿಂಚಿತ್ತೂ ಬದಲಾವಣೆ ಯಿಲ್ಲದ ಸಾಧು ಕೋಕಿಲ ಹಾಸ್ಯ ಇಲ್ಲೂ ಮುಂದುವರೆದಿ ರುವುದರಿಂದ, ನೋಡುಗರಿಗೆ ನಗು ಬರುವುದು ಕಷ್ಟ.
ಉಳಿದಂತೆ ಅವಿನಾಶ್, ನೀನಾಸಂ ಅಶ್ವಥ್, ಸಂಗೀತಾ, ರವಿಚೇತನ್ ನಿರ್ದೇಶಕರ ಅಣತಿ ಯಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ, ಹಾಡುಗಳು, ಹಿನ್ನೆಲೆ ಸಂಗೀತ ಹೀಗೆ ತೆರೆ ಹಿಂದಿನ ತಾಂತ್ರಿಕ ಕಾರ್ಯಗಳಿಗೆ ನಿರ್ದೇಶಕರು, ನಿರ್ಮಾಪಕರು ಹೆಚ್ಚಿನ ಗಮನ ಕೊಡಬಹುದಿತ್ತು. ಸಿ.ಜಿ ವರ್ಕ್, ಕಲರಿಂಗ್, ಲೈಟಿಂಗ್ಸ್ ಮೊದಲಾದ ಕೆಲಸಗಳಲ್ಲಿ ಗುಣಮಟ್ಟದ ಕೊರತೆ ಕಾಣುತ್ತದೆ.
ಚಿತ್ರ: ನರಗುಂದ ಬಂಡಾಯ
ನಿರ್ಮಾಣ: ಶೇಖರ್ ಯಲುವಿಗಿ, ಸಿದ್ದೇಶ್ ವಿರಕ್ತಮಠ
ನಿರ್ದೇಶನ: ನಾಗೇಂದ್ರ ಮಾಗಡಿ
ತಾರಾಗಣ: ರಕ್ಷ್, ಶುಭಾ ಪೂಂಜಾ, ಅವಿನಾಶ್, ನೀನಾಸಂ ಅಶ್ವತ್, ರವಿ ಚೇತನ್, ಸಾಧುಕೋಕಿಲ, ಚಿತ್ಕಲಾ ಬಿರಾದಾರ್, ಸಂಗೀತಾ, ಭವ್ಯಾ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.