ಮಾನವೀಯ ಸಂಬಂಧಗಳ ಕಟ್ಟುವ ರಿಬ್ಬನ್‌

Team Udayavani, Jul 14, 2018, 11:08 AM IST

hasiru.jpg

“ಹಣ ಸಣ್ಣದು. ಮನುಷ್ಯ ಸಹ ಸಣ್ಣವನಾಗಬೇಕಾ …’ ಬಹುಶಃ ಹಾಗಾಗಬಹುದು ಎಂದು ಆಕೆ ಕನಸಿನಲ್ಲಿಯೂ ಎಣಿಸಲಿರಕ್ಕಿಲ್ಲ. ಅತ್ತೆ ಅಂತ ಬಾಯ್ತುಂಬ ಕೂಗುವವನು, ಮನೆಮಗನಂತೆ ಒಳ್ಳೆಯದನ್ನೇ ಬಯಸುವವನು, ಹಬ್ಬಕ್ಕೆ ಕರೆದು ಸಂಭ್ರಮಿಸುವವನು … ಬೆನ್ನಿಗೆ ಚೂರಿ ಹಾಕಬಹುದು ಎಂದು ಆಕೆ ನಿರೀಕ್ಷಿಸಿರುವುದಿಲ್ಲ. ಆದರೆ, ಅಂಥದ್ದೊಂದು ದಿನ ಎದುರಾಗೇಬಿಡುತ್ತದೆ.

ತಾವು ಜಮೀನಿಗೆಂದು ಕೊಟ್ಟ ದುಡ್ಡನ್ನು ಅವನು ನುಂಗಿದ್ದು ಕೇಳಿ ಆಘಾತವಾಗುತ್ತದೆ. ತಾವು ಮೋಸ ಹೋದೆವು ಅಂತ ತಿಳಿದು ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಗುತ್ತದೆ. ಆಗ ಆಕೆಯ ಬಾಯಿಂದ ಬರುವುದೇ, “ಹಣ ಸಣ್ಣದು. ಮನುಷ್ಯ ಸಹ ಸಣ್ಣವನಾಗಬೇಕಾ …’ ಎಂಬ ಮಾತು. ಇದುವರೆಗೂ ಗೀತರಚನೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಸಾಹಿತಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಇದೇ ಮೊದಲ ಬಾರಿಗೆ “ಹಸಿರು ರಿಬ್ಬನ್‌’ ಎಂಬ ಸಿನಿಮಾ ಮಾಡಿದ್ದಾರೆ.

ಸಾಹಿತಿಗಳೊಬ್ಬರು ಸಿನಿಮಾ ಮಾಡುವಾಗ, ಎಲ್ಲಿ ತಮ್ಮ ತನವನ್ನು ಕಳೆದುಕೊಳ್ಳುತ್ತಾರೋ ಎಂಬ ಭಯ ಅವರ ಓದುಗವಲಯದಲ್ಲಿ ಸಹಜವಾಗಿಯೇ ಇರುತ್ತದೆ. ಆದರೆ, ವೆಂಕಟೇಶಮೂರ್ತಿಗಳು ತಮ್ಮ ತನವನ್ನು ಕಳೆದುಕೊಳ್ಳದೆಯೇ, ಮನೆ ಮಂದಿಯೆಲ್ಲಾ ಕುಳಿತು ಒಂದು ಸದಭಿರುಚಿಯ ಚಿತ್ರವನ್ನು ಮಾಡಿದ್ದಾರೆ. ಇಲ್ಲಿ ಅವರು ಕಳೆದು ಹೋಗುತ್ತಿರುವ ಮಾನವೀಯ ಸಂಬಂಧಗಳ ಬಗ್ಗೆ, ಹಣಕ್ಕಾಗಿ ಸಂಬಂಧವನ್ನು ದೂರ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ.

ಅದಕ್ಕಾಗಿ ತಮ್ಮದೇ ಆತ್ಮಚರಿತ್ರೆಯಾದ “ಅನಾತ್ಮಕ ಕಥನ’ದಿಂದ ಒಂದು ಅಧ್ಯಾಯವನ್ನು ತೆಗೆದುಕೊಂಡಿದ್ದಾರೆ. ವೆಂಕಟೇಶಮೂರ್ತಿ ಅವರ “ಹಸಿರು ರಿಬ್ಬನ್‌’ ಚಿತ್ರದ ವಿಶೇಷವೆಂದರೆ, ಇದೊಂದು ಸಾಮಾನ್ಯ ಮನುಷ್ಯರ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಯಾವುದೇ ಘಟನೆಗೆ ಹೇಗೆ ಪ್ರತಿಕ್ರಯಿಸುತ್ತಾನೋ, ಅದನ್ನೇ ತೆರೆಯ ಮೇಲೆ ತರಲಾಗಿದೆ. ಪ್ರೇಕ್ಷಕರಿಗೆ ಇಡೀ ಕಥೆ ತಮ್ಮ ಸುತ್ತಮುತ್ತಲೇ ನಡೆಯುತ್ತಿದೆಯೇನೋ ಎನಿಸುವಷ್ಟು ಆಪ್ತವಾಗಿ ಇಡೀ ವಾತಾವರಣವನ್ನು ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿರುವುದು ಕೆಲವೇ ಕೆಲವು ಪಾತ್ರಗಳು. ಮೊದಲಾರ್ಧ ಆ ಪಾತ್ರಗಳ ಪರಿಚಯ, ಸಂಬಂಧದ ಕುರಿತಾಗಿ ಸಾಗಿದರೆ, ದ್ವಿತೀಯಾರ್ಧವು ಗಂಭೀರವಾಗುತ್ತಾ ಹೋಗುತ್ತದೆ. ಅದರಲ್ಲೂ ಕೊನೆಯ ಕೆಲವು ನಿಮಿಷಗಳ ಕಾಲ ಪ್ರೇಕ್ಷಕರನ್ನು ಗದ್ಗದಿತರನ್ನಾಗಿ ಮಾಡುವಲ್ಲಿ ವೆಂಕಟೇಶಮೂರ್ತಿಗಳು ಸಫ‌ಲರಾಗಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದಲ್ಲಿರುವುದು ಕೆಲವೇ ಪಾತ್ರಗಳು.

ಆ ಪೈಕಿ ಗಿರಿಜಾ ಲೋಕೇಶ್‌ ತಮ್ಮ ಅಭಿನಯದಿಂದ ಎಲ್ಲರ ಮನಗೆಲ್ಲುತ್ತಾರೆ. ನಿಖೀಲ್‌ ಮಂಜು, ಚೈತ್ರ, ಸುಪ್ರಿಯಾ ರಾವ್‌ ಮುಂತಾದವರು ಸಹ ಗಮನಸೆಳೆಯುತ್ತಾರೆ. ಉಪಾಸನಾ ಮೋಹನ್‌ ಅವರ ಸಂಗೀತದಲ್ಲಿ “ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು …’ ಹಾಡು ಚಿತ್ರದ ಹೈಲೈಟು. ಇನ್ನು ಪಿ.ವಿ.ಆರ್‌. ಸ್ವಾಮಿ ಅವರ ಛಾಯಾಗ್ರಹಣದಲ್ಲಿ ಇಡೀ ಪರಿಸರ ಆಪ್ತವೆನಿಸುತ್ತದೆ.

ಚಿತ್ರ: ಹಸಿರು ರಿಬ್ಬನ್‌
ನಿರ್ದೇಶನ: ಎಚ್‌.ಎಸ್‌. ವೆಂಕಟೇಶಮೂರ್ತಿ
ನಿರ್ಮಾಣ: ಕುಮಾರ್‌
ತಾರಾಗಣ: ನಿಖೀಲ್‌ ಮಂಜು, ಗಿರಿಜಾ ಲೋಕೇಶ್‌, ಬಿ. ಜಯಶ್ರೀ ಮುಂತಾದವರು

* ಚೇತನ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.