IFFI Goa: ಸಿನಿಮಾಗಳನ್ನು ಪ್ರೀತಿಸುವ ಗುಣ ಭಾರತೀಯ ಸಂಸ್ಕೃತಿಯಲ್ಲಿದೆ: ಪಾವೊ

Team Udayavani, Nov 26, 2023, 12:39 PM IST

IFFI Goa: ಸಿನಿಮಾಗಳನ್ನು ಪ್ರೀತಿಸುವ ಗುಣ ಭಾರತೀಯ ಸಂಸ್ಕೃತಿಯಲ್ಲಿದೆ: ಪಾವೊ

ಪಣಜಿ: ಸಿನಿಮಾಗಳನ್ನು ಪ್ರೀತಿಸುವ ಸದ್ಗುಣ ಭಾರತೀಯ ಸಂಸ್ಕೃತಿಯಲ್ಲೇ ಅಖಂಡವಾಗಿ ಅಡಕವಾಗಿದೆ ಎಂದು ಮುಕ್ತವಾಗಿ ಹೇಳಿದವರು ಕ್ರೋಷಿಯಾ ಸಿನಿಮಾ ನಿರ್ದೇಶಕ ಪಾವೊ ಮರಿನ್ಕೊವಿಕ್.

ಇಫಿ ಚಿತ್ರೋತ್ಸವದಲ್ಲಿ ಅವರ “ಬೋಸ್ನಿಯಾನ್ ಪಾಟ್ʼ ಚಿತ್ರ ಪ್ರದರ್ಶನಗೊಂಡಿದೆ. ಈ ಸಿನಿಮಾ ಕ್ರೋಷಿಯಾ ಮತ್ತು ಜರ್ಮನ್ ಭಾಷೆಯಲ್ಲಿ ರೂಪುಗೊಂಡಿದೆ.
“ನನ್ನ ಸಿನಿಮಾಕ್ಕೆ ಒಳ್ಳೆಯ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಅದರ ಬಿಡುಗಡೆ ಕುರಿತೂ ಯೋಚಿಸುತ್ತಿರುವೆ. ಒಂದು ಒಳ್ಳೆಯ ಸಿನಿಮಾವನ್ನು ಸ್ವೀಕರಿಸುವಂಥ ಪ್ರೀತಿ ಭಾರತೀಯರಲ್ಲಿದೆ. ಕೇರಳದ ಸಿನಿಮೋತ್ಸವಗಳಲ್ಲಿ ಭಾಗವಹಿಸಿರುವೆʼ ಎಂದರು.

ಈ ಸಿನಿಮಾ ವಲಸೆ, ಐಡೆಂಟಿಟಿ ಹಾಗೂ ಜನರ ಬದುಕನ್ನು ಬದಲಿಸಬಲ್ಲಷ್ಟು ಪ್ರಭಾವಶಾಲಿಯಾಗಿರುವ ಕಲೆಯ ಕುರಿತು ಪ್ರಸ್ತಾಪಿಸುತ್ತಿದೆ. ಸ್ವತಃ ಲೇಖಕನಾದ ಕಥಾನಾಯಕ (ಫಾರೂಕ್ ಸೇಗೊ) ಆಸ್ಟ್ರಿಯಾ ದೇಶದಲ್ಲಿ ನಿರಾಶ್ರಿತನಾಗಿದ್ದಾನೆ. ಅವನ ವಲಸೆ ಕುರಿತ ಪರವಾನಗಿ ನವೀಕರಣಗೊಳ್ಳಬೇಕಿದೆ. ಅದಕ್ಕಾಗಿ ಅವನು ಪಡುವ ಕಷ್ಟ. ಕೊನೆಗೂ ಅವಕಾಶ ಸಿಗದೇ ತನ್ನೂರಿಗೆ ವಾಪಸಾಗುವ ನಾಯಕನ ಕಥೆ.

ʼನನ್ನ ಸಿನಿಮಾ ಹಲವು ಸೋಲುಗಳ ಕುರಿತಾದದ್ದುʼ ಎಂದು ಸಿನಿಮಾ ಪ್ರದರ್ಶನ ಮುನ್ನ ಹೇಳಿದ ಪಾವೊ, ʼಕಥಾನಾಯಕ ಒಂದು ಹಂತದಲ್ಲಿ ಗೆಲ್ಲಬಹುದು. ಆದರೆ ನಿಜವಾಗಿಯೂ ಇದು ಹಲವು ಸೋಲುಗಳ ಕಥೆ, ಸೋತವರ ಕಥೆ. ಬದುಕಿನಲ್ಲಿ ಗೆಲ್ಲಲಾಗದೆಂಬ ವಾದವನ್ನು ನಾನು ಒಪ್ಪುವುದಿಲ್ಲ. ಆಶಾವಾದ ಎಂದಿಗೂ ನನ್ನ ಸಿನಿಮಾದಲ್ಲಿದೆʼ ಎಂದವರು ಪಾವೊ.

ಆಸ್ಟ್ರಿಯಾದಲ್ಲಿ ವಲಸೆ ಕುರಿತು ನಿಯಮಗಳು ಹಿಂದಿನಂತಿಲ್ಲ. ಬಹಳಷ್ಟು ಕಠಿನಗೊಂಡಿವೆ. ಅದರ ಪರಿಣಾಮವನ್ನು ಕಥಾನಾಯಕನೂ ಎದುರಿಸುತ್ತಾನೆ. ಒಬ್ಬ ಲೇಖಕನಾಗಿದ್ದರೂ ಆಸ್ಟ್ರಿಯಾ ಸಾಂಸ್ಕೃತಿಕ ಜಗತ್ತಿಗೆ ಅವನ ಕೊಡುಗೆ ಇರಬೇಕು. ಆಗ ಮಾತ್ರ ಅಲ್ಲಿರಲು ಪರವಾನಗಿ ಸಿಗುತ್ತದೆ. ನನ್ನ ಕಥಾನಾಯಕನದ್ದೂ ಅದೇ ಕಥೆ ಎಂದು ವಿವರಿಸಿದವರು ಪಾವೊ.

ಕಥಾ ನಾಯಕ ತನ್ನ ಸವಾಲುಗಳನ್ನು ಎದುರಿಸುತ್ತಲೇ ತನ್ನೊಳಗಿನ ಅವಲೋಕನದಲ್ಲೂ ತೊಡಗುತ್ತಾನೆ.

ಸಿನಿಮಾ ನಿರ್ಮಾಣದ ಬಗ್ಗೆ ಹೇಳುತ್ತಾ, ಇದು ನಿಜವಾಗಲೂ ಕಸರತ್ತಿನ ಪ್ರಯತ್ನ. ಕ್ರೋಷಿಯಾ, ಆಸ್ಟ್ರಿಯಾ ಸೇರಿದಂತೆ ಮೂರು ರಾಷ್ಟ್ರಗಳ ನಟರೊಂದಿಗೆ ಸಂಯುಕ್ತವಾಗಿ ಕೆಲಸ ಮಾಡುವುದು ಕೊಂಚ ಹೆಚ್ಚು ಶ್ರಮ ಬೇಡುವ ಕೆಲಸ ಎಂದು ಹೇಳಿದ ಪಾವೊ, ಸಿನಿಮಾದ ಶೀರ್ಷಿಕೆಯೂ ಒಂದು ಉಪಮೆ. ಅದೊಂದು ಎಲ್ಲರೂ ಸೇರಿ ಸಿದ್ಧಪಡಿಸುವ ಒಂದು ಅಡುಗೆ ಎಂದು ವಿವರಿಸಿದರು.

ಪಾವೋ ರಂಗಭೂಮಿಯಿಂದ ಬಂದವರು. ನಾಟಕಗಳನ್ನು ಬರೆಯುತ್ತಾ ಬೆಳೆದ ಪಾವೊ ಬಳಿಕ ಚಿತ್ರರಂಗಕ್ಕೆ ಬಂದವರು. ಅವರ ತ್ರೆಸೆಟ್ಟ ಸಿನಿಮಾಕ್ಕೆ ಆರು ಅಂತಾರಾಷ್ಟ್ರೀಯ ಪ್ರಶಸ್ತಿ ಒಳಗೊಂಡಂತೆ ಹಲವು ಪುರಸ್ಕಾರಗಳನ್ನು ಪಡೆದಿದೆ. ಸುಮಾರು ೩೦ ಕ್ಕೂ ಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಗಿದೆ.

ಇದನ್ನೂ ಓದಿ: Uttarkashi: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಮಾನಸಿಕ ಒತ್ತಡ ನಿವಾರಿಸಲು ಅಗತ್ಯ ಕ್ರಮ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.