ಕಾಣೆಯಾದವರ ಹುಡುಕಾಟದಲ್ಲಿ


Team Udayavani, Sep 15, 2018, 11:18 AM IST

karni.jpg

“ಸರ್‌ ನನ್‌ ತಂಗಿ ಕಾಣೆಯಾಗಿದ್ದಾಳೆ…’ ಹೀಗೆ ಹೇಳುತ್ತ ವ್ಯಕ್ತಿಯೊಬ್ಬ ನಡುರಾತ್ರಿಯಲ್ಲಿ ಪೊಲೀಸ್‌ ಠಾಣೆಗೆ ಬಂದು ಕಳೆದು ಹೋದ ತಂಗಿ ಫೋಟೋ ಕೊಟ್ಟು, ಆ ಪೊಲೀಸ್‌ ಅಧಿಕಾರಿ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾನೆ. ಅಲ್ಲಿಂದ ಪೊಲೀಸ್‌ ತನಿಖೆ ಇನ್ನಷ್ಟು ಚುರುಕಾಗುತ್ತೆ. ಅಷ್ಟೊತ್ತಿಗಾಗಲೇ, ಮಂಗಳ, ಭಾರತಿ, ನಂದಿನಿ ಮತ್ತು ಸುಮಾ ಎಂಬ ನಾಲ್ವರು ಹುಡುಗಿಯರೂ ಕಾಣೆಯಾಗಿರುತ್ತಾರೆ. ಕಾಣೆಯಾದವರೆಲ್ಲರದ್ದು 26ರ ಆಸುಪಾಸಿನ ವಯಸ್ಸು.

ಅಷ್ಟಕ್ಕೂ ಅವರೆಲ್ಲ ಕಾಣೆಯಾಗಿದ್ದು ಯಾಕೆ? ಅವರನ್ನು ಯಾರಾದರೂ ಕಿಡ್ನಾಪ್‌ ಮಾಡಿದ್ದಾರಾ? ಅಥವಾ ಅವರೆಲ್ಲರೂ ಕೊಲೆಯಾಗಿಬಿಟ್ಟರಾ? ಇಂಥದ್ದೊಂದು ಸಣ್ಣ ಕುತೂಹಲದೊಂದಿಗೇ ಚಿತ್ರ ಶುರುವಾಗುತ್ತೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಅಂತ ಮೊದಲ ದೃಶ್ಯದಲ್ಲೇ ಹೇಳುವಷ್ಟರ ಮಟ್ಟಿಗೆ ನಿರ್ದೇಶಕರ ಕೆಲಸ ಕಾಣುತ್ತದೆ. ಇಲ್ಲಿ “ಅದ್ಭುತ’ ಎನಿಸುವಂತಹ ಸಸ್ಪೆನ್ಸ್‌ ಏನೂ ಇಲ್ಲ. “ಅದು ಭೂತ’ ಎಂಬ ಫೀಲೂ ಇಲ್ಲ.

ಇಲ್ಲಿ ರಾತ್ರಿಯನ್ನು ಎಲ್ಲರೂ ಪ್ರೀತಿಸಿದ್ದಾರೆ. ಹಾಗಾಗಿ ಕಗ್ಗತ್ತಲ ಚಿತ್ರಣವಿದೆ. ರಾತ್ರಿಯಲ್ಲೇ ಹೆದರಿಸುವ ಕಳ್ಳಾಟವಿದೆ. ಇಲ್ಲಿ ಕಥೆ, ಚಿತ್ರಕಥೆಗಿಂತ ಕತ್ತಲು ಬೆಳಕಿನ ಆಟವೇ ಚಿತ್ರದ ಜೀವಾಳ ಎನ್ನಬಹುದು. ಅಂಥದ್ದೊಂದು ಮಬ್ಬುಗತ್ತಲ ವಾತಾವರಣ ಸೃಷ್ಟಿಸಿದ ಛಾಯಾಗ್ರಾಹಕರ ಕ್ಯಾಮೆರಾ ಕೆಲಸವಷ್ಟೇ ಇಲ್ಲಿ ಮಾತಾಡುತ್ತದೆ. ರಾತ್ರಿಯ ಚಿತ್ರಣ ಒಂದು ಕಡೆಯಾದರೆ, ರಾತ್ರಿಯೊಳಗಿನ ಮೌನ ಇನ್ನೊಂದು ಕಡೆ, ಆ ನಡುರಾತ್ರಿಯ ದೃಶ್ಯಗಳಲ್ಲಿ ಇರದ ಮಾತುಗಳು ಮತ್ತೂಂದೆಡೆ.

ಆಗಾಗ ಮಾತ್ರ ಮಾತುಗಳು ಕೇಳುವ ಚಿತ್ರದಲ್ಲಿ ಎಲ್ಲವೂ ನಿಧಾನ. ಮೊದಲರ್ಧವಂತೂ ಬರೀ ಕತ್ತಲ ಚಿತ್ರಣ, ಮಾತಿಲ್ಲದ ದೃಶ್ಯಗಳೇ ಆವರಿಸಿಕೊಂಡಿವೆ. ಮಾತಿಲ್ಲದೆ ತೆರೆಯೂ ಮೌನ, ಚಿತ್ರದ ವೇಗವೂ ನಿಧಾನ. ಏನಾಗುತ್ತಿದೆ ಅಂತ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಮೊದಲರ್ಧ ಮುಗಿದಿರುತ್ತೆ. ದ್ವಿತಿಯಾರ್ಧದಲ್ಲಿ ಮೊದಲರ್ಧದ ಗೊಂದಲಕ್ಕೆ ಉತ್ತರ ಸಿಗುತ್ತದೆ. ಬಹುತೇಕ ಒಂದೇ ಮನೆಯಲ್ಲೇ ಕಥೆ ಸಾಗುತ್ತದೆಯಾದರೂ, ಅಲ್ಲಲ್ಲಿ “ಮೂಕಿ’ ಚಿತ್ರ ನೋಡಿದ ಅನುಭವ ಕಟ್ಟಿಕೊಡುತ್ತದೆ.

ಬರೀ ಕತ್ತಲು, ಮಾತನಾಡದ ಎರಡು ಪಾತ್ರಗಳು, ಭಯಬೀಳಿಸದ ಸನ್ನಿವೇಶಗಳು, ಅದಕ್ಕೊಂದು ಸ್ವಾದವಿರದ ಹಿನ್ನೆಲೆ ಸಂಗೀತದ ಸ್ಪರ್ಶ ನೋಡುಗನ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ. ತೆರೆಯ ಮೇಲೆ ಇನ್ನೇನೋ ಆಗಿಬಿಡುತ್ತೆ ಎಂಬ ಉತ್ಸಾಹ ತುಂಬಿಕೊಳ್ಳುವ ಹೊತ್ತಿಗೆ ಮಧ್ಯಂತರ ಬಂದು ಆ ಸಣ್ಣ ಕುತೂಹಲಕ್ಕೊಂದು ನಿರಾಸೆಯೆಂಬ ನೀರನ್ನು ಎರಚಿದಂತಾಗುತ್ತೆ. ಇಲ್ಲಿ ಕಥೆ ಸರಳವಾಗಿದೆ. ಚಿತ್ರಕಥೆಯದ್ದೇ ಸಮಸ್ಯೆ. ಸಸ್ಪೆನ್ಸ್‌ ಅಂಶಗಳೊಂದಿಗೆ ಸಾಗುವ ಚಿತ್ರದಲ್ಲಿ ಬಿಗಿ ನಿರೂಪಣೆಯ ಅಗತ್ಯ ಇರಬೇಕಿತ್ತು.

ಕೆಲವು ಕಡೆ ಸಣ್ಣಪುಟ್ಟ ತಪ್ಪುಗಳು ಕಾಣಿಸಿಕೊಂಡರೂ, ಒಂದಂಶ ಮಾತ್ರ ಕೊನೆಯವರೆಗೂ ನೋಡುವ ಕುತೂಹಲ ಹುಟ್ಟುಹಾಕಿದೆ. ಐದು ಜನ ಹುಡುಗಿಯರು ಕಾಣೆಯಾಗಲು ಕಾರಣವೇನು, ಅವರನ್ನು ಕಿಡ್ನಾಪ್‌ ಮಾಡಿದ್ಯಾರು? ಎಂಬ ಪ್ರಶ್ನೆಗೆ ಕೊನೆಯ ಇಪ್ಪತ್ತು ನಿಮಿಷದಲ್ಲಿ ಉತ್ತರ ಸಿಗಲಿದೆ. “ದುನಿಯಾ’ ರಶ್ಮಿಗೆ ಇಲ್ಲಿ ಮಾತಿಲ್ಲದ ಪಾತ್ರ ಸಿಕ್ಕಿದೆ. ಕೇವಲ ಸನ್ನೆಗಳ ಮೂಲಕವೇ ನಟನೆ ಮಾಡಿದ್ದಾರೆ. ಗ್ಲಾಮರ್‌ನಿಂದ ದೂರವಿರುವಂತಹ ಪಾತ್ರ ಇಲ್ಲಿದ್ದು, ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.

ನಿರಂತ್‌ ಕೂಡ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ತನಿಖೆ ಮಾಡುವ ಪೊಲೀಸ್‌ ಅಧಿಕಾರಿಯಾಗಿ ರಾಜೇಶ್‌ ರಾಮಕೃಷ್ಣ  ಸ್ವಲ್ಪಮಟ್ಟಿಗೆ ಗಮನಸೆಳೆಯುತ್ತಾರೆ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟಾಗಿ ಗಮನಸೆಳೆಯಲ್ಲ. ಮೊದಲೇ ಹೇಳಿದಂತೆ ರಾತ್ರಿ ಹೊತ್ತಿನ ಚಿತ್ರೀಕರಣ ಕಟ್ಟಿಕೊಡುವುದು ಸುಲಭದ ಮಾತಲ್ಲ. ಇಲ್ಲಿ ಕತ್ತಲ ದೃಶ್ಯಗಳನ್ನು ಸೂರ್ಯೋದಯ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅರಿಂದಂ ಗೋಸ್ವಾಮಿ ಹಿನ್ನೆಲೆ ಸಂಗೀತ ಹಿಂದುಳಿದಿದೆ.

ಚಿತ್ರ: ಕಾರ್ನಿ
ನಿರ್ಮಾಣ: ಗೋವಿಂದರಾಜು
ನಿರ್ದೇಶನ: ವಿನೋದ್‌
ತಾರಾಗಣ: ರಶ್ಮಿ, ನಿರಂತ್‌, ರಾಜೇಶ್‌ ರಾಮಕೃಷ್ಣ, ಕರಣ್‌ ಗಜ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

Jagan Mohan Reddy

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.