Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ


Team Udayavani, Jul 6, 2024, 10:18 AM IST

Kaagada movie review

ನಾಯಕ ಹಿಂದೂ, ನಾಯಕಿ ಮುಸ್ಲಿಂ.. ಇವರಿಬ್ಬರ ನಡುವೆ ಪ್ರೇಮಾಂಕುರ.. ಪ್ರೀತಿಯ ಅಮಲಿನಲ್ಲಿ ತೇಲಾಡುತ್ತಿರುವ ಜೋಡಿಗೆ ಅಡ್ಡ ಬರುವ ಧರ್ಮ, ಅಲ್ಲಿಂದ “ಯುದ್ಧ ಶುರು’… ಇಂತಹ “ಸೂಕ್ಷ್ಮ’ ಅಂಶ ಗಳನ್ನು ಒಳಗೊಂಡಿರುವ ಕಥೆಯ ಜೊತೆಗೆ ಒಂದೊಳ್ಳೆಯ ಸಂದೇಶ ದೊಂದಿಗೆ ತೆರೆಗೆ ಬಂದಿರುವ ಚಿತ್ರ “ಕಾಗದ’. ಇಡೀ ಸಿನಿಮಾದ ಮುಖ್ಯ ಉದ್ದೇಶ ಪ್ರೀತಿ ಹಾಗೂ ಮಾನವೀಯತೆ. ಅಂತಿಮವಾಗಿ ಮನುಷ್ಯನಲ್ಲಿ ಇರಬೇಕಾದ ಗುಣ ಮನುಷ್ಯತೆ ಹೊರತು ದ್ವೇಷವಲ್ಲ. ಜಾತಿ-ಧರ್ಮದ ಸಂಘರ್ಷಕ್ಕಿಂತ ಪ್ರೀತಿ, ಸ್ನೇಹದ ಆಲಿಂಗನ ಮುಖ್ಯ ಎಂಬ ಅಂಶದೊಂದಿಗೆ ಮೂಡಿ ಬಂದಿರುವ ಚಿತ್ರವಿದು.

ಇದೊಂದು ಟೀನೇಜ್‌ ಲವ್‌ಸ್ಟೋರಿ. ಹಾಗಾಗಿ, ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿರುವ ಬಿಲ್ಡಪ್‌ಗ್ಳಿಂದ ಚಿತ್ರ ಮುಕ್ತ. ನಮ್ಮ ಸುತ್ತಲ ಪರಿಸರದಲ್ಲೇ ನಡೆಯುವ ಕಥೆಯಂತೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಥೆಯ ಬಗ್ಗೆ ಹೇಳುವುದಾದರೆ ಆಟ, ಪಾಠ ಎರಡರಲ್ಲೂ ಮುಂದಿರುವ ನಾಯಕ ಶಿವುಗೆ, ಆಯೇಷಾಳೊಂದಿಗೆ ಪ್ರೇಮಾಂಕುರ. ಈ ಮುಗ್ಧ ಜೋಡಿಯ ನೋಟ, ಭೇಟಿ, ಪ್ರೀತಿಯ ಸೇತುವೆಯಾಗುವ ಕಾಗದ ಒಂದು ಕಡೆಯಾದರೆ, ಊರ ಮಂದಿಯ ಪೂಜೆ, ಜಾತ್ರೆಯ ಚರ್ಚೆ.. ಈ ನಡುವೆಯೇ ಊರಲ್ಲೊಂದು ನಮಾಜ್‌ಗೆ ಮಸೀದಿ ಕಟ್ಟಿಸಬೇಕೆಂಬ ಕನಸಿನ ಮೌಳಿ.. ಹೀಗೆ ಸಾಗುವ ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ.

ಮುಖ್ಯವಾಗಿ ಈ ಸಿನಿಮಾ ಭೈರವಕೋಟೆ ಹಾಗೂ ಕೆಂಪ್ನಳ್ಳಿ ಎಂಬ ಎರಡು ಊರುಗಳ ಮಧ್ಯೆ ನಡೆಯುವ ಕಥೆ ಹೊಂದಿದೆ. ಹಾಗಾಗಿ, ಚಿತ್ರದಲ್ಲಿ ಒಂದಷ್ಟು ಗ್ರಾಮೀಣ ಸೊಗಡನ್ನು ನೋಡಬಹುದು.

ಒಂದು ಪ್ರಯತ್ನವಾಗಿ “ಕಾಗದ’ ಮೆಚ್ಚುಗೆ ಪಡೆಯುವ ಸಿನಿಮಾ. ಸಾಮಾನ್ಯವಾಗಿ ಹಿಂದೂ-  ಮುಸ್ಲಿಂ ಲವ್‌ಸ್ಟೋರಿ ಕಥೆ ಮಾಡುವಾಗ ಇರುವ ರೆಗ್ಯುಲರ್‌ ಅಂಶಗಳನ್ನು ಬಿಟ್ಟು ಒಂದಷ್ಟು ಹೊಸದನ್ನು ಹೇಳಲು ತಂಡ ಪ್ರಯತ್ನಿಸಿದೆ.

ನಾಯಕ ಆದಿತ್ಯ ಭರವಸೆ ಮೂಡಿಸಿದ್ದಾರೆ. ಮುಗ್ಧ ಹುಡುಗನ ಪ್ರೀತಿ, ಈ ನಡುವಿನ ಗೊಂದಲ, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ರೀತಿ.. ಇಂತಹ ಸನ್ನಿವೇಶಗಳಲ್ಲಿ ಆದಿತ್ಯ ಗಮನ ಸೆಳೆಯುತ್ತಾರೆ. ನಾಯಕಿ ಅಂಕಿತಾ ಜಯರಾಂ ಭವಿಷ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕಿ ಯಾಗುವ ಲಕ್ಷಣ ತೋರಿದ್ದಾರೆ. ಉಳಿ ದಂತೆ ಬಲರಾಜವಾಡಿ ನೀನಾಸಂ ಅಶ್ವಥ್‌, ಮಠ ಕೊಪ್ಪಳ, ಶಿವಮಂಜು, ನೇಹಾ ಪಾಟೀಲ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಆರ್.ಪಿ

ಟಾಪ್ ನ್ಯೂಸ್

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Tumbe

illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್‌ಗಳ ವಶ

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

1-siddu

Caste Census ಸಂಘರ್ಷ!; ಸಂಪುಟದಲ್ಲಿ ಚರ್ಚಿಸಿ ಸಮೀಕ್ಷಾ ವರದಿ ಮಂಡನೆ: ಸಿದ್ದರಾಮಯ್ಯ

Trucking: ರಾಜ್ಯದಲ್ಲಿ ಚಾರಣಕ್ಕೆ ಕಡಿವಾಣ ಸ್ತುತ್ಯರ್ಹ

Trucking: ರಾಜ್ಯದಲ್ಲಿ ಚಾರಣಕ್ಕೆ ಕಡಿವಾಣ ಸ್ತುತ್ಯರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Hagga movie review

Hagga movie review: ರೋಚಕ ರಹಸ್ಯದ ಕಥಾನಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

fraudd

Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Tumbe

illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್‌ಗಳ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.