ತಮಟೆ ಸೌಂಡು ಬಿಟ್ಟರೆ ಕೇಳಿಸದ ಕಲರವ
Team Udayavani, Jun 4, 2017, 4:22 PM IST
ನಿರ್ಮಾಣ: ಮಹಾದೇವೇಗೌಡ ನಿರ್ದೇಶನ: ಸಂದೀಪ್ ದಕ್ಷ್ ತಾರಾಗಣ: ನವೀನ್ ಕೃಷ್ಣ, ರೋಹಿಣಿ ಭಾರಧ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಸಂತೋಷ್, ಪದ್ದು ಇತರರು.
“ಇದು ತುಂಬಾ ಡಿಫರೆಂಟ್ ಸಿನಿಮಾ. ಈ ಚಿತ್ರದ ಒಂದು ಸನ್ನಿವೇಶವಾಗಲಿ, ಒಂದು ಡೈಲಾಗ್ ಆಗಲಿ ಈ ಹಿಂದೆ ಯಾವ ಸಿನಿಮಾದಲ್ಲೂ ಬಂದಿಲ್ಲ. ಎಲ್ಲೂ ಕೇಳಿರಲಿಕ್ಕೂ ಸಾಧ್ಯವಿಲ್ಲ.
ಅಷ್ಟೊಂದು ಡಿಫರೆಂಟ್ ಆಗಿದೆ. ಹೊಸಬರು ಏನು ಮಾಡಿರುತ್ತಾರೆ ಎಂಬ ತಾತ್ಸಾರ ಬೇಡ. ನಿಮಗೆ ಇಷ್ಟವಾಗದಿದ್ದರೆ ನೇರವಾಗಿ ಬಂದು ಬೈಯಿರಿ. ಥಿಯೇಟರ್ ಹತ್ರನೇ ಇರಿ¤àನಿ …’ – ಹೀಗೆ ಚಿತ್ರ ಬಿಡುಗಡೆಗೂ ಮುನ್ನ ನಿರ್ದೇಶಕ ಸಂದೀಪ್ ದಕ್ಷ ತುಂಬಾ ವಿಶ್ವಾಸದಲ್ಲಿ ಹೇಳಿಕೊಂಡಿದ್ದರು. ಈಗ ಚಿತ್ರ ಹೊರಬಂದಿದೆ. ನೋಡುಗನಿಗೆ ಯಾವ ಡಿಫರೆಂಟು ಕಾಣಿಸಲ್ಲ.
ಹೊಸ ಸನ್ನಿವೇಶವಿರಲಿ, ಕೇಳಿರದ ಡೈಲಾಗ್ ಕೂಡ ಇಲ್ಲ. ಈಗಾಗಲೇ ಎಷ್ಟೋ ಚಿತ್ರದಲ್ಲಿ ಬಂದ ದೃಶ್ಯಗಳು, ಮಾತುಗಳು ಅಲ್ಲಲ್ಲಿ ಕೇಳಿಸುತ್ತವೆ. ಒಂದಿಬ್ಬರನ್ನು ಹೊರತುಪಡಿಸಿದರೆ, ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದು. ಹಾಗಾಗಿ ಇಲ್ಲಿ ಹೊಸತನವಿದೆ ಅಂದುಕೊಂಡರೆ ಆ ಊಹೆ ತಪ್ಪು. ಚಿತ್ರವನ್ನು ಗ್ರಾಮೀಣ ಪರಿಸರದಲ್ಲಿ ಕಟ್ಟಿಕೊಡಲಾಗಿದೆಯಾದರೂ, ಅಲ್ಲಿನ ಸೊಗಡಿಲ್ಲ. ಮೊದಲಿಗೆ ಇಲ್ಲಿ ನಿರ್ದೇಶಕರು ಏನು ಹೇಳ್ಳೋಕೆ ಹೊರಟಿದ್ದಾರೆ ಅನ್ನೋದು ಅವರಿಗೇ ಗೊಂದಲವಾದಂತಿದೆ. ಒಂದು ಹಳ್ಳಿಯನ್ನು ಇಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂಬುದನ್ನು ಬಿಟ್ಟರೆ, ಹೇಳುವ ಕಥೆಯನ್ನಾಗಲಿ, ಸೃಷ್ಟಿಸಿರುವ ಪಾತ್ರಗಳನ್ನಾಗಲಿ ಸರಿಯಾಗಿ ನಿರ್ವಹಿಸಿಲ್ಲ. ಕಥೆಯಲ್ಲಂತೂ ಸ್ಪಷ್ಟತೆ ಇಲ್ಲ, ಚಿತ್ರಕಥೆಯಲ್ಲೂ ತಳಬುಡವಿಲ್ಲ. ಇಡೀ ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಯಾವ ಸ್ವಾರಸ್ಯವೂ ಇಲ್ಲ. ನವೀನ್‌ಕೃಷ್ಣ ಅವರನ್ನು ಹೊರತುಪಡಿಸಿದರೆ, ಕಾಣಿಸಿಕೊಳ್ಳುವ ಪಾತ್ರಗಳಿಗೆ ಲಗಾಮೇ ಇಲ್ಲದಂತೆ ಓಡಿಸಿದ್ದಾರೆ ನಿರ್ದೇಶಕರು. ಇಲ್ಲಿ ತಮಟೆ ಸೌಂಡು ಬಿಟ್ಟರೆ ಬೇರೆ ಯಾವ “ಕಲರವ’ವೂ ಕೇಳಿಸುವುದಿಲ್ಲ!
ಒಂದು ಸಿನಿಮಾಗೆ ಚೌಕಟ್ಟು ಇರದಿದ್ದರೆ, ಇಂತಹ ಎಡವಟ್ಟುಗಳು ಸಹಜ. ಅಸಲಿಗೆ ಇಲ್ಲಿ ಕಥೆ ಎತ್ತ ಸಾಗುತ್ತೆ ಎಂಬುದನ್ನು ತಿಳಿದುಕೊಳ್ಳುವ ಹೊತ್ತಿಗೆ ಎರಡೆರೆಡು ಲವ್‌ಸ್ಟೋರಿಗಳು ಹರಿದಾಡಿ, ನೋಡುಗನ ದಿಕ್ಕೇ ಬದಲಿಸುವಲ್ಲಿ ಯಶಸ್ವಿಯಾಗುತ್ತವೆ. ಒಂದು ಹಳ್ಳಿ. ಅಲ್ಲೊಬ್ಬ ಪುಡಿ ರೌಡಿ. ಅವನನ್ನು ಬಗ್ಗು ಬಡಿಯೋ ಇನ್ನೊಬ್ಬ ಪುಡಾರಿ. ಅವನ್ಯಾರು, ಹತ್ತು ವರ್ಷಗಳ ಕಾಲ ಊರುಬಿಟ್ಟು ಎಲ್ಲಿಗೆ ಹೋಗಿದ್ದ ಇತ್ಯಾದಿ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿಲ್ಲ. ಆ ಊರಲ್ಲೊಬ್ಬ ಹೆಣ್ಣುಗೂಳಿಯಂತಹ ಹುಡುಗಿಯ ಹಿಂದೆ ಬೀಳುವ ಆ ಪುಢಾರಿ ಸ್ಟೋರಿ ಒಂದು ಕಡೆ, ಇನ್ನೊಂದು ಕಡೆ ಆ ಊರಿನ ಸರ್ಕಾರಿ ಶಾಲೆ ಟೀಚರು. ಅವಳ ಹಿಂದೆ ಬೀಳುವ ಇನ್ನೊಬ್ಬ ಪೋಕರಿ. ಹೀಗೆ ಎರಡು ಲವ್‌ಟ್ರ್ಯಾಕ್‌ಗಳನ್ನು ಹಿಂದೆ ಮುಂದೆ ತೋರಿಸುವ ಮೂಲಕ ಚಿತ್ರದಲ್ಲಿ ಏನೇನಾಗುತ್ತಿದೆ ಅಂತ ನೋಡುಗ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಕಕ್ಕಾಬಿಕ್ಕಿ. ಇದೂ ಸಾಲದೆಂಬತೆ ನಗುವೇ ಬರದಂತಹ ಹಾಸ್ಯ ಸನ್ನಿವೇಶಗಳು. ಇನ್ನೇನು ಸೀಟಿಗೆ ಒರಗಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ಸಣ್ಣದ್ದೊಂದು ತಿರುವು ಬಂದು ಸಿನಿಮಾ ಕ್ಲೆéಮ್ಯಾಕ್ಸ್ ಹಂತಕ್ಕೆ ಬರುತ್ತೆ. ಇಷ್ಟು ಹೇಳಿದ ಮೇಲೂ, ಆ ಕಲರವ ಕೇಳಿಸಿಕೊಳ್ಳಲೇಬೇಕೆಂಬ ಧೈರ್ಯ ಮಾಡಿದರೆ ಚಿತ್ರಮಂದಿರದತ್ತ ಹೋಗಬಹುದು.
ನವೀನ್ ಕೃಷ್ಣ ಇಲ್ಲಿ ಪರಿಪೂರ್ಣವಾಗಿ ಪಾತ್ರವನ್ನು ಜೀವಿಸಿದ್ದಾರೆ. ಅದು ಕಲೆಯ ಮೇಲಿನ ಪ್ರೀತಿ ಎತ್ತಿ ತೋರಿಸುತ್ತದೆ. ಒಬ್ಬ ಪುಡಾರಿಯಾಗಿ, ಹೆಣ್‌ಮನಸನ್ನು ಪ್ರೀತಿಸುವ ಪ್ರೇಮಿಯಾಗಿ ಅವರಿಲ್ಲಿ ಇಷ್ಟವಾಗುತ್ತಾರೆ. ಆದರೂ ಅಂತಹ ನಟನನ್ನು ಕೆಲವೊಮ್ಮೆ ನಿರ್ದೇಶಕರು ಡಮ್ಮಿ ಮಾಡಿ, ಬೇಸರಿಸುತ್ತಾರೆ.
ಇನ್ನು, ರೋಹಿಣಿ ತಮಟೆ ಸದ್ದಿಗೆ ಕುಣಿಯೋ ಶೈಲಿ ಬಿಟ್ಟರೆ ನಟನೆ ಬಗ್ಗೆ ಹೇಳುವುದೇನಿಲ್ಲ. ಉಳಿದಂತೆ ನಿಹಾರಿಕಾ, ಮಹದೇವ್ ಪಾತ್ರಗಳು ಸ್ವಲ್ಪಮಟ್ಟಿಗೆ ಗುರುತಿಸಿಕೊಂಡರೆ, ಇತರೆ ಪಾತ್ರಗಳಾÂವೂ ಗಮನಸೆಳೆಯಲ್ಲ. ಪೀಟರ್ ಎಂ. ಜೋಸೆಫ್ ಸಂಗೀತ ಸ್ವಾದಕ್ಕಿಂತ ಕರ್ಕಶವೇ ಹೆಚ್ಚು. ಕುಮಾರ್ ಕ್ಯಾಮೆರಾದಲ್ಲೂ ಕಲರವವಿಲ್ಲ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.