ಚಿತ್ರವಿಮರ್ಶೆ: ಸಂಸಾರದ ‘ರಾಜಿ’ ಸೂತ್ರ


Team Udayavani, Apr 30, 2022, 11:31 AM IST

kannada film raaji review

ಸಂಸಾರ ನೌಕೆ ಎನ್ನುವುದು ಎರಡು ಕೈ ಜೋಡಿಸಿ ನಡೆಸುವ ಪ್ರಯಾಣ. ಈ ಪ್ರಯಾಣದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಹಂಚಿಕೊಂಡು, ಒಬ್ಬರಿಗೊಬ್ಬರು ಹೆಗಲಾಗಿ, ಅರ್ಥೈಸಿಕೊಂಡು ಸಾಗುವುದೇ ಜೀವನದ ಸತ್ಯ. ಇಂತ ಹ ಸುಂದರ ಸಂಸಾರದ ಆಧಾರವೇ “ರಾಜಿ’. ಎರಡು ಮನಸ್ಸುಗಳು ಪರಸ್ಪರ ಅರಿತು ಒಂದು ಸುಂದರ ಒಪ್ಪಂದದಲ್ಲಿ ಜೀವಿಸುವುದೇ ಸಂಸಾರ ಎಂಬ ಈ ಸಾರದೊಂದಿಗೆ ಮೂಡಿಬಂದಿರುವ ಚಿತ್ರ “ರಾಜಿ’.

ಮದುವೆಯಾಗಿ ವರ್ಷಗಳು ಕಳೆದರು ಮಕ್ಕಳಿಲ್ಲ ಎಂಬ ಕೊರಗು ಕಿಂಚಿತ್ತು ಭಾದಿಸದೆ, ಒಬ್ಬರನ್ನು ಒಬ್ಬರು ಮಕ್ಕಳಂತೆ ಕಂಡು ಸುಂದರವಾಗಿ ಸಂಸಾರ ನಡೆಸುತ್ತಿದ್ದ ಜೋಡಿ ರಾಘವ್‌ ಮತ್ತು ಜೀವಿತಾ. ಇವರಿಬ್ಬರ ಈ ತಡೆಯಿಲ್ಲದೆ ಸಾಗುವ

ಪಯಣಕ್ಕೆ ದೊಡ್ಡ ತಿರುವಾಗಿ ಪರಿಣಮಿಸಿದ್ದು ಒಂದು ಘಟನೆ. ನಡೆದ ಆ ಒಂದು ಘಟನೆ ಇವರ ಜೀವನದ ಮಗ್ಗುಲನ್ನೇ ಬದಲಿಸಿತ್ತು. ಈ ಜೋಡಿಗೆ ಎದುರಾದ ಕಷ್ಟಗಳನ್ನು ಹೇಗೆ ನಿಭಾಯಿಸುತ್ತದೆ. ಜೀವಿತಾ ಹೇಗೆ ತನ್ನ ಗಂಡನಿಗೆ ಬೆನ್ನೆಲುಬಾಗಿ, ಬರುವ ಕಷ್ಟಗಳನ್ನು ದಾಟಿ ನಿಲ್ಲುತ್ತಾಳೆ ಎಂದು ಹೇಳುವ ಚಿತ್ರವೇ ರಾಜಿ.

ಕಡಿಮೆ ಸಮಯದಲ್ಲಿ ಒಂದು ಕಥೆಯನ್ನು ಚಿತ್ರಿಸಿದ್ದು, ಚಿತ್ರದ ಮೊದಲ ಭಾಗ ವರ್ತಮಾನ ಹಾಗೂ ಹಳೆ ನೆನಪುಗಳ ಮೆಲುಕಿನಲ್ಲೇ ಕಳೆದು ಹೋಗುತ್ತದೆ. ಕಥೆಯ ನಿಜ ರೂಪ ಎರಡನೇ ಭಾಗದಲ್ಲಿ ತೆರೆದುಕೊಂಡು ಅಷ್ಟೆ ಬೇಗ ಚಿತ್ರಕ್ಕೆ ಒಂದು ಅಂತಿಮ ಘಟ್ಟ ನೀಡುತ್ತದೆ.

ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರೀತಿ ಎಸ್‌ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿ ನಿದೇರ್ಶಿಸಿರುವ ಮೊದಲ ಚಿತ್ರ ಇದಾಗಿದೆ. ಅವರ ಮೊದಲ ಪ್ರಯತ್ನ ಒಪ್ಪುವಂತದ್ದು. ಹೆಣ್ಣು ಸಂಸರಾದ ಕಣ್ಣು ಎನ್ನುವಂತೆ ಕುಟುಂಬ ನಿರ್ವಹಣೆಗೆ ಹೆಣ್ಣು ಪಡುವ ಕಷ್ಟ, ಚುಚ್ಚುಮಾತು, ಅನುಮಾನಗಳನ್ನು ಸಹಿಸಿ ಗಂಡನನ್ನು ಮಗುವಂತೆ ಕಾಣುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಎಂದಿನಂತೆ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದು, ಪ್ರತಾಪ್‌ ಸಿಂಹ, ಎಂ ಡಿ ಕೌಶಿಕ್‌ ಅವರ ಪಾತ್ರಗಳು ಕಥೆಗೆ ಸಾಥ್‌ ನೀಡುವಂತಿದೆ.

ಚಿತ್ರದಲ್ಲಿ ಮೂಡಿಬಂದಿರುವ ಎಚ್‌.ಎಸ್‌.ವೆಂಕಟೇಶ್‌ಮೂರ್ತಿ ಅವರ ಸಾಹಿತ್ಯ ಹಾಗೂ ಉಪಾಸನಾ ಮೋಹನ್‌ ಅವರ ಸಂಗೀತ ಕಥೆಗೆ ಪುಷ್ಠಿ ಕೊಡುವಂತಿದ್ದು ಸಂಸಾರದ ನಿಜ ಅರ್ಥ ಸಾರಿದೆ. ಪಿ.ವಿ ಆರ್‌ ಸ್ವಾಮಿ ತಮ್ಮ ಕ್ಯಾಮರಾ ಕೈ ಚಳಕದಲ್ಲಿ “ರಾಜಿ’ಯನ್ನು ಸುಂದರವನ್ನಾಗಿಸಿದ್ದಾರೆ

ವಾಣಿ ಭಟ್ಟ

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.