‘ಲವ್ ಯು ರಚ್ಚು’ ಚಿತ್ರವಿಮರ್ಶೆ: ಮತ್ತೆ ಮತ್ತೆ ಕಾಡುವ ‘ರಚ್ಚು’ ಕರ್ಮ ಕಥೆ!
Team Udayavani, Jan 1, 2022, 9:25 AM IST
ಮನುಷ್ಯ ಏನೇ ಕೆಲಸ ಮಾಡಿದರೂ, ಅದರ ಕರ್ಮಫಲ ಅವನ ಬೆನ್ನಿಗೇ ಅಂಟಿಕೊಂಡಿರುತ್ತದೆ ಎನ್ನುವುದು ಕರ್ಮ ಸಿದ್ಧಾಂತ. ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ, ಕೆಟ್ಟ ಕೆಲಸ ಮಾಡಿದವರಿಗೆ ಕೆಟ್ಟ ಫಲ ಕಟ್ಟಿಟ್ಟ ಬುತ್ತಿ. ಇದೇ ಎಳೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಲವ್ ಯು ರಚ್ಚು’.
ತನ್ನ ಪತ್ನಿ “ರಚ್ಚು’ವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕ ಅಜೇಯ್, ಆಕೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ. ಪತಿ ಮೇಲಿನ ಉತ್ಕಟ ಪ್ರೀತಿಯಿಂದ, ಆಕೆಯ ಎಲ್ಲಾ ತಪ್ಪುಗಳನ್ನು ಕ್ಷಮಿಸುವ ಅಜೇಯ್, ಆಕೆಗಾಗಿ ಮಾಡಬಾರದ ಎಲ್ಲ ಸಾಹಸ (ತಪ್ಪು)ಗಳನ್ನೂ ಮಾಡುತ್ತಾನೆ. ಅಷ್ಟಕ್ಕೂ ಪತ್ನಿ ರಚ್ಚುಗಾಗಿ, ಪತಿ ಅಜೇಯ್ ತೆಗೆದುಕೊಂಡಿರುವ ರಿಸ್ಕ್ ಎಂಥದ್ದು ಅನ್ನೋದೇ “ಲವ್ ಯು ರಚ್ಚು’ ಚಿತ್ರದ ಕಥಾಹಂದರ.
ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಲವ್ ಯು ರಚ್ಚು’ ಚಿತ್ರದ ಟ್ರೇಲರ್‌ನಲ್ಲಿ ನಾಯಕಿ ಅಚಾನಕ್ಕಾಗಿ ಮಾಡುವ ಕ್ರೈಂನಿಂದ ಆಕೆಯನ್ನು ಹೊರ ತರಲು ನಾಯಕ ಏನೇನು ಒಂದಷ್ಟು ಸಾಹಸ ಮಾಡುತ್ತಾನೆ ಎನ್ನುವ ಸಣ್ಣ ಝಲಕ್, ಸುಳಿವನ್ನು ಬಿಟ್ಟುಕೊಡಲಾಗಿತ್ತು. ಆದರೆ ಸಿನಿಮಾದಲ್ಲೂ ಅದೇ ಇರಬಹುದು
ಎಂಬ ನಿರೀಕ್ಷೆಯಲ್ಲಿ ಥಿಯೇಟರ್‌ಗೆ ಹೋದರೆ, ಅಲಿ ಬೇರೆಯದೇ ಒಂದಷ್ಟು ಅಂಶಗಳು ಅನಾವರಣಗೊಳ್ಳುತ್ತವೆ. ಲವ್, ರೊಮ್ಯಾನ್ಸ್, ಕ್ರೈಂ, ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಅನೇಕ ತಿರುವುಗಳ ನಡುವೆ “ರಚ್ಚು’ ಕಥೆಯ ಜೊತೆ ಕರ್ಮದ ಎಳೆಯೊಂದು ನಿಧಾನವಾಗಿ ನೋಡುಗರಿಗೆ ತೆರೆದುಕೊಳ್ಳುತ್ತ ಹೋಗುತ್ತದೆ. ಅದು ಹೇಗಿರಲಿದೆ ಅನ್ನೋದನ್ನ ತೆರೆಮೇಲೇ ನೋಡುವುದು ಉತ್ತಮ.
ಇದನ್ನೂ ಓದಿ:ಐಸಿಸಿ ವರ್ಷದ ಕ್ರಿಕೆಟಿಗ ಯಾರು? ರೂಟ್, ವಿಲಿಯಮ್ಸನ್, ಅಫ್ರಿದಿ, ರಿಜ್ವಾನ್
ಇನ್ನು, ಚಿತ್ರಕಥೆ, ಸಂಭಾಷಣೆಯನ್ನು ಇನ್ನಷ್ಟು ಮೊನಚಾಗಿಸಿದ್ದರೆ, “ರಚ್ಚು’ ಓಟಕ್ಕೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಗಳಿದ್ದವು. ಇನ್ನು “ಲವ್ ಯು ರಚ್ಚು’ ಸಿನಿಮಾದ ಟೈಟಲ್ ಹೇಳುವಂತೆ, ರಚಿತಾ ರಾಮ್ ನಿರ್ವಹಿಸಿರುವ ರಚ್ಚು (ರಚನಾ) ಪಾತ್ರದ ಸುತ್ತಲೇ ಇಡೀ ಚಿತ್ರಕಥೆ ಸಾಗುತ್ತದೆ. ರಚ್ಚು ಪಾತ್ರದಲ್ಲಿ ಕನಸು ಕಂಗಳ ಹುಡುಗಿಯಾಗಿ, ಗೃಹಿಣಿಯಾಗಿ ಎರಡು ಶೇಡ್‌ನ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾವನ್ನು ಹೈಲೈಟ್‌ನಲ್ಲಿ ರಚಿತಾ ಪಾತ್ರ ಕೂಡಾ ಪ್ರಮುಖವಾಗಿದೆ. ಪತ್ನಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಆಕೆಯ ಖುಷಿಗಾಗಿ ಏನು ಬೇಕಾದರೂ ತ್ಯಾಗ ಮಾಡಬಲ್ಲ ಪತಿಯ ಪಾತ್ರದಲ್ಲಿ ನಾಯಕ ಅಜೇಯ್ ರಾವ್ ಅವರದ್ದು ಅಚ್ಚುಕಟ್ಟಾದ ಅಭಿನಯ.
ನೆಗೆಟೀವ್ ಶೇಡ್‌ನ ರಾಘು ಶಿವಮೊಗ್ಗ, ಆರು ಗೌಡ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳಿಗೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ಇಲ್ಲದಿರುವುದರಿಂದ, ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಎರಡು ಹಾಡುಗಳು ಥಿಯೇಟರ್ ಹೊರಗೂ ನೋಡುಗರ ಕಿವಿಯಲ್ಲಿ ಗುನುಗುಡುವಂತಿದೆ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.