ಮಾಮನ ಚೆಲ್ಲಾಟ ನೋಡೋನ ಸಂಕಟ!


Team Udayavani, May 11, 2018, 6:14 PM IST

hello-mama.jpg

“ಎಷ್ಟೋ ಜನ ಮೈ ಮಾರಿಕೊಂಡು ಜೀವ್ನ ಮಾಡ್ತಾರೆ. ನಾನು ಮನಸ್ಸು ಮಾರಿಕೊಂಡು ಜೀವ್ನ ಮಾಡ್ತೀನಿ…’ ಹೀಗಂತ ಆ ವಿಜಯ್‌ ನೋವು ತುಂಬಿದ ಮಾತುಗಳಲ್ಲಿ ಹತಾಶೆಯಿಂದ ಹೇಳುವ ಹೊತ್ತಿಗೆ, ತಾನು ಮಾಡುತ್ತಿರುವ ತಪ್ಪಿನ ಅರಿವಾಗಿರುತ್ತೆ. ಆ ತಪ್ಪು ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ, “ಮಾಮಾ’ನ ಚೆಲ್ಲಾಟ, ಒದ್ದಾಟ, ಸಂಕಟಗಳನ್ನೆಲ್ಲಾ ನೋಡಿ ಬರಬಹುದು.

ಒಂದು ಸರಳ ಕಥೆಯನ್ನು ಸಿಕ್ಕಾಪಟ್ಟೆ ಎಳೆದಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಮೊದಲರ್ಧ ಕೊಂಚ ಹಾಸ್ಯಮಯವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧದಲ್ಲೊಂದು ತಿರುವು ಪಡೆದುಕೊಂಡು ಬೇರೆ ದಿಕ್ಕಿಗೆ ಮುಖ ಮಾಡುತ್ತೆ. ಹಾಗೆ ನೋಡಿದರೆ, ಕೊನೆಯ ಬಾಲ್‌ನಲ್ಲಿ ಸಿಕ್ಸರ್‌ ಬಾರಿಸುವ ಪ್ರಯತ್ನ ಮಾಡಲಾಗಿದೆಯಷ್ಟೇ. ಅದು ಬೌಂಡರಿ ಆಚೆಗೆ ಹೋಗುತ್ತಾ ಅನ್ನೋದೇ ಪ್ರಶ್ನಾರ್ಥಕ.

ನಿರ್ದೇಶಕರು ಇಲ್ಲಿ ಕಥೆಗೆ ತಕ್ಕ ನ್ಯಾಯ ಸಲ್ಲಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ, ಇಡೀ ಚಿತ್ರಕ್ಕೆ ಅರ್ಥ ಸಿಗೋದೇ, ಕೊನೆಯ ಹದಿನೈದು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ. ಆ ಕ್ಲೈಮ್ಯಾಕ್ಸ್‌ನಲ್ಲೇ ಇಡೀ ಚಿತ್ರದ ಹೂರಣವಿದೆ. ಹಾಗಂತ, ಹಿಡಿಯಷ್ಟು ಸಿಗುವ ಆ ಹೂರಣದಲ್ಲಿ ಎಷ್ಟರಮಟ್ಟಿಗೆ “ಸಿಹಿ’ ಅಡಗಿದೆ ಎಂಬುದನ್ನು ಹೇಳಲಾಗದು. ಆ ಹೂರಣದ ರುಚಿ ಅನುಭವಿಸಿದವರಿಗಷ್ಟೇ ಗೊತ್ತು!

ಇಲ್ಲೊಂದು ಸಣ್ಣ ಸಂದೇಶವಿದೆ. ಅದೊಂದೇ ಚಿತ್ರದೊಳಗಿರುವ ತಾಕತ್ತು. ಆದರೆ, ಸಿನಿಮಾದುದ್ದಕ್ಕೂ “ತಾಕತ್ತು’ ಪ್ರದರ್ಶಿಸುವ ಪ್ರಯತ್ನ ನಡೆದಿದೆಯಷ್ಟೇ. ನಿರ್ದೇಶಕ ಮೋಹನ್‌ ಇಲ್ಲಿ ಮಾತುಗಳ ಬಗ್ಗೆ ಕೊಟ್ಟಷ್ಟು ಗಮನ, ಚಿತ್ರಕಥೆ ಕಡೆಗೆ ಕೊಟ್ಟಿದ್ದರೆ, ಚಿತ್ರ ಇನ್ನಷ್ಟು ಹಿಡಿತದಲ್ಲಿರುತ್ತಿತ್ತೇನೋ? ಮಾತೇ ಮಾಣಿಕ್ಯ ಅಂದುಕೊಂಡು, ನೋಡುಗರ ಮೇಲೆ ಹೇರಳವಾದ ಮಾತುಗಳನ್ನು ಹೇರಿದ್ದಾರೆ.

ಹಾಗಂತ, ಮಾಣಿಕ್ಯದಂತಹ ಮಾತುಗಳೇನೂ ಇಲ್ಲ. “ಡಬ್ಬಲ್‌ ಮೀನಿಂಗ್‌’ ಮಾತುಗಳಿಗೆ ಹೆಚ್ಚು ಜಾಗ ಕಲ್ಪಿಸಿದ್ದಾರೆ. ಆಗಾಗ, ಆ “ಕಾಮ’ನ್‌ ಮಾತುಗಳೇ ಹೆಚ್ಚಾಗಿ, ಅದು ಬೇಕಿತ್ತಾ ಎನಿಸುವುದುಂಟು. ತೆರೆಯ ಮೇಲೆ ಯಾರೂ ಆಯಾಸ ಮಾಡಿಕೊಂಡಿಲ್ಲ. ನೋಡುಗರಿಗೆ ಮಾತ್ರ ಆಯಾಸದ ಅನುಭವ ಆಗುವುದಿಲ್ಲವೆಂದಲ್ಲ. ಮೋಹನ್‌ ಬುದ್ಧಿವಂತ ನಿರ್ದೇಶಕ ಎಂಬುದನ್ನು ಇಲ್ಲೂ ಸಾಬೀತುಪಡಿಸಿದ್ದಾರೆ.

ಒಂದು ಸರಳ ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕೆಂಬ ಜಾಣ್ಮೆ ಇದೆ. ಹಾಗಾಗಿ, ಒಂದು ಕಚೇರಿ, ಎರಡ್ಮೂರು ಮನೆ, ಒಂದು ದೇವಸ್ಥಾನ, ಎರಡ್ಮೂರು ರಸ್ತೆಗಳನ್ನು ಹೊರತುಪಡಿಸಿದರೆ, ಬೇರೇನೂ ತೋರಿಸದೆ ಅಲ್ಲಲ್ಲೇ ಸುತ್ತಾಡಿಕೊಂಡು “ಮಾಮಾ’ನ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ. ಇಲ್ಲಿರುವ ಕಥೆ ಹೊಸದೇನಲ್ಲ. ಆದರೆ, ಹೇಳಿರುವ ಮತ್ತು ತೋರಿಸಿರುವ ರೀತಿಯಲ್ಲಿ ಜಾಣತನ ಮೆರೆದಿದ್ದಾರಷ್ಟೇ.

ಆದರೆ, ಅದನ್ನು ಹೇಳುವುದಕ್ಕೆ ಅಷ್ಟೊಂದು ಬಿಲ್ಡಪ್‌ ಬೇಕಿತ್ತಾ ಅನಿಸೋದು ಉಂಟು. ಇಲ್ಲಿ ಹಲವು ನಗುವ ಸನ್ನಿವೇಶಗಳಿವೆ. ಆದರೆ, ನಗು ಬರುತ್ತಾ ಎಂಬುದನ್ನು ಕೇಳುವಂತಿಲ್ಲ. ಹೆಚ್ಚು ಹಾಸ್ಯ ಮಾಡಲು ಹೋಗಿ ಅದು ಅಪಹಾಸ್ಯಕ್ಕೀಡಾದ ದೃಶ್ಯಗಳೇ ಕಾಣಸಿಗುತ್ತವೆ. ಕೆಲವೊಮ್ಮೆ “ಅತೀ’ ಎನಿಸುವ ದೃಶ್ಯಗಳೂ ಕಾಣಿಸಿಕೊಂಡು, ನೋಡುಗನ ತಾಳ್ಮೆ ಪರೀಕ್ಷಿಸಿವುದುಂಟು.

ಮನರಂಜನೆಯ ನೆಪದಲ್ಲಿ ಅತೀ “ರೇಖೆ’ಯನ್ನು ದಾಟಿದ್ದಾರೆ. ಆದರೆ, ಕೊನೆಯ ನಿಮಿಷಗಳಲ್ಲಿ ಕೊಡುವ ಮಹತ್ವದ ತಿರುವು ಅತೀರೇಖೆಗಳ ದಾಟುವಿಕೆಯನ್ನೆಲ್ಲಾ ಮರೆಸುತ್ತವೆ. ಅದೊಂದೇ ಚಿತ್ರದ ಹೈಲೆಟ್‌. ವಿಜಯ್‌ (ಮೋಹನ್‌) ಕಂಪೆನಿಯೊಂದರ ಬಾಸ್‌ ಬಳಿ ತಂಗಿ ಮದ್ವೆಗೆ ಲಕ್ಷಾಂತರ ಸಾಲ ಪಡೆದಿರುತ್ತಾನೆ. ಅದಕ್ಕಾಗಿ ತನ್ನ ಬಾಸ್‌ ಹೇಳಿದಂತೆ ಕೇಳಿಕೊಂಡು ಕೆಲಸ ಮಾಡುತ್ತಿರುತ್ತಾನೆ.

ಆ ಬಾಸ್‌ಗೆ, ಪ್ರತಿ ದಿನ ಒಂದೊಂದು ಹೊಸ ಹುಡುಗಿ ಜೊತೆ ದಿನ ಕಳೆಯುವ ಚಟ. ಆ ಹುಡುಗಿಯರನ್ನ ಪಿಕಪ್‌ ಅಂಡ್‌ ಡ್ರಾಪ್‌ ಮಾಡುವ ಕೆಲಸ ವಿಜಯ್‌ದು. ತಾನು ಮಾಡುವ ಕೆಲಸ ತಪ್ಪು ಅಂತ ಗೊತ್ತಿದ್ದರೂ, ವಿಧಿ ಇಲ್ಲದೆ ಮಾಡುತ್ತಿರುತ್ತಾನೆ. ಮಧ್ಯೆ ಒಂದು ಪೇಚಿಗೆ ಸಿಲುಕುವ ಸನ್ನಿವೇಶ ಬರುತ್ತೆ. ಆ ಸನ್ನಿವೇಶ ಎಂಥದ್ದು, ಆ ಬಾಸ್‌ಗೆ ಯಾಕೆ ಅಂಥದ್ದೊಂದು ಚಟ ಇರುತ್ತೆ ಎಂಬುದೇ ಸಸ್ಪೆನ್ಸ್‌.

ಅದನ್ನು ತಿಳಿಯುವ ಕುತೂಹಲವೇನಾದರೂ ಇದ್ದರೆ, “ಮಾಮ’ನನ್ನು ನೋಡಬಹುದು. ಮೋಹನ್‌ ನಿರ್ದೇಶಕ ಅಂತ ಒಪ್ಪಿಕೊಳ್ಳುವುದು ಕಷ್ಟ ಎನಿಸಿದರೆ, ನಟನಾಗಿ ಒಪ್ಪಲೇಬೇಕು. ಅವರ ಟೈಮಿಂಗ್‌ ಮತ್ತು ಹಾವ-ಭಾವಗಳಲ್ಲಿ ನಗೆಬುಗ್ಗೆ ಎಬ್ಬಿಸುವ ತಾಕತ್ತಿದೆ. ಕಟ್ಟಿಕೊಂಡ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅರವಿಂದ್‌ಗೆ ಇಲ್ಲೊಂದು ಜವಾಬ್ದಾರಿ ಪಾತ್ರ ಸಿಕ್ಕಿದೆ.

ಅದನ್ನು ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ಬರುವ ಸೌಜನ್ಯ, ಸಾಂಪ್ರತ, ಭೂಮಿಕಾ ಇತ್ಯಾದಿ ಹುಡುಗಿಯರೆಲ್ಲಾ ನಿರ್ದೇಶಕರ ಕಲ್ಪನೆಗೆ ಬಣ್ಣ ತುಂಬುವ ಪ್ರಯತ್ನ ಮಾಡಿದ್ದಾರೆ. ಧರಂ ದೀಪ್‌ ಸಂಗೀತ ಮಾಮಾನ ಸ್ವಾದ ಹೆಚ್ಚಿಸಿಲ್ಲ. ಪ್ರಸಾದ್‌ ಬಾಬು ಛಾಯಾಗ್ರಹಣ ಪರವಾಗಿಲ್ಲ. ಸಂಕಲನಕಾರ ಶಿವಪ್ರಸಾದ್‌ ವೇಗಮಿತಿ ಕಾಪಾಡಿಕೊಂಡಿದ್ದಾರೆ.

ಚಿತ್ರ: ಹಲೋ ಮಾಮ
ನಿರ್ಮಾಣ: ಬಿ.ಕೆ.ಚಂದ್ರಶೇಖರ್‌
ನಿರ್ದೇಶನ: ಮೋಹನ್‌
ತಾರಾಗಣ: ಮೋಹನ್‌, ಅರವಿಂದ್‌, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ, ಕೆಂಪೇಗೌಡ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.