Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Team Udayavani, Nov 24, 2024, 9:31 AM IST

Maryade Prashne Review

ಮಧ್ಯಮ ವರ್ಗದವರ ಜೀವನವೇ ಹಾಗೆ. ಕನಸುಗಳು ನೂರು.. ಆದರೆ ಅದನ್ನು ಈಡೇರಿಸಿಕೊಳ್ಳಲು ಪರದಾಡಬೇಕಾದ ರೀತಿ ಇದೆಯಲ್ಲ ಅದು ತುಂಬಾ ತ್ರಾಸದಾಯಕ. ಅದರಲ್ಲೂ ಈ ಹಾದಿಯಲ್ಲಿ ಎದುರಾಗುವ ಅವಮಾನ, ನೋವು, ಸಂಕಟ ಒಂದು ಕಡೆಯಾದರೆ ಅವೆಲ್ಲವನ್ನು ಸಹಿಸಿಕೊಂಡು “ಕೈಲಾಗದವರಂತೆ’ ಕೂರಬೇಕಾದ ಪರಿಸ್ಥಿತಿ ಮತ್ತೂಂದು ಹಿಂಸೆ. ಇಂತಹ ಮಧ್ಯಮ ವರ್ಗದ ಆಸೆ, ಸಂಕಟ ಗಳಿಗೆ ಕೈ ಗನ್ನಡಿಯಂತೆ ಮೂಡಿ ಬಂದಿರುವ ಸಿನಿಮಾ “ಮರ್ಯಾದೆ ಪ್ರಶ್ನೆ’.

ಚಿತ್ರದ ಟೈಟಲ್‌ ಹೇಳುವಂತೆ ಮರ್ಯಾದೆಗೆ ಅಂಜಿ ಬದುಕುವ, ಸುಂದರ ಬದುಕಿನ ಕನಸು ಕಾಣುವ ಮನಸುಗಳ ಸುತ್ತ ಸಾಗುವ ಸಿನಿಮಾ “ಮರ್ಯಾದೆ ಪ್ರಶ್ನೆ’. ಚಿತ್ರದಲ್ಲಿ ಮೂವರು ವಿಭಿನ್ನ ವ್ಯಕ್ತಿಗಳ ಕಥೆಯನ್ನು ಹೇಳುತ್ತಾ ಹೋಗಿದ್ದಾರೆ. ಮೂವರದ್ದು ಉದ್ಯೋಗ ಬೇರೆ ಬೇರೆ. ಆದರೆ, ಕನಸು ಒಂದೇ. ಅದು ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕು, ಸಮಾಜದಲ್ಲಿ ತಲೆಎತ್ತಿ ಬದುಕಬೇಕು ಎಂಬುದು. ಈ ಹೋರಾಟದಲ್ಲಿ ನಡೆಯುವ ಘಟನೆಯೊಂದು ದೊಡ್ಡ ಆಘಾತವನ್ನೇ ತಂದೊಡ್ಡುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಒಂದಷ್ಟು ಮನಸಿಗೆ ಹತ್ತಿರವಾಗುವ ಅಂಶಗಳಿವೆ.

ಇಡೀ ಕಥೆಯನ್ನು ನೇರಾನೇರ ಹೇಳುವ ಮೂಲಕ ಚಿತ್ರ ಸಾಮಾನ್ಯ ಪ್ರೇಕ್ಷಕರಿಗೂ ಬೇಗನೇ ಅರ್ಥವಾಗುವಂತೆ ನಿರೂಪಿಸಲಾಗಿದೆ. ಕಥೆ ಬಿಟ್ಟು ಅನವಶ್ಯಕ ದೃಶ್ಯಗಳಿಂದ ಚಿತ್ರ ಮುಕ್ತವಾಗಿದ್ದು, ನಮ್ಮ ಸುತ್ತಮುತ್ತ ನಡೆಯು ತ್ತಿರುವ ಯಾವುದೋ ಘಟನೆಯನ್ನು ಕಟ್ಟಿಕೊಟ್ಟಂತೆ ಚಿತ್ರ ಭಾಸವಾ ಗು ವುದು ಈ ಚಿತ್ರದ ಪ್ಲಸ್‌ ಕೂಡಾ. ಸಿನಿಮಾದ ಪರಿಸರ ಕೂಡಾ ಕಥೆಗೆ ಪೂರಕ ವಾಗಿದೆ. ಸರಳ ಸಂಭಾಷಣೆಯೂ ಕಥೆಯ ಓಘಕ್ಕೆ ಸಾಥ್‌ ಕೊಟ್ಟಿದೆ.

ಚಿತ್ರದಲ್ಲಿ ರಾಕೇಶ್‌ ಅಡಿಗ, ಸುನೀಲ್‌ ರಾವ್‌ ಹಾಗೂ ಪೂರ್ಣ ಚಂದ್ರ ಮೈಸೂರು ಪ್ರಮುಖ ಪಾತ್ರ ಮಾಡಿದ್ದಾರೆ. ರೆಬೆಲ್‌ ಹುಡುಗನಾಗಿ ರಾಕೇಶ್‌ ಅಡಿಗ ಇಷ್ಟವಾಗುತ್ತಾರೆ. ಉಳಿದಂತೆ ಶೈನ್‌ ಶೆಟ್ಟಿ, ಪ್ರಭು ಮುಂಡ್ಕೂರ್‌, ತೇಜು ಬೆಳವಾಡಿ ಸೇರಿದಂತೆ ಇತತರು ನಟಿಸಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಗಳಿಗೆ ಪೂರಕವಾಗಿದೆ. ಹೆಚ್ಚು ಅಬ್ಬರ, ಆರ್ಭಟವಿಲ್ಲದೇ ಒಂದು ಸರಳ ಕಥೆಯನ್ನು ಕಣ್ತುಂಬಿಕೊಳ್ಳ ಬಯಸುವವರಿಗೆ “ಮರ್ಯಾದೆ ಪ್ರಶ್ನೆ’ ಒಳ್ಳೆಯ ಆಯ್ಕೆಯಾಗಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.