ಮಾಸ್‌ಗೂ, ಕ್ಲಾಸ್‌ಗೂ ಸೈ!


Team Udayavani, Aug 13, 2017, 10:20 AM IST

maas-leader.jpg

ಚುನಾವಣೆ ಸಮೀಕ್ಷೆಗಳು ನೋಡಿದರೆ, ಆತ ಗೆಲ್ಲೋದೇ ಇಲ್ಲ ಎಂದು ತೀರ್ಪು ಕೊಟ್ಟಿರುತ್ತವೆ. ಆತನಿಗೆ ಹೇಗಾದರೂ ಮಾಡಿ, ಈ ಬಾರಿ ಗೆಲ್ಲಲೇಬೇಕು ಎಂಬ ಅನಿವಾರ್ಯತೆ ಇರುತ್ತದೆ. ಅವನನ್ನು ಗೆಲ್ಲಿಸುವುದಕ್ಕೆ ಆತನ ಅಣ್ಣ ದೊಡ್ಡ ಮಾಸ್ಟರ್‌ ಪ್ಲಾನ್‌ ಹಾಕುತ್ತಾನೆ. ಆ ಪ್ಲಾನ್‌ ಕಾರ್ಯರೂಪಕ್ಕೆ ಬರಬೇಕು ಎನ್ನುವಷ್ಟರಲ್ಲೇ ಮೇಜರ್‌ ಶಿವರಾಜ್‌ ಮತ್ತು ಎಂಟ್ರಿ ಕೊಡುತ್ತಾರೆ. ನಂತರ ಸುಮಾರು ಐದು ನಿಮಿಷಗಳ ಕಾಲ ಎರಡೂ ಗುಂಪುಗಳ ನಡುವೆ ದೊಡ್ಡ ಯುದ್ಧವೇ ನಡೆದು ಹೋಗುತ್ತದೆ, ಗುಂಡುಗಳ ಮೊರೆತ ಕೇಳಿಸುತ್ತದೆ, ಲೀಟರ್‌ಗಟ್ಟಲೆ ರಕ್ತ ನೆಲದ ಪಾಲಾಗುತ್ತದೆ …

ಅಲ್ಲಿಗೆ ಆ ಕೇಸ್‌ ಕ್ಲೋಸ್‌. ಆದರೆ, ಚುನಾವಣೆ ಗೆಲ್ಲುವುದಕ್ಕೆ ಅಣ್ಣ-ತಮ್ಮ ಮಾಡುವ ಮಾಸ್ಟರ್‌ ಪ್ಲಾನ್‌ ಆದರೂ ಏನು? ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಗಾಲದಿಂದ ಕರೆದುಕೊಂಡು ಬಂದು ಮತ ಹಾಕಿಸುವುದು. ಅದ್ಯಾರನ್ನೋ ಎಲ್ಲಿಂದಲೋ ಅಕ್ರಮವಾಗಿ ಕರೆದುಕೊಂಡು ಬಂದು ಸಾಕಿ, ಸಲಹಿದರೆ ಅದರಿಂದ ನೂರೆಂಟು ಸಮಸ್ಯೆಗಳು. ಅಕ್ರಮವಾಗಿ ಬಂದವರು ದರೋಡೆ, ವೇಶ್ಯಾವಟಿಕೆ, ಡ್ರಗ್ಸ್‌ ಮಾರಾಟ ಹೀಗೆ ಹಲವಾರು ಚಟುವಟಿಕೆಗಳನ್ನು ಮಾಡಿ ರಾಜ್ಯಕ್ಕೆ ಕೆಟ್ಟ ಹೆಸರು ತರುವವರು. ಇಂತಹವರ ವಿರುದ್ಧ ಶಿವರಾಜ್‌ ಮತ್ತು ತಂಡ ತೊಡೆ ತಟ್ಟಿ ನಿಲ್ಲುತ್ತದೆ.

ಆಗ ಆ ತಂಡದ ಮೇಲೆ ದೊಡ್ಡ ಅಟ್ಯಾಕ್‌ ಆಗುತ್ತದೆ. ಆ ಅಟ್ಯಾಕ್‌ ಮಾಡಿದವನ್ಯಾರು ಗೊತ್ತಾ? ಅರ್ಷದ್‌ … ಈ ಅರ್ಷದ್‌ ಯಾರು ಎಂದು ಹುಡುಕುತ್ತಾ ಹೊರಟರೆ, ಅದಕ್ಕೊಂದು ಫ್ಲಾಶ್‌ಬ್ಯಾಕ್‌ ಇದೆ. ಅಲ್ಲೇನಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ, ಚಿತ್ರ ನೋಡಬೇಕು. “ಮಾಸ್‌ ಲೀಡರ್‌’ ಒಂದು ದೇಶಪ್ರೇಮ ಮತ್ತು ದೇಶಪ್ರೇಮಿಯ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಮೇಜರ್‌ ಶಿವರಾಜ್‌ದು ಪ್ರಮುಖವಾದ ಪಾತ್ರ. ಬರೀ ಅಕ್ರಮ ವಲಸಿಗರಷ್ಟೇ ಅಲ್ಲ,

ಭಯೋತ್ಪಾದಕರಿಗೂ ಸಿಂಹಸ್ವಪ್ನವಾಗಿರುವ ಈ ಶಿವರಾಜ್‌ ಜೀವನದಲ್ಲಿ ಏನಾಗುತ್ತದೆ ಎಂಬುದರ ಜೊತೆಗೆ, ಒಬ್ಬ ದೇಶಪ್ರೇಮಿಯು ತನ್ನ ತಾಯ್ನಾಡನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲಾ ಸಾಹಸಗಳನ್ನು ಮಾಡುತ್ತಾನೆ ಎನ್ನುವುದು ಈ ಚಿತ್ರದ ಕಥೆ. ಈ ಕಥೆಗೆ ಸಾಕಷ್ಟು ರೋಚಕತೆ, ಟ್ವಿಸ್ಟ್‌ಗಳನ್ನು ಸೇರಿಸಿ ಒಂದು ಫ್ಯಾಮಿಲಿ ಚಿತ್ರ ಮಾಡಿದ್ದಾರೆ ನಿರ್ದೇಶಕ ನರಸಿಂಹ. ಈ ಚಿತ್ರದ ಕಥೆಯೇನು ಎಂದರೆ ಹೇಳುವುದು ಕಷ್ಟವೇ. ಚಿತ್ರದಲ್ಲ ಅಂತಹ ಮಹತ್ವವಾದ ಕಥೆ ಇಲ್ಲದಿದ್ದರೂ, ಹಲವು ಘಟನೆಗಳನ್ನಿಟ್ಟುಕೊಂಡು ತೂಗಿಸಿಕೊಂಡು ಹೋಗುತ್ತಾರೆ ನರಸಿಂಹ.

ಚಿತ್ರ ಅಲ್ಲಲ್ಲಿ ಸ್ವಲ್ಪ ನಿಧಾನ ಎನಿಸಬಹುದು, ಆದರೂ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ ನರಸಿಂಹ. ಚಿತ್ರದ ವಿಶೇಷತೆಯೆಂದರೆ, ಸ್ಟಂಟ್‌ ದೃಶ್ಯಗಳು ಸೆರೆ ಹಿಡಿದಿರುವ ರೀತಿ. ಶಿವರಾಜಕುಮಾರ್‌ ಅವರ ಇಂಟ್ರೊಡಕ್ಷನ್‌ ಫೈಟ್‌ ಆಗಲೀ, ಯೋಗಿಯೊಂದಿಗಿನ ಮಚ್ಚಿನ ಯುದ್ಧವಾಗಲೀ, ಕಾಶ್ಮೀರದ ಹಿಮದ ನಡುವಿನ ಹೊಡೆದಾಟಗಳಾಗಲೀ … ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಟ್ಟಿಕೊಡುವುದರಲ್ಲಿ ಗುರುಪ್ರಶಾಂತ್‌ ರೈ ಛಾಯಾಗ್ರಹಣ ಮತ್ತು ಸ್ಟಂಟ್‌ ಮಾಸ್ಟರ್‌ ವಿಜಯನ್‌ ಅವರ ಪಾತ್ರ ದೊಡ್ಡದು.

ಇನ್ನು ಇಡೀ ಚಿತ್ರದ ಹೈಲೈಟ್‌ ಎಂದರೆ ಶಿವರಾಜಕುಮಾರ್‌. ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ ಮತ್ತು ಈ ಪಾತ್ರವನ್ನು ಅವರು ಅದ್ಭುತವಾಗಿ ಜೀವಿಸಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಅದರಲ್ಲಿ ಶಿವರಾಜಕುಮಾರ್‌ ಅವರ ಪಾತ್ರ ಮತ್ತು ಅಭಿನಯ ಬಿಟ್ಟರೆ ಗಮನಸೆಳೆಯುವುದು ಯೋಗಿ ಅವರ ಪಾತ್ರ ಮಾತ್ರ. ವೀರ್‌ ಸಮರ್ಥ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.

ಚಿತ್ರ: ಮಾಸ್‌ ಲೀಡರ್‌
ನಿರ್ದೇಶನ: ನರಸಿಂಹ
ನಿರ್ಮಾಣ: ತರುಣ್‌ ಶಿವಪ್ಪ
ತಾರಾಗಣ: ಶಿವರಾಜಕುಮಾರ್‌, ವಿಜಯ್‌ ರಾಘವೇಂದ್ರ, ಯೋಗಿ, ಗುರು, ಶರ್ಮಿಳಾ ಮಾಂಡ್ರೆ, ಪ್ರಣೀತಾ, ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.