Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ
Team Udayavani, Mar 17, 2024, 4:31 PM IST
ಅನ್ಯ ಧರ್ಮದ ಜೋಡಿಯ ಪ್ರೀತಿ, ಪ್ರೇಮ ಎಂದಾಗ ಅಲ್ಲೊಂದಿಷ್ಟು ರೋಚಕತೆ ಇರುತ್ತದೆ, ಸಹಜವಾಗಿಯೇ ಅಡ್ಡ-ಆತಂಕ, ಜೊತೆಗೆ ಮುಂದೇನಾಗುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಅಂತಹ ಕುತೂಹಲವನ್ನು ತನ್ನೊಳಗಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಮೆಹಬೂಬಾ’. ಮೊದಲೇ ಹೇಳಿದಂತೆ ಇದೊಂದು ಅಪ್ಪಟ ಲವ್ ಸ್ಟೋರಿ. ರಾಜಕೀಯ ಹಿನ್ನೆಲೆಯ ಹುಡುಗನಿಗೆ ಮುಸ್ಲಿಂ ಹುಡುಗಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಅಲ್ಲಿಂದ ಇಡೀ ಸಿನಿಮಾದ “ಕಲರ್’ ಕೂಡಾ ಬದಲಾಗುತ್ತಾ ಹೋಗುತ್ತದೆ.
ನಿರ್ದೇಶಕರು ಇದನ್ನು ಕೇವಲ ಒಂದು ಲವ್ ಸ್ಟೋರಿಯಾಗಿ ತೋರಿಸದೇ, ಇದರ ಸುತ್ತಲಿನ ಹಲವು ಸೂಕ್ಷ್ಮ ಅಂಶಗಳನ್ನು ತೆರೆದಿಡುತ್ತಾ ಹೋಗಿದ್ದಾರೆ. ಇದೇ ಕಾರಣದಿಂದ “ಮೆಹಬೂಬಾ’ ಕೇವಲ ಒಂದು ಲವ್‌ಸ್ಟೋರಿಯಾಗದೇ, ಆಲೋಚಿಸುವ ಹಲವು ಅಂಶಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುವ ಸಿನಿಮಾವಾಗಿ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಹಲವು ತಿರುವುಗಳು, ಆಯಾಮಗಳು ಬಂದು ಪ್ರೇಕ್ಷಕರನ್ನು ಸದಾ “ಎಚ್ಚರ’ವಾಗಿಡುತ್ತಲೇ ಸಿನಿಮಾ ಸಾಗುತ್ತದೆ. ಸಾಕಷ್ಟು ಅಂಶಗಳನ್ನು ಕಥೆಯಲ್ಲಿ ಹೇಳಬೇಕೆಂಬ ನಿರ್ದೇಶಕರ ಉತ್ಸಾಹ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಎಲ್ಲಾ ಓಕೆ, ಸಿನಿಮಾದ ಅಂತ್ಯ ಏನು ಎಂದು ನೀವು ಕೇಳಬಹುದು. ಆ ಕುತೂಹಲಕ್ಕೆ ತೆರೆಮೇಲೆ ಉತ್ತರ ಸಿಗುತ್ತದೆ.
ನಾಯಕ ಶಶಿ ನಟನೆಯಲ್ಲಿ ಭರವಸೆ ಮೂಡಿಸಿದ್ದಾರೆ. ಜೊತೆಗೆ ಆ್ಯಕ್ಷನ್ ದೃಶ್ಯಗಳಲ್ಲೂ ಗಮನ ಸೆಳೆಯುತ್ತಾರೆ. ನಾಯಕಿ ಪಾವನಾ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬುಲೆಟ್ ಪ್ರಕಾಶ್, ಜೈ ಜಗದೀಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.