ಕಿಡಿಯೊಳಗಿನ ಕಿಡಿಗೇಡಿಗಳು!


Team Udayavani, Oct 6, 2017, 11:00 PM IST

Bhuvan-and-Pallavi.jpg

“ಪದೇ ಪದೇ ನನ್ನ ಮೈ ಮುಟ್ಟಿ ಮಾತಾಡಿಸ್ಬೇಡ ಅಂತ ಎಷ್ಟು ಸಲಾನೋ ಹೇಳ್ಳೋದು..’ – ಹೀಗೆ ಹೇಳುತ್ತಲೇ, ಆ ನಾಯಕ ತನ್ನ ಸಹದ್ಯೋಗಿ ಕೆನ್ನೆಗೆ ಬಾರಿಸುತ್ತಾನೆ. ಅದಾಗಲೇ, ಅವನೆಂಥಾ ಕೋಪಿಷ್ಟ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಅವನೊಬ್ಬ ಮುಂಗೋಪಿ. ತಾಳ್ಮೆ ಇಲ್ಲದ ವ್ಯಕ್ತಿ, ಕೆಣಕಿದರೆ ಅಟ್ಟಾಡಿಸಿಕೊಂಡು ಹೋಗಿ ಹೊಡಿಯೋ ವ್ಯಕ್ತಿತ್ವ. ಇದು “ಕಿಡಿ’ಯೊಳಗಿನ ಸಾರಾಂಶ. ಇಷ್ಟು ಹೇಳಿದ ಮೇಲೆ, ಇದೇನು ಹೊಸತರಹದ ಕಥೆಯಲ್ಲವಲ್ಲ ಎಂಬ ಪ್ರಶ್ನೆ ಎದುರಾಗೋದು ಸಹಜ.

ಇದೇನು ಹೊಚ್ಚ ಹೊಸ ಕಥೆ ಅಲ್ಲ ನಿಜ. ಕನ್ನಡದಲ್ಲಿ ಮುಂಗೋಪಿ ಹುಡುಗನ ಕಥೆವುಳ್ಳ ಚಿತ್ರಗಳು ಬೇಜಾನ್‌ ಬಂದು ಹೋಗಿವೆ. ಅಷ್ಟಕ್ಕೂ ಇದು ಮಲಯಾಳಂನ “ಕಲಿ’ ಚಿತ್ರದ ಅವತರಣಿಕೆ. ಹಾಗಾಗಿ, ಇದನ್ನು ವೈಭವೀಕರಿಸಿ ಹೇಳುವ ಅಗತ್ಯವಿಲ್ಲ. ಹಾಗೇ ವೈಭವೀಕರಿಸುವಂತಹ ಚಿತ್ರವೂ ಅಲ್ಲ, ಅಂತಹ ಅಂಶಗಳೂ ಇಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, “ಕಿಡಿ’ ಅಷ್ಟಾಗಿ ಹಾರಲ್ಲ! ಚಿತ್ರದ ಮೊದಲರ್ಧ ನೋಡುಗರೇ “ಕಿಡಿ’ಕಾರುವಷ್ಟರ ಮಟ್ಟಿಗೆ ಸಾಗುತ್ತದೆ.

ದ್ವಿತಿಯಾರ್ಧಕ್ಕೊಂದು ವೇಗ ಸಿಕ್ಕು, ಅದು ಟೇಕಾಫ್ ಆಗುವ ಹೊತ್ತಿಗೆ “ಕಿಡಿ’ಯ ಕಾವೂ ಮುಗಿಯುತ್ತೆ. ಈ ಹಿಂದೆ ನಾಯಕ ಭುವನ್‌ಚಂದ್ರ ಒಳ್ಳೆಯ ಚಿತ್ರ ಮಾಡೋಕೆ ಅಂತಾನೇ ಸುಮಾರು 250 ಸಿನಿಮಾಗಳನ್ನು ನೋಡಿ, ಆ ಪೈಕಿ ಈ ಚಿತ್ರ ಆಯ್ಕೆ ಮಾಡಿಕೊಂಡಿದ್ದರಂತೆ. “ಕಿಡಿ’ ನೋಡಿದಾಗಲಷ್ಟೇ ಅವರ ಆಯ್ಕೆ ಹೇಗಿದೆ ಅಂತ ಗೊತ್ತಾಗಿದ್ದು! ಅದಿರಲಿ, ಸಿನಿಮಾ ಅಂದರೆ ಮನರಂಜನೆ. ಅದೇ ಇಲ್ಲದೇ ಹೋದರೆ ನೋಡುಗರು “ಕಿಡಿ’ಕಾರದೇ ಇರುತ್ತಾರಾ?

ಅದು ಈ “ಕಿಡಿ’ಯಲ್ಲೂ ಆಗುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. ಮೊದಲೇ ಹೇಳಿದಂತೆ ಇಲ್ಲಿ ನಾಯಕ  ಮುಂಗೋಪಿ. ಅದನ್ನೇ ಸಿನಿಮಾದುದ್ದಕ್ಕೂ ಅಳವಡಿಸಿ, ನೋಡುಗರ ತಾಳ್ಮೆ ಪರೀಕ್ಷಿಸಿದ್ದಾರೆ ನಿರ್ದೇಶಕರು. ಇಡೀ ಚಿತ್ರದಲ್ಲಿ ಅವನ ಸಿಡುಕು, ಕೋಪವೇ ಹೈಲೈಟ್‌. ಅದನ್ನು ಹೊರತುಪಡಿಸಿದರೆ, ಅಲ್ಲೊಂದು ಹಾಡು, ಇನ್ನೊಂದು ಫೈಟು. ಅತ್ತ ಪೂರ್ಣಪ್ರಮಾಣದ ಲವೂ ಇಲ್ಲ, ಅಪ್ಪ,ಅಮ್ಮನ ಸೆಂಟಿಮೆಂಟ್‌ಗೆ ಅರ್ಥವೂ ಇಲ್ಲ.

ಎಲ್ಲವೂ ಮುಂಗೋಪಿ ಹುಡುಗನ ಸುತ್ತವೇ ಸುತ್ತಿರುವುದರಿಂದ “ಕಿಡಿ’ ಅಷ್ಟಾಗಿ ಆವರಿಸಿಕೊಳ್ಳುವುದಿಲ್ಲ. ಒಂದು ಕಮರ್ಷಿಯಲ್‌ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆಯಾದರೂ, ಅದನ್ನು ನೀಟ್‌ ಆಗಿ ನಿರೂಪಿಸಲು ಸಾಧ್ಯವಾಗಿಲ್ಲ. ಹಾಗಂತ ಇಡೀ ಚಿತ್ರದಲ್ಲಿ ಗಮನಸೆಳೆಯುವ ಅಂಶವೇ ಇಲ್ಲವಂಥಲ್ಲ. ಮನುಷ್ಯ ತಾಳ್ಮೆಯಿಂದಿದ್ದರೆ, ಮುಂದಾಗುವ ಅವಘಡಗಳನ್ನು ಹೇಗೆಲ್ಲಾ ತಪ್ಪಿಸಬಹುದು ಎಂಬುದಕ್ಕೆ ಈ ಸಿನಿಮಾ ಉದಾಹರಣೆಯಾಗಿ ಕಾಣುತ್ತೆ.

ಕೋಪವನ್ನು ಕಡಿಮೆ ಮಾಡಿಕೊಳ್ಳದೇ ಹೋದಲ್ಲಿ, ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನಿಲ್ಲಿ ಕಾಣಬಹುದು. ಇದಷ್ಟೇ ಸಮಾಧಾನದ ವಿಷಯ. ಸಿನಿಮಾ ಕಥೆ ವಿಷಯಕ್ಕೆ ಬಂದರೆ, ಅವನು ಮುಂಗೋಪಿ. ಅಂಥಾ ಕೋಪಿಷ್ಟ ಹುಡುಗನನ್ನು ಪ್ರೀತಿಸಿ, ಮದುವೆಯಾಗುವ ಹುಡುಗಿಗೆ ಅವನ ಕೋಪವನ್ನು ತಣ್ಣಗೆ ಮಾಡುವ ತವಕ. ಇವರಿಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೂ ಜಗಳ ಶುರು.

ಅದೇ ಕಾರಣಕ್ಕೆ ದೊಡ್ಡ ಸಮಸ್ಯೆಗೂ ಸಿಲುಕುತ್ತಾರೆ. ಆಮೇಲೆ ಏನೆಲ್ಲಾ ಆಗಿ ಹೋಗುತ್ತೆ. ಅವನ ಕೋಪ ಯಾವ ಹಂತಕ್ಕೆ ಹೋಗಿ, ಎಷ್ಟೆಲ್ಲಾ ಅವಘಡಕ್ಕೆ ಕಾರಣವಾಗುತ್ತೆ ಎಂಬುದು ಕಥೆ ಮತ್ತು ವ್ಯಥೆ. ಅವರ “ಕಿಡಿ’ ಎಂಥದ್ದು ಎಂಬ ಕುತೂಹಲವಿದ್ದರೆ ಚಿತ್ರಮಂದಿರದತ್ತ ಹೋಗಬಹುದು. ಭುವನ್‌ ಚಂದ್ರ ಅವರ ನಟನೆಗಿಂತ ಫೈಟ್‌ನಲ್ಲಿ ಇಷ್ಟವಾಗುತ್ತಾರೆ. ಡೈಲಾಗ್‌ ಡಿಲವರಿಯಲ್ಲಿ ಇನ್ನಷ್ಟು ಗಮನಹರಿಸಬೇಕಿದೆ.

ಇನ್ನು, ನಾಯಕಿ ಪಲ್ಲವಿಗೌಡ ಅವರಿಲ್ಲಿ ಅಳುವುದರಲ್ಲಷ್ಟೇ ಗಮನಸೆಳೆಯುತ್ತಾರೆ. ಮಿಕ್ಕಂತೆ ಹಾಡೊಂದರಲ್ಲಿ ಚೆಂದ ಕಾಣುತ್ತಾರಷ್ಟೇ. ಉಗ್ರಂ ಮಂಜು ಖಳನ ಖದರ್‌ ತೋರಿಸಿದರೆ, ಚೂಲಿ ಪಾತ್ರದ ಮೂಲಕ ಡ್ಯಾನಿ ಕುಟ್ಟಪ್ಪ ರಗಡ್‌ ಲುಕ್‌ನಲ್ಲಿ ಭಯಪಡಿಸುತ್ತಾರೆ. ಉಳಿದಂತೆ ಯತಿರಾಜ್‌, ಪವನ್‌, ಮೋಹನ್‌ ರೈ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ಎಮಿಲ್‌ ಸಂಗೀತದಲ್ಲಿನ್ನೂ ಸ್ವಾದ ಬೇಕಿತ್ತು. ಬೆನಕರಾಜು ಕ್ಯಾಮೆರಾದಲ್ಲಿ “ಕಿಡಿ’ಯ ಅಂದವಿದೆ.

ಚಿತ್ರ: ಕಿಡಿ
ನಿರ್ಮಾಣ: ನಾಗರಾಜ್‌, ಮಲ್ಲಿಕಾರ್ಜುನಯ್ಯ, ಧನಂಜಯ್‌
ನಿರ್ದೇಶನ: ರಘು ಎಸ್‌.
ತಾರಾಗಣ: ಭುವನ್‌ ಚಂದ್ರ, ಪಲ್ಲವಿ ಗೌಡ, ಉಗ್ರಂ ಮಂಜು, ಡ್ಯಾನಿ ಕುಟ್ಟಪ್ಪ, ಯತಿರಾಜ್‌, ಮೋಹನ್‌ರೈ, ಪವನ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.