ಆಶ್ವಾಸನೆಗಷ್ಟೇ ಸೀಮಿತವಾದ ಎಂಎಲ್‌ಎ


Team Udayavani, Nov 11, 2018, 11:19 AM IST

pratham-sonal.jpg

ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಜಕೀಯ ರಂಗ, ರಂಗು-ರಂಗಾಗಿರುತ್ತದೆ. ಇಂತಹ ರಾಜಕೀಯವನ್ನು ಚಿತ್ರದ ಮೂಲಕ ತೆರೆಮೇಲೆ ತಂದರೆ ಅದರ ರಂಗು ಹೇಗಿರಬಹುದು? ಇಂಥದ್ದೊಂದು ರಾಜಕೀಯ ಚಿತ್ರಣವನ್ನು ತೆರೆಮೇಲೆ ಕಟ್ಟಿಕೊಡಲು ಹೊರಟಿರುವುದು “ಎಂಎಲ್‌ಎ’ ಚಿತ್ರ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ಪಡ್ಡೆ ಹುಡುಗರ ತುಂಟಾಟ, ರಾಜಕೀಯ ಚದುರಂಗದಾಟ, ನಡುವೆ ಪ್ರೀತಿಯ ಕಣ್ಣಾಮುಚ್ಚಾಲೆ ಇವಿಷ್ಟೂ ಸೇರಿದರೆ, “ಎಂಎಲ್‌ಎ’ ಚಿತ್ರವಾಗುತ್ತದೆ. 

ಕೆಲಸ-ಕಾರ್ಯವಿಲ್ಲದೆ, ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದುವ ಒಳ್ಳೆ ಹುಡ್ಗ ಪ್ರಥಮ್‌ಗೆ ಒಂದಷ್ಟು ತರಲೆ ಸ್ನೇಹಿತರು. ಹೀಗೆ ಒಂದಷ್ಟು ತರಲೆ ಕೆಲಸಗಳನ್ನು ಮಾಡಿಕೊಂಡಿರುವಾಗಲೇ ನಡುವೆ ಸಿಗುವ‌ ಹುಡುಗಿಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಇದೇ ಹೊತ್ತಿಗೆ ಚುನಾವಣೆ ಕೂಡ ಘೋಷಣೆಯಾಗುತ್ತದೆ. ಅಚಾನಕ್‌ ಆಗಿ ನಡೆಯುವ ಸನ್ನಿವೇಶದಲ್ಲಿ ಒಳ್ಳೆ ಹುಡ್ಗ ಪ್ರಥಮ್‌ ಹಾಲಿ ನಗರಾಭಿವೃದ್ಧಿ ಸಚಿವರ ವಿರುದ್ದ ಚುನಾವಣೆಗೆ ನಿಲ್ಲಬೇಕಾಗುತ್ತದೆ.

ಅಲ್ಲಿಯವರೆಗೆ ಮಾಡಿದ ಪರೋಪಕಾರಿ ಕೆಲಸಗಳು ಈಗ ಪ್ರಥಮ್‌ ಕೈ ಹಿಡಿಯುತ್ತವೆ. ಕೇವಲ ನೂರು ವೋಟ್‌ ತೆಗೆದುಕೊಂಡು ತನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಎಂದು ಹೊರಟ ಪ್ರಥಮ್‌, ನೋಡುನೋಡುತ್ತಿದ್ದಂತೆ ಸಾವಿರಾರು ವೋಟ್‌ ಲೀಡ್‌ ತೆಗೆದುಕೊಂಡು ಹಾಲಿ ಸಚಿವರನ್ನು ಸೋಲಿಸಿ, ಎಂಎಲ್‌ಎ ಪ್ರಥಮ್‌ ಆಗುತ್ತಾನೆ. ಸರ್ಕಾರ ರಚನೆಗೆ ಕೇವಲ ಒಂದೇ ಒಂದು ಮತ ಮ್ಯಾಜಿಕ್‌ ನಂಬರ್‌ ಆಗಿದ್ದರಿಂದ, ಪಕ್ಷೇತರ ಎಂಎಲ್‌ಎ ಪ್ರಥಮ್‌ಗೆ ಎಲ್ಲಿಲ್ಲದ ಬೇಡಿಕೆ!

ಇದೇ ಅವಕಾಶವನ್ನು ಬಳಸಿಕೊಂಡು ತನ್ನ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟು ಎಂಎಲ್‌ಎ ಪ್ರಥಮ್‌ ಅಂದುಕೊಂಡಂತೆ ನಗರಾಭಿವೃದ್ಧಿ ಸಚಿವನಾಗುತ್ತಾನೆ. ರಾಜಕೀಯದ ಆಳ-ಅಗಲ ಗೊತ್ತಿಲ್ಲ ಎಂಎಲ್‌ಎ ಕಂ ನಗರಾಭಿವೃದ್ಧಿ ಸಚಿವ ಮುಂದೇನು ಮಾಡುತ್ತಾನೆ? ಪ್ರಥಮ್‌ ಅಧಿಕಾರವಧಿಯಲ್ಲಿ ಏನೇನು ಕೆಲಸ-ಕಾರ್ಯಗಳು ಆಗುತ್ತವೆ? ಬಚ್ಚಾ ಎಂದು ಕರೆಸಿಕೊಳ್ಳುವ ಹುಡ್ಗ ಹೇಗೆ ಅಚ್ಚಾ ಎಂದೆನಿಸಿಕೊಳ್ಳುತ್ತಾನಾ? ಅನ್ನೋದೇ ಚಿತ್ರದ ಕಥಾಹಂದರ.

ಇದನ್ನ ಕಣ್ಣಾರೆ ಕಾಣಬೇಕೆಂಬ ಕುತೂಹಲವಿದ್ದರೆ, ನೀವು “ಎಂಎಲ್‌ಎ’ ಚಿತ್ರವನ್ನು ನೋಡಬಹುದು. ಯಾವುದೇ ಹೊಸತನವಿಲ್ಲದೆ ಸರಳ ಕಥೆಯೊಂದನ್ನು, ಒಂದಷ್ಟು ಮೇಲೊಗರ, ಒಗ್ಗರಣೆ ಸೇರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಮೌರ್ಯ. ಕಥೆಗಿಂತ ಹೆಚ್ಚಾಗಿ ಸನ್ನಿವೇಶಗಳ ಮೂಲಕ ನೋಡುಗರನ್ನು ರಂಜಿಸಲು ಮುಂದಾಗಿರುವ ನಿರ್ದೇಶಕರು ಅದಕ್ಕೆ ತಕ್ಕಂತೆ ದೃಶ್ಯಗಳನ್ನು ಜೋಡಿಸಿ ಜಾಣ್ಮೆ ಮೆರೆದಿದ್ದಾರೆ.

ಅದನ್ನೂ ಹೊರತುಪಡಿಸಿದರೆ, ಚಿತ್ರದ ಬೇರಾವ ಸಂಗತಿಗಳು ಗಮನ ಸೆಳೆಯುವುದಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಪ್ರಥಮ್‌ ಬಿಗ್‌ಬಾಸ್‌ ಮನೆಯೊಳಗೆ-ಹೊರಗೆ ಹೇಗೆ ವರ್ತಿಸುತ್ತಿದ್ದರೊ ಅದೇ ವರ್ತನೆ ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ನಾಯಕಿ ಸೋನಾಲ್‌ ಮೊಂತೆರೋ ಮತ್ತು ರೇಖಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಪ್ರೇಕ್ಷಕರನ್ನು ನಗಿಸುವ ಸಲುವಾಗಿಯೇ ಸೃಷ್ಟಿಸಿದ ಕುರಿ ಪ್ರತಾಪ್‌ ಮತ್ತಿತರ ಪಾತ್ರಗಳು ಅಲ್ಲಲ್ಲಿ ಒಂದಷ್ಟು ನಗುತರಿಸುತ್ತವೆ.

ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ವಿಕ್ರಮ್‌ ಸುಬ್ರಮಣ್ಯ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿವೆ. ಕೃಷ್ಣ ಸಾರಥಿ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಕೆ.ಆರ್‌ ಲಿಂಗರಾಜು ಸಂಕಲನ ಕೆಲವು ಕಡೆಗಳಲ್ಲಿ ಇನ್ನಷ್ಟು ಮೊನಚಾಗಿದ್ದರೆ, ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗುವವರಿಗೆ “ಎಂ.ಎಲ್‌.ಎ’ ಹಿಡಿಸುವುದು ತುಸು ಕಷ್ಟ ಎನ್ನಬಹುದು. 

ಚಿತ್ರ: ಎಂಎಲ್‌ಎ
ನಿರ್ಮಾಣ: ವೆಂಕಟೇಶ್‌ ರೆಡ್ಡಿ 
ನಿರ್ದೇಶನ: ಮೌರ್ಯ
ತಾರಾಗಣ: ಪ್ರಥಮ್‌, ಸೋನಾಲ್‌ ಮಂತೇರೋ, ರೇಖಾ, ಕುರಿ ಪ್ರತಾಪ್‌, ರಾಜಶೇಖರ್‌, ನವೀನ್‌ ಪಡೀಲ್‌, ಚಂದ್ರಕಲಾ ಮೋಹನ್‌, ಕುರಿರಂಗ, ಹೆಚ್‌.ಎಂ ರೇವಣ್ಣ ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.