ಪ್ರೇಕ್ಷಕರ ಬ್ರೇನ್‌ ಜೊತೆಗೆ ನಾರಾಯಣ್‌ ಗೇಮ್‌!


Team Udayavani, Jun 24, 2017, 10:15 AM IST

panta.jpg

“ಅಪ್ಪಾ ಗಣೇಶ, ಇಲ್ಲಿ ಏನಾಗ್ತಿದೆ ಅಂತ ಅರ್ಥಾನೇ ಆಗ್ತಿಲ್ಲ …’ ಚಿತ್ರದಲ್ಲಿ ಏನಾಗುತ್ತಿದೆ ಎಂದು ಬರೀ ಪಾತ್ರಕ್ಕಷ್ಟೇ ಅಲ್ಲ, ಪ್ರೇಕ್ಷಕನಿಗೂ ಸ್ಪಷ್ಟವಾಗುವುದಿಲ್ಲ. ಆದರೆ, ಏನೋ ಒಂದು ವಿಭಿನ್ನವಾಗಿ ಆಗುತ್ತಿದೆ ಎಂದು ಮಾತ್ರ ಗೊತ್ತಾಗುತ್ತಿರುತ್ತದೆ. ಚಿನ್ನದ ಅಂಗಡಿ ದೋಚುವುದಕ್ಕೆ ಹೋಗುವವನು, ಆ ಅಂಗಡಿಯ ಮಾಲೀಕನಿಗೇ ಫೋನ್‌ ಮಾಡಿ, ತಾನು ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಕೊಡುತ್ತಿರುತ್ತಾನೆ. ಅದೇ ತಂಡದ ಇನ್ನೊಬ್ಬ ಪೊಲೀಸರಿಗೆ ಫೋನ್‌ ಮಾಡಿ, ಕಳ್ಳತನವಾಗುತ್ತಿರುವ ಬಗ್ಗೆ ಹೇಳುತ್ತಿರುತ್ತಾನೆ. ಅಂಗಡಿ ಒಳಗೆ ದರೋಡೆ ನಡೆಯುತ್ತಿದೆ. ಹೊರಗೆ ಆ ಕಡೆ ಅಂಗಡಿಯವರು, ಈ ಕಡೆ ಪೊಲೀಸರು, ಇವರ ಜೊತೆಗೆ ಆ ಕಳ್ಳರನ್ನು ಹುಡುಕಿಕೊಂಡು ಬಂದ ಇನ್ನಷ್ಟು ಜನ …

ಆಗ ಸಹಜವಾಗಿಯೇ ಪ್ರೇಕ್ಷಕರಿಗೂ, ಅಲ್ಲೇನಾಗುತ್ತಿದೆ ಎಂಬ ವಿಷಯ ಅರ್ಥವಾಗುವುದಿಲ್ಲ. ಕ್ರಮೇಣ ಚಿತ್ರ ಮುಂದುವರೆಯುತ್ತಿದ್ದಂತೆ, ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ಒಂದು ಸಂದರ್ಭದಲ್ಲಿ ಇಂಥದ್ದೊಂದು ಕಥೆ ಮತ್ತು ಚಿತ್ರಕಥೆ ಮಾಡಿದವರ ಬಗ್ಗೆ ಮೆಚ್ಚುಗೆಯೂ ಆಗುತ್ತದೆ. ಆ ಮಟ್ಟಕ್ಕೆ ಹೆಣೆಯಲಾಗಿದೆ. ಚಿತ್ರದ ಹೈಲೈಟ್‌ ಎಂದರೆ ನಾಯಕ ಮತ್ತು ಖಳನಾಯಕನ ನಡುವಿನ ಮೈಂಡ್‌ ಗೇಮ್‌. ನಾಯಕ ಚಾಪೆ ಕೆಳಗೆ ತೂರಿದರೆ, ಖಳನಾಯಕ ರಂಗೋಲಿ ಕೆಳಗೆ ತೂರುತ್ತಾನೆ, ನಾಯಕ ಅವನನ್ನೂ ಮೀರಿಸಿ ಭೂಮಿ ಕೆಳಗೇ ತೂರಿ ಹೇಗೆ ಖಳನಾಯಕನನ್ನು ಬಗ್ಗುಬಡಿಯುತ್ತಾನೆ ಎನ್ನುವುದು ಚಿತ್ರದ ಹೈಲೈಟ್‌.

ಈ ಕಥೆ ಕೇಳಿ, ಅವರೇ ಈ ಚಿತ್ರದ ಕಥೆ ಬರೆದರಾ ಎಂಬ ಸಂಶಯ ಬರುವುದು ಸಹಜ. ಏಕೆಂದರೆ, ನಾರಾಯಣ್‌ ಇದುವರೆಗೂ ಕೌಟುಂಬಿಕ ಮತ್ತು ಪ್ರೇಮಮಯ ಕಥೆಗಳನ್ನು ಬರೆದು, ನಿರ್ದೇಶಿಸಿದ್ದೇ ಹೆಚ್ಚು. ಈ ತರಹದ ಪ್ರಯತ್ನಗಳನ್ನು ಅವರು ಮಾಡಿರಲಿಲ್ಲ. ಹಾಗಾಗಿ ಈ ಸಂಶಯಕ್ಕೆ ಕಾರಣವಿದೆ. ಇಲ್ಲ, ಇದು ನಾರಾಯಣ್‌ ಅವರು ಬರೆದ ಕಥೆಯಲ್ಲ. ಎರಡು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದ “ರಾಜತಂತ್ರಂ’ ಎಂಬ ಚಿತ್ರದ ರೀಮೇಕ್‌ ಇದು. ಇಲ್ಲಿ ಮೂವರು ಕಳ್ಳರ ಕಥೆಯನ್ನು ಹೇಳಲಾಗಿದೆ. ಅದೇ ಚಿತ್ರವನ್ನು ಕೆಲವು ಬದಲಾವಣೆಗಳೊಂದಿಗೆ, ಇಲ್ಲಿನ ನೇಟಿವಿಟಿಗೆ ಅಳವಡಿಸಲಾಗಿದೆ.

ಸಣ್ಣ-ಪುಟ್ಟ ಕಳ್ಳತನಗಳನ್ನು ಮಾಡುವ ಮೂವರು, ಅದೊಮ್ಮೆ ದೊಡ್ಡದಕ್ಕೆ ಕೈ ಹಾಕುತ್ತಾರೆ. ಹಾಗೆ ಮಾಡುವುದಕ್ಕೆ ಅವರ ಹಿಂದೊಂದು ಮಹತ್ತರವಾದ ಕಾರಣವೂ ಇದೆ. ಆ ಕಾರಣವೇನು ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಚಿತ್ರದ ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ಮೂವರು ಪಡ್ಡೆಗಳ ತುಂಟಾಟ, ನಾಯಕ-ನಾಯಕಿಯ ನಡುವಿನ ಕಣ್ಣಾಮುಚ್ಚಾಲೆಯಾಟ … ಇವೆಲ್ಲಾ ಚಿತ್ರವನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುವುದಕ್ಕಿಂತ, ಅಲ್ಲಲ್ಲಿ ಬ್ರೇಕ್‌ ಹಾಕುತ್ತದೆ. ಒಂದು ದೊಡ್ಡ ಕಳ್ಳತನ ಮಾಡಿ, ಮುಂದೆ ಕಳ್ಳತನ ಬಿಟ್ಟುಬಿಡೋಣ ಎಂದು ನಾಯಕ ನಿರ್ಧರಿಸುತ್ತಾನೆ.

ಅಲ್ಲಿಂದ ಚಿತ್ರಕ್ಕೊಂದು ವೇಗ ಬರುತ್ತದೆ. ಆ ನಂತರ ನಡೆಯುವ ಕಳ್ಳತನದ ಎಪಿಸೋಡು ಪ್ರೇಕ್ಷಕರಿಗೆ ಚುರುಕು ಮುಟ್ಟಿಸಿದರೆ, ಇಂಟರ್‌ವೆಲ್‌ ಹೊತ್ತಿಗೆ ಚಿತ್ರಕ್ಕೊಂದು ಟ್ವಿಸ್ಟ್‌ ಸಿಗುತ್ತದೆ. ಇಂಟರ್‌ವೆಲ್‌ ಮುಗಿದ ನಂತರ ಚಿತ್ರಕ್ಕೆ ಇನ್ನೊಂದು ಮಜಲು ಸಿಗುತ್ತದೆ. ಆಗ ನಾಯಕನಿಗಷ್ಟೇ ಅಲ್ಲ ಪ್ರೇಕ್ಷಕರಿಗೂ ಚಿತ್ರದ ಖಳನಾಯಕ ಯಾರು ಎಂದು ಗೊತ್ತಾಗುತ್ತದೆ. ಅಲ್ಲಿಂದ ಅಸಲಿ ಆಟ ಶುರುವಾಗುತ್ತದೆ. ಹಾಗೆ ಶುರುವಾಗಿ, ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ. ಆ ಮಟ್ಟಿಗೆ, ನಾರಾಯಣ್‌ ಮೂಲ ಚಿತ್ರದ ಹಿಡಿತವನ್ನೇ ಕಾಯ್ದಿಟ್ಟುಕೊಂಡಿದ್ದಾರೆ.

ಆದರೂ ಮೊದಲಾರ್ಧ ಚಿತ್ರ ಇನ್ನಷ್ಟು ಚುರುಕಾಗಿದ್ದರೆ, ಪ್ರೇಕ್ಷಕರಿಗೆ ಇನ್ನಷ್ಟು ಖುಷಿಕೊಡುತಿತ್ತು. “ಲಕ್ಷ್ಮಣ’ಗೆ ಹೋಲಿಸಿದರೆ, ಅಭಿನಯದಲ್ಲಿ ಅನೂಪ್‌ ಸಾಕಷ್ಟು ಸುಧಾರಿಸಿದ್ದಾರೆ. ಚಿತ್ರದ ಸರ್‌ಪ್ರೈಸ್‌ ಎಂದರೆ ನಾಯಕಿ ರಿತೀಕ್ಷಾ ಮತ್ತು ಶಾಸಕ ಶ್ರೀನಿವಾಸಮೂರ್ತಿ. ಮೊದಲ ಪ್ರಯತ್ನದಲ್ಲೇ ಇಬರೂ ಗಮನಸೆಳೆಯುತ್ತಾರೆ. ಕರಿಸುಬ್ಬು, ವಿಶ್ವ ಮುಂತಾದವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಇನ್ನೊಂದು ಹೈಲೈಟ್‌ ಎಂದರೆ ಸುದೀಪ್‌ ಹಾಡಿರುವ ರೊಮ್ಯಾಂಟಿಕ್‌ ಹಾಡು.

ಚಿತ್ರ: ಪಂಟ
ನಿರ್ದೇಶನ: ಎಸ್‌. ನಾರಾಯಣ್‌
ನಿರ್ಮಾಣ: ಸುಬ್ರಹ್ಮಣ್ಯಮ್‌
ತಾರಾಗಣ: ಅನೂಪ್‌, ರಿತೀಕ್ಷಾ, ರವಿ ಕಾಳೆ, ಕರಿಸುಬ್ಬು, ಶ್ರೀನಿವಾಸಮೂರ್ತಿ ವಿಶ್ವ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

9

Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.