ಏಳು ಬೀಳುಗಳ ಹೊಸ ವರ್ಷ


Team Udayavani, May 6, 2017, 11:11 AM IST

Happy-New-year.jpg

ಐದು ಜೋಡಿಗಳು, ಐದು ಕಥೆಗಳು, ಐದು ಸಂಘರ್ಷಗಳು … ಇವಿಷ್ಟನ್ನೂ ಬೆಸೆಯುವುದು ಒಂದು ಹೊಸ ವರ್ಷ. ಒಂದು ಹೊಸ ವರ್ಷದ ಸಂದರ್ಭದಲ್ಲಿ ನಡೆಯಬಹುದಾದ ಲಕ್ಷಾಂತರ ಕಥೆಗಳಲ್ಲಿ, ಐದು ಕಥೆಗಳನ್ನು ಹೆಕ್ಕಿ “ಹ್ಯಾಪಿ ನ್ಯೂ ಇಯರ್‌’ ಚಿತ್ರದ ಮೂಲಕ ಇಡುವುದಕ್ಕೆ ಪ್ರಯತ್ನಿಸಿದ್ದಾರೆ. ಇದೊಂದು ಅದ್ಭುತ ಪ್ರಯೋಗ ಅಥವಾ ಈ ತರಹದ ಪ್ರಯೋಗಗ ಕನ್ನಡದಲ್ಲಿ ಆಗಿಯೇ ಇಲ್ಲ ಎಂದು ಹೇಳುವುದು ಕಷ್ಟ.

“ನೀರ್‌ ದೋಸೆ’ ಚಿತ್ರದಲ್ಲೂ ನಾಲ್ಕು ವಿಭಿನ್ನ ಕಥೆಗಳನ್ನು ನೀರ್‌ ದೋಸೆ ಹೇಗೆ ಬೆಸೆಯುತ್ತದೆ ಎಂದು ತೋರಿಸಲಾಗಿತ್ತು. ಇಲ್ಲಿ ನೀರ್‌ ದೋಸೆ ಬದಲಿಗೆ ಹೊಸ ವರ್ಷವೊಂದು ಅಷ್ಟೂ ಕಥೆಗಳಿಗೆ ವೇದಿಕೆಯಾಗುತ್ತದೆ. ಹಾಗಾಗಿಯೇ ಈ ತರಹದ್ದೊಂದು ಪ್ರಯತ್ನ ಆಗಿಲ್ಲ ಎಂದು ಹೇಳುವುದು ಕಷ್ಟ. ಆದರೆ, ನಿರ್ದೇಶಕ ಪನ್ನಗ ತಮ್ಮ ಮೊದಲ ಚಿತ್ರದಲ್ಲೇ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ರೀತಿಯನ್ನು ಮೆಚ್ಚಬೇಕು.

ಚಿತ್ರ ಶುರುವಾಗುವುದು ಡಿಸೆಂಬರ್‌ 27ರಂದು. ಮುಕ್ತಾಯವಾಗುವುದು ಡಿಸೆಂಬರ್‌ 31ರ ಮಧ್ಯರಾತ್ರಿಯಂದು. ಈ ಐದು ದಿನಗಳಲ್ಲಿ ಐದು ಜೋಡಿಗಳ ಜೀವನ ಹೇಗೆಲ್ಲಾ ಬದಲಾಗುತ್ತದೆ ಮತ್ತು ಆ ಜೋಡಿಗಳು ಏನೆಲ್ಲಾ ಸತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಜೋಡಿಗಳ ಮೂಲಕ ಪ್ರೇಕ್ಷಕರಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸುವ ಪ್ರಯತ್ನವನ್ನು ಪನ್ನಗ ಮಾಡುತ್ತಾ ಹೋಗುತ್ತಾರೆ.

ಪ್ರಮುಖವಾಗಿ ಜೀವನದಲ್ಲಿ ಸಂತೋಷವಾಗಿರುವುದಕ್ಕೆ ಪ್ರಯತ್ನಿಸಬೇಕು ಮತ್ತು ಆ ಸಂತೋಷವನ್ನು ಮುಂದೂಡದೇ ಅನುಭವಿಸಬೇಕು ಎಂಬುದನ್ನು ಪನ್ನಗ ಚಿತ್ರದುದ್ದಕ್ಕೂ ಹೇಳಿದ್ದಾರೆ. ಇಲ್ಲಿ ಒಂದೊಂದು ಕಥೆಗೂ ಹಿನ್ನೆಲೆ, ಪರಿಸರ, ವಯೋಮಾನ ಎಲ್ಲವೂ ಬೇರೆ ಇದೆ. ಮಧ್ಯವಯಸ್ಕ ಮದುವೆಯಾಗದ ಮತ್ತು ಅನಾಥ ರೌಡಿಯ ಕಥೆ ಒಂದು ಕಡೆಯಾದರೆ, ಇನ್ನೊಂದು ಕಡೆ ತನ್ನ ಹೆಂಡತಿ ಗೊಡ್ಡು ಸಂಪ್ರದಾಯಸ್ಥೆ ಎಂದು ಗೊಣಗಾಡುವ ಶ್ರೀಮಂತನಿದ್ದಾನೆ.

ಕೆಲಸ ಮಾಡಿ ಹೈರಾಣಾಗಿರುವ ಐಟಿ ಉದ್ಯೋಗಿ ಮತ್ತೂಂದು ಕಡೆ ಇದ್ದರೆ, ಮಗದೊಂದು ಕಡೆ ಒಬ್ಬ ಸಾಮಾನ್ಯ ಮತ್ತು ಪ್ರಾಮಾಣಿಕ ಪೇದೆ ಇದ್ದಾನೆ. ಇವರೆಲ್ಲರ ಜೊತೆಗೆ ತನ್ನ ಸ್ನೇಹಿತೆಯನ್ನು ಸಾವಿನಿಂದ ಬದುಕಿಸಿಕೊಳ್ಳುವುದಕ್ಕೆ ಹೋರಾಡುತ್ತಿರುವ ರೇಡಿಯೋ ಜಾಕಿ ಬೇರೆ … ಇವರೆಲ್ಲರದ್ದೂ ಒಂದೊಂದು ಹೋರಾಟ ಮತ್ತು ಸಂಘರ್ಷ. ಈ ಎಲ್ಲಾ ಕಥೆಗಳಿಗೂ ಹಿನ್ನೆಲೆಯಲ್ಲಿ ನಿಂತಿರುವುದು ಹೊಸ ವರ್ಷ.

ಕೆಲವರು ಹೊಸ ವರ್ಷದಂದು ಏನೋ ಗಳಿಸುತ್ತಾರೆ, ಇನ್ನೇನೋ ಕಳೆದುಕೊಳ್ಳುತ್ತಾರೆ. ಯಾರ್ಯಾರು ಏನೇನು ಕಳೆದುಕೊಳ್ಳುತ್ತಾರೆ ಮತ್ತು ಗಳಿಸುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಹಾಗೆ ನೋಡಿದರೆ ಒಂದಕ್ಕೊಂದು ಕಥೆಗಳಿಗೆ ಸಂಬಂಧವಿಲ್ಲ. ಒಮ್ಮೆ ಮಾತ್ರ ಪೊಲೀಸ್‌ ಪೇದೆ ಮತ್ತು ರೇಡಿಯೋ ಜಾಕಿ ಒಂದು ದೃಶ್ಯದಲ್ಲಿ ಒಟ್ಟಾಗುತ್ತಾರೆ ಎನ್ನುವುದು ಬಿಟ್ಟರೆ, ಕಥೆಗಳಿಗೂ ಮತ್ತು ಪಾತ್ರಗಳಿಗೂ ಸಂಬಂಧವಿಲ್ಲ.

ಹಾಗೆ ಒಂದೇ ಚಿತ್ರದಲ್ಲಿ ಇದ್ದೂ, ಒಂದೊಂದು ಕಥೆಗೂ ಪ್ರತ್ಯೇಕವಾದ ಐಡೆಂಟಿಟಿ ಕೊಟ್ಟಿರುವುದು ಒಂದು ಹೆಚ್ಚುಗಾರಿಕೆಯಾದರೆ. ಅದೇ ತರಹದ ಕೆಲವು ಮಿತಿಗಳಿವೆ. ಪ್ರಮುಖವಾಗಿ ಈ ಎಲ್ಲಾ ಕಥೆಗಳಿಗೂ ಒಂದು ಸ್ಪಷ್ಟ ಅರ್ಥ ಸಿಗುವುದು ಕೊನೆಯ 20 ನಿಮಿಷಗಳಲ್ಲಿ ಮಾತ್ರ. ಅದಕ್ಕೂ ಮುನ್ನ ಒಂದೊಂದು ಕಥೆಯ ಒಂದೊಂದು ಘಟನೆ ಒಂದರಹಿಂದೊಂದು ನಡೆಯುತ್ತಲೇ ಇರುತ್ತದೆ. ಹೀಗೆ ಒಂದರಹಿಂದೊಂದು ಘಟನೆಗಳು ನಡೆಯುವುದರಿಂದ, ಯಾವುದಕ್ಕೂ ಒಂದು ಸ್ಪಷ್ಟ ಚಿತ್ರಣ ಸಿಗುವುದಿಲ್ಲ.

ಹಾಗೆಯೇ ಯಾವುದೋ ಕಥೆಯಲ್ಲಿ ಒಂದೊಳ್ಳೆಯ ತಿರುವು ಸಿಕ್ಕಿತು ಎನ್ನುವಷ್ಟರಲ್ಲಿ ಇನ್ನೊಂದು ಕಥೆಗೆ ಶಿಫ್ಟ್ ಆಗುವುದರಿಂದ ತುಂಡರಿಸಿದಂತಾಗುತ್ತದೆ. ಹಾಗಾಗಿ ಚಿತ್ರದಲ್ಲಿ ತರಹೇವಾರಿ ಎಮೋಷನ್‌ಗಳಿದ್ದರೂ, ಅದು ಹಿಡಿದಿಡುವುದಿಲ್ಲ. ಆಗಾಗ ಸ್ವಲ್ಪ ತಟ್ಟಿ ಮಾಯವಾಗುತ್ತದೆ. ಬಹುಶಃ ಕಥೆಗಳ ಸಂಖ್ಯೆ ಕಡಿಮೆ ಮಾಡಿದ್ದರೆ ಮತ್ತು ಎಲ್ಲಾ ಕಥೆಗಳಿಗೂ ಒಂದಿಷ್ಟು ಕತ್ತರಿ ಆಡಿಸಿದ್ದರೆ, ಚಿತ್ರ ಇನ್ನಷ್ಟು ಅರ್ಥಪೂರ್ಣವಾಗಿರುತಿತ್ತು. ಈ ತರಹದ ವಿಷಯಗಳನ್ನು ಬಿಟ್ಟರೆ, ಚಿತ್ರದಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಕಷ್ಟ.

ಮಿಕ್ಕಂತೆ ಅಭಿನಯ, ಛಾಯಾಗ್ರಹಣ, ಸಂಗೀತ ಎಲ್ಲಾ ವಿಷಯದಲ್ಲೂ ಚಿತ್ರದಲ್ಲಿ ಪ್ಲಸ್‌ ಜಾಸ್ತಿಯಾಗಿಯೇ ಇದೆ. ಐದೂ ಕಥೆಗಳ ಐದು ನಾಯಕಿಯರು, ನಾಯಕಿಯರು ತಮ¤ಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಸಾಯಿಕುಮಾರ್‌ ಮತ್ತು ಧನಂಜಯ್‌ ಒಂದು ಹೆಜ್ಜೆ ಮುಂದೆಯೇ ಎಂದರೆ ತಪ್ಪಿಲ್ಲ. ಸಾಯಿಕುಮಾರ್‌ ನಾಟಿ ಮಧ್ಯವಯಸ್ಕನಾಗಿ ಹೆಚ್ಚು ಗಮನಸೆಳೆಯುತ್ತಾರೆ. ಶ್ರೀಷ ಕೂದುವಳ್ಳಿ ಚಂದವಾದ ಪರಿಸರ ಕಟ್ಟಿಕೊಟ್ಟರೆ, ರಘು ದೀಕ್ಷಿತ್‌ ಸಂದರ್ಭಕ್ಕೆ ತಕ್ಕ ಸಂಗೀತ ಒದಗಿಸಿದ್ದಾರೆ.

ಚಿತ್ರ: ಹ್ಯಾಪಿ ನ್ಯೂ ಇಯರ್‌
ನಿರ್ದೇಶನ: ಪನ್ನಗ ಭರಣ
ನಿರ್ಮಾಣ: ವನಜಾ ಪಾಟೀಲ್‌
ತಾರಾಗಣ: ಧನಂಜಯ್‌, ವಿಜಯ್‌ ರಾಘವೇಂದ್ರ, ದಿಗಂತ್‌, ಬಿ.ಸಿ. ಪಾಟೀಲ್‌, ಸಾಯಿಕುಮಾರ್‌, ಶ್ರುತಿ ಹರಿಹರನ್‌, ಸೃಷ್ಠಿ ಪಾಟೀಲ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.