Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Team Udayavani, Jan 11, 2025, 11:15 AM IST
ಇಲ್ಲಿ ಕಳ್ಳರಿದ್ದಾರೆ ಎಚ್ಚರ ಎಂಬ ಬೋರ್ಡ್‌ನ್ನು ಅಲ್ಲಲ್ಲಿ ನೋಡಿರುತ್ತೀರಿ. ಆದರೆ, ಈ ಸಿನಿಮಾ ನೋಡಿದ ಮೇಲೆ ಇಲ್ಲಿ ಅಲ್ಲ “ಎಲ್ಲೆಲ್ಲೂ ಕಳ್ಳರಿದ್ದಾರೆ ಎಚ್ಚರ’ ಎಂದು ಬದಲಾಯಿಸಿದರೆ ಸೂಕ್ತವೆನಿಸುತ್ತದೆ. ದುಷ್ಮನ್ ಬಗಲ್ ಮೇ ಹೈ ಎಂಬಂತೆ ಕಳ್ಳರೂ ಕೂಡ ನಮ್ಮ ಪಕ್ಕದಲ್ಲೇ ಇರುತ್ತಾರೆ. ಆದರೆ, ಅವರು ಯಾರೆಂದು ಗೊತ್ತಾಗವುದೇ ಇಲ್ಲ. ಕಳ್ಳತನದ ಕಥೆಯೊಂದಕ್ಕೆ ರೋಚಕತೆಯ ತಿರುವು ನೀಡಿದಾಗ ಆ ಸಿನಿಮಾ ಒಂದೊಳ್ಳೆಯ ಅನುಭವವನ್ನೇ ನೀಡುತ್ತದೆ. ಈ ವಾರ ತೆರೆ ಕಂಡ “ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಕೂಡ ಇದೇ ಸಾಲಿಗೆ ಸೇರುವಂಥದ್ದು.
ಕಳ್ಳತನದ ಹಲವಾರು ಸಿನಿಮಾಗಳು ಬಂದು ಹೋಗಿವೆ. ಆದರೆ, ಈ ಸಿನಿಮಾ ನೀಡುವ ಮನರಂಜನೆ ಬೇರೆ ಲೆವಲ್‌ನದ್ದು. ಇಲ್ಲಿ ಕಳ್ಳತನವಾಗುತ್ತಿದ್ದರೂ ಅದು ಕೆಟ್ಟದು ಎಂಬ ಭಾವನೆಯೇ ಬರುವುದಿಲ್ಲ. ಅದಕ್ಕೆ ಕಾರಣ ನಿರ್ದೇಶಕ ಕೇಶವ್ ಮೂರ್ತಿ ಕಥೆಯನ್ನು ನಿರೂಪಿಸಿದ ಶೈಲಿ. ಈ ಸಿನಿಮಾದಲ್ಲಿ ಚಿತ್ರಕಥೆಯೇ ಹೀರೋ ಎನ್ನಬಹುದು. ಪ್ರತಿ ದೃಶ್ಯ, ಸನ್ನಿವೇಶಗಳಲ್ಲಿ ಕೌತುಕದ ಭಾವವನ್ನು ತುಸು ಹೆಚ್ಚೇ ತುಂಬಲಾಗಿದೆ. ಚಿತ್ರದ ಆರಂಭದಿಂದಲೇ ಪ್ರೇಕ್ಷಕನಲ್ಲಿ ಮೂಡುವ ಕುತೂಹಲ, ಇಡೀ ಸಿನಿಮಾದುದ್ದಕ್ಕೂ ಟ್ವಿಸ್ಟ್ ಆ್ಯಂಡ್ ಟರ್ನ್ಗಳ ಮೂಲಕ ಅಂತ್ಯದವರೆಗೆ ರೋಚಕತೆಯನ್ನು ಉಳಿಸಿಕೊಂಡು ಹೋಗುತ್ತದೆ.
ಇಲ್ಲಿ ಪ್ರತಿ ಕಳ್ಳತನದ ಹಿಂದೆ ಒಂದು ನವೀರಾದ ಕಥೆ, ಅದನ್ನು ಸೀದಾ ಸಾದಾವಾಗಿ ಹೇಳದೇ, ಯಾರೂ ಊಹಿಸಲಾಗದ ಚೌಕಟ್ಟಿನಾಚೆಗಿನ ಕಲ್ಪನೆಯೊಂದಿಗೆ ಹೇಳಲಾಗಿದೆ. ಸಿನಿಮಾ ಒಂದೇ ಆದರೂ ಇಲ್ಲಿ ಮೂರು ಕಥೆಗಳಿವೆ. ಮೊದಲೆರಡು ಕಥೆಗಳು ಖುಷಿಯ ಅಂತ್ಯ ನೀಡಿದರೆ, ಮೂರನೇ ಕಥೆ ಮಾತ್ರ ಪ್ರೇಕ್ಷಕನ ಉತ್ಕಟತೆಯನ್ನು ತಾರಕಕ್ಕೇರಿಸುತ್ತದೆ. ಚಿತ್ರ ಮುಗಿದ ಮೇಲೂ ಇದೆಲ್ಲಾ ಹೇಗಾಯಿತು ಎಂಬ ಪ್ರಶ್ನೆ ಪ್ರೇಕ್ಷಕನ ಮನಸ್ಸಿನಲ್ಲಿ ಮೂಡುವುದಂತೂ ಖಂಡಿತ.
ಪ್ರಸನ್ನ ಶೆಟ್ಟಿ, ಅಪೂರ್ವ ಭಾರದ್ವಾಜ್, ಶಿಲ್ಪಾ ಮಂಜುನಾಥ್ ಅವರ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತವೆ. ಪ್ರಸಾದ್ ಅವರ ಸಂಗೀತ ಸಿನಿಮಾದ ಉದ್ವೇಗ ಹೆಚ್ಚಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.