‘ಓ ಮೈ ಲವ್‌’ ಚಿತ್ರ ವಿಮರ್ಶೆ: ಕಾಲೇಜ್‌ ಕ್ಯಾಂಪಸ್‌ ನಲ್ಲಿ ಕಲರ್‌ಫುಲ್‌ ಲವ್‌ಸ್ಟೋರಿ


Team Udayavani, Jul 17, 2022, 12:50 PM IST

oh my love kannada movie review

ಸ್ನೇಹ, ಪ್ರೀತಿ, ತ್ಯಾಗ … ಇದು ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವ ಕಥೆ. ಈ ಕಥೆಗಳನ್ನು ಯಾವುದೇ ಆಯಾಮ, ಪರಿಸರದಲ್ಲಿ ಹೇಳಬಹುದು. ಅದೇ ಕಾರಣದಿಂದ ಪ್ರೇಮಕಥೆಗಳಿಗೆ ಕೊನೆ ಎಂಬುದೇ ಇಲ್ಲ. ಈ ವಾರ ತೆರೆಕಂಡಿರುವ “ಓ ಮೈ ಲವ್‌’ ಚಿತ್ರ ಕೂಡಾ ಒಂದು ಲವ್‌ಸ್ಟೋರಿ.

ಹಾಗಂತ ಇದನ್ನು ಕೇವಲ ಲವ್‌ಸ್ಟೋರಿ ಎಂದು ಹೇಳುವಂತಿಲ್ಲ. ಇಲ್ಲಿ ಸ್ನೇಹಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ. ಆ ಮಟ್ಟಿಗೆ ನಿರ್ದೇಶಕ ಸ್ಟೈಲ್‌ ಶ್ರೀನು ಯೂತ್‌ಫ‌ುಲ್‌ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.

ಒಬ್ಬ ನವನಟನ ಸಿನಿಮಾದಲ್ಲಿ ಯಾವ್ಯಾವ ಅಂಶಗಳು ಹೈಲೈಟ್‌ ಆಗ ಬೇಕೋ, ಅವೆಲ್ಲವನ್ನು ಈ ಚಿತ್ರದಲ್ಲಿ ಸುಂದರವಾಗಿ ಜೋಡಿಸಲಾಗಿದೆ. ಕಥೆಯ ಬಗ್ಗೆ ಹೇಳುವುದಾದರೆ “ಓ ಮೈ ಲವ್‌’ ಕಾಲೇಜು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ. ಕಾಲೇಜು ಎಂದ ಮೇಲೆ ಅಲ್ಲಿ ನಡೆ ಯುವ ಫ‌ನ್‌ರೈಡ್‌ಗಳಿಗೆ, ಲವ್‌ಸ್ಟೋರಿಗಳಿಗೆ, ಸಣ್ಣ ಜಿದ್ದು, ಸ್ಕೆಚ್‌ಗಳಿಗೇನೂ ಕೊರತೆಯಿಲ್ಲ. ಅವೆಲ್ಲವನ್ನು ಸೇರಿಸಿಕೊಂಡು “ಓ ಮೈ ಲವ್‌’ ಚಿತ್ರವನ್ನು ಕಟ್ಟಿಕೊಡಲಾಗಿದೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿರಬೇಕಾದ ಜಬರ್ದಸ್ತ್ ಫೈಟ್‌, ಕಲರ್‌ಫ‌ುಲ್‌ ಡ್ಯಾನ್ಸ್‌. ಖಡಕ್‌ ಡೈಲಾಗ್‌… ಹೀಗೆ ಎಲ್ಲದರ ಮಿಳಿತ “ಓ ಮೈ ಲವ್‌’.

ಈ ಸಿನಿಮಾದಲ್ಲಿ ತಾನು ಏನು ಹೇಳಲು ಹೊರಟಿದ್ದೇನೆ ಎಂಬ ಕ್ಲಾéರಿಟಿ ಇರುವುದರಿಂದ ಪ್ರೇಕ್ಷಕ ಗೊಂದಲ ಮುಕ್ತ. ಆ ಮಟ್ಟಿಗೆ ನಿರ್ಮಾಪಕರೇ ಬರೆದ ಕಥೆಯನ್ನು ನಿರ್ದೇಶಕ ಶ್ರೀನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಇದು ಹೊಸ ನಾಯಕನ ಸಿನಿಮಾವಾದರೂ ಚಿತ್ರದ ಅದ್ಧೂರಿತನಕ್ಕೇನು ನಿರ್ಮಾಪಕರು ಕಡಿಮೆ ಮಾಡಿಲ್ಲ. ಒಂದೊಂದು ದೃಶ್ಯವನ್ನು ಕಲರ್‌ಫ‌ುಲ್‌ ಆಗಿಯೇ ಕಟ್ಟಿಕೊಟ್ಟಿದ್ದಾರೆ. ಫೈಟ್‌, ಹಾಡು, ದೃಶ್ಯ… ಎಲ್ಲವೂ ಅದ್ಧೂರಿಯಾಗಿವೆ. ನಾಯಕ ಅಕ್ಷಿತ್‌ ನಟನೆ, ಹಾಡು, ಫೈಟ್‌… ಎಲ್ಲದರಲ್ಲೂ ಶ್ರಮ ಹಾಕಿರುವುದು ಎದ್ದು ಕಾಣುತ್ತದೆ. ಈ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಕೀರ್ತಿ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಎಸ್‌.ನಾರಾಯಣ್‌, ಸಂಗೀತ, ದೇವ್‌ಗಿಲ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಒಂದು ಯಂಗ್‌ ಲವ್‌ ಸ್ಟೋರಿಯನ್ನು ಕಣ್ತುಂಬಿ ಕೊಳ್ಳಬೇಕೆಂದು ಕೊಂಡವರು “ಓ ಮೈ ಲವ್‌’ ಚಿತ್ರ ನೋಡಲು ಅಡ್ಡಿಯಿಲ್ಲ.

ಆರ್.ಪಿ

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.