ಕಿಚ್ಚನ ಪೈಲ್ವಾನ್ ಪಂಚ್: ಚಿತ್ರದ ಬಗ್ಗೆ ಜನರ ಅಭಿಪ್ರಾಯವೇನು?
Team Udayavani, Sep 12, 2019, 4:10 PM IST
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇಂದು ತೆರೆಕಂಡಿದೆ. ಪಂಚ ಭಾಷೆಗಳಲ್ಲಿ ತೆರೆಕಂಡ ಪೈಲ್ವಾನ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್, ಆಕಾಂಕ್ಷ ಸಿಂಗ್, ಸುನೀಲ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಹಾಗಾದರೆ ಚಿತ್ರ ನೋಡಿದ ಜನರ ಅಭಿಪ್ರಾಯ ಹೇಗಿದೆ. ಮುಂದೆ ಓದಿ.
ಸುದೀಪ್ ಅವರ ನಟನೆ ಅದ್ಬುತ. ಅದೇ ರೀತಿ ನಾಯಕ ನಟಿ ಆಕಾಂಕ್ಷ ಸಿಂಗ್ ಅವರು ಸೂಪರ್ ಆಗಿ ನಟಿಸಿದ್ದಾರೆ. ಒಟ್ಟಾರೆಯಾಗಿ ಪೈಲ್ವಾನ್ ಚಿತ್ರವು ಆಕ್ಷನ್ ಲವ್ ದುಃಖದಿಂದ ಒಳಗೊಂಡ ಒಂದು ಅದ್ಬುತ ಕಥೆಯಾಗಿದೆ. ಅರ್ಜುನ್ ಜನ್ಯಾ ರವರ ಸಂಗೀತ ನಿರ್ದೇಶನ ಹಾಡುಗಳು ಚೆನ್ನಾಗಿವೆ,
ರಾಕೇಶ್ ಖೋತ್ , ಬಾಡವಾಡಿ
ಸಾಧಾರಣ ಚಿತ್ರ. ಒಮ್ಮೆ ನೋಡಬಹುದು. ಕಿಚ್ಚ ಸುದೀಪ್ ಅವರ ಪ್ರಯತ್ನ ಮಾತ್ರ ಮೆಚ್ಚಲೇಬೇಕು. ಕಥೆಯಲ್ಲಿ ಬಲವಿಲ್ಲ. ಚಿತ್ರಕಥೆ ತುಂಬಾ ನಿಧಾನವಾಗಿ ಸಾಗುತ್ತದೆ.
ರವಿ ರಾಮ್, ಬೆಂಗಳೂರು.
ದೇಸಿ ಕಥೆಯನ್ನು ಆಧರಿಸಿದ ಸಿನಿಮಾಗಳ ಸಕ್ಸಸ್ ಫಾರ್ಮುಲಾ, ಅದನ್ನು ಆದಷ್ಟು ನೈಜ ಎನ್ನುವಂತೆ ಕಟ್ಟಿ ಕೊಡುವುದು ಮತ್ತು ಭಾವನಾತ್ಮಕವಾಗಿ ಕಥೆ ಹೇಳುವುದು. ಪೈಲ್ವಾನ್ ಸಿನಿಮಾ ಕೂಡ ಇದೇ ಮಾದರಿಯಲ್ಲಿ ಮೂಡಿ ಬಂದಿದೆ. ಅನಾಥ ಹುಡುಗನೊಬ್ಬ ಪೈಲ್ವಾನ್ ಕುಟುಂಬದ ಮನೆ ಸೇರಿಕೊಂಡು, ಆ ಕುಟುಂಬದ ಯಜಮಾನ ಸರಕಾರ್ (ಸುನೀಲ್ ಶೆಟ್ಟಿ)ನ ಕನಸಾದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಪಟ್ಟ ಪಡೆಯುವ ರೋಚಕ ಕಥೆಯೇ ಪೈಲ್ವಾನ್ ಸಿನಿಮಾ.
– ಸುಶಾಂತ್ ಪೂಜಾರಿ ಮಂಗಳೂರು
ಚೆನ್ನಾಗಿದೆ. ಪ್ಯಾನ್ ಇಂಡಿಯಾ ಬಿಡುಗಡೆಗೆ ಹೇಳಿ ಮಾಡಿಸಿದ ಚಿತ್ರ. ಕ್ಲೈಮಾಕ್ಸ್ ಸೂಪರ್. ಕುಟುಂಬ ಸಮೇತ ನೋಡಬಹುದು
– ನವೀನ್ ಶಿವಮೊಗ್ಗ
ಕಿಚ್ಚನ ಕಿಚ್ಚು ಜೋರಾಗಿದೆ, ಪೈಲ್ವಾನ್ ನ ಅಬ್ಬರಕ್ಕೆ ಎದುರಾಳಿ ಪಡೆ ಬೊಬ್ಬೆ ಹೊಡಿತಿದೆ, ಕಿಚ್ಚ ಅಖಾಡಕ್ಕೆ ಇಳಿದ್ರೆ ಬಾಕ್ಸ್ ಆಫೀಸ್ ಧ್ವಂಸ.
ಶ್ರೀಶ, ಬೆಂಗಳೂರು
ಪೈಲ್ವಾನ್ ಸಿನಿಮಾವು ಸಾಮಾಜಿಕ ಮನೋರಂಜನೆಯಾಗಿದೆ ನಮ್ಮ ಭಾರತ ಕ್ರಿಡಾ ಕುಸ್ತಿ ಪಟ್ಟು ನೆನಪಿಸುತ್ತದೆ. ಸದೃಢ ಮೈಕಟನ್ನು ಹೊಂದುವ ಕುಸ್ತಿ ಪಟು ಆಡುವದೆ ಚಂದ.
-ಸಂತೋಷ ಜಾಬೀನ್ ಸುಲೇಪೇಟ್, ಚಿಂಚೋಳಿ
ಫೇಲ್ವಾನ್ ಸಿನಿಮಾ ನೋಡಿದೆ. ಬಹಳ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸುದೀಪ್ ಅಭಿನಯದ ಚಿತ್ರ ಪೈಲ್ವಾನ್ ಪಾತ್ರ ಬಹಳ ಚನ್ನಾಗಿದೆ. ಸುದೀಪ್ ಅಣ್ಣಾ ಸೂಪರ್ ಆಗಿ ಮಾಡಿದ್ದಾರೆ.
ಶಂಕರಗೌಡ ಮಹದೇವಗೌಡ ಸೋಮನಗೌಡ, ಹಂಚಿನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.