Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
Team Udayavani, Dec 29, 2024, 10:20 AM IST
ಕನ್ನಡದಲ್ಲಿ ಕಾಲೇಜ್ ಲವ್‌ಸ್ಟೋರಿಗಳು ಸಾಕಷ್ಟು ಬಂದಿವೆ. ಕಾಲೇಜಿನ ಹರೆಯದಲ್ಲಿ ಆರಂಭವಾಗುವ ಪ್ರೀತಿ ಮುಂದೆ ನಾನಾ ಸ್ವರೂಪ ಪಡೆಯುವುದರೊಂದಿಗೆ ಸಾಗುತ್ತದೆ. ಈ ವಾರ ತೆರೆಕಂಡಿರುವ “ಔಟ್ ಆಪ್ ಸಿಲೆಬಸ್’ ಚಿತ್ರ ಕೂಡಾ ಒಂದು ಲವ್‌ಸ್ಟೋರಿ. ಹಾಗಂತ ಕೇವಲ ಲವ್ ಸ್ಟೋರಿಯಾಗದೇ ಇಂದಿನ ಯೂತ್ಸ್ ಗೆ ಬೇಕಾದ ಒಂದಷ್ಟು ಉತ್ತಮ ಸಂದೇಶ ಕೂಡಾ ಇದೆ.
ಕಥೆಯ ಬಗ್ಗೆ ಹೇಳುವುದಾದರೆ ಸಣ್ಣ ವಯಸ್ಸಿನಲ್ಲೇ ಸ್ವಂತಃ ಕಾಲ ಮೇಲೆ ನಿಂತಿರುವ ಯುವಕ ಮುಂದೆ ಬೆಳೆದು ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುತ್ತಾನೆ. ಹೀಗಿರುವಾಗ ಆತನ ಪ್ರೀತಿಸಿದ ಯುವತಿ, ಆಕೆಯ ಮನೆಯವರ ಒತ್ತಡ.. ಇಂತಹ ಗೊಂದಲಮಯ ಸನ್ನಿವೇಶದಲ್ಲಿ ಪ್ರೇಮಿಗಳು ಒಂದಾಗುತ್ತಾರಾ ಅಥವಾ ಬೇರೆಯಾಗುತ್ತಾರಾ ಎಂಬುದೇ ಚಿತ್ರದ ಕುತೂಹಲದ ಘಟ್ಟ.
ಚಿತ್ರದಲ್ಲಿ ಕಾಲೇಜು ಲೈಫ್, ಪ್ರೀತಿ, ಪ್ರೇಮ, ಜೀವನ ಪಯಣದ ಏರಿಳಿತಗಳನ್ನು ಚಿತ್ರದಲ್ಲಿ ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಭಾವುಕ ದೃಶ್ಯಗಳು ಗಮನ ಸೆಳೆಯುತ್ತವೆ. ಕಾಲೇಜು ವಿದ್ಯಾರ್ಥಿಗಳಿಗೆ, ಪ್ರೇಮಿಗಳಿಗೆ ಸಂಬಂಧಿಸಿದ ಹಲವು ಅಂಶಗಳು ಚಿತ್ರದಲ್ಲಿದ್ದು, ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ.
ನಟನೆ, ನಿರ್ದೇಶನದಲ್ಲಿ ಪ್ರದೀಪ್ ಗಮನ ಸೆಳೆಯುತ್ತಾರೆ. ಒಂದು ಸರಳ ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕಿಯಾಗಿ ದಿವ್ಯಾ ಪಾತ್ರದಲ್ಲಿ ಹೃತಿಕಾ ನಟಿಸಿದ್ದಾರೆ. ಉಳಿದಂತೆ ಜಹಾಂಗೀರ್, ಯೋಗರಾಜ್ ಭಟ…, ಮಹಾಂತೇಶ್ ಮತ್ತು ಲಕ್ಷ¾ಣ್ ನಟಿಸಿದ್ದಾರೆ. ಒಂದು ಪ್ರಯತ್ನವಾಗಿ ಔಟ್ ಆಫ್ ಸಿಲೆಬಸ್ ಮೆಚ್ಚಬಹುದಾದ ಸಿನಿಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.