ಚಿತ್ರ ವಿಮರ್ಶೆ: ಸವಿಸವಿ ನೆನಪಿನೊಂದಿಗೆ ‘ಪದವಿ ಪೂರ್ವ’ ಪ್ರವೇಶ


Team Udayavani, Dec 31, 2022, 1:29 PM IST

padavi poorva movie review

ಬಹುತೇಕ ಎಲ್ಲರ ಜೀವನದಲ್ಲೂ “ಪದವಿ ಪೂರ್ವ’ದ ದಿನಗಳು ಮರೆಯಲಾರದಂತಿರುತ್ತವೆ. ಅದರಲ್ಲೂ ನೀವೇನಾದರೂ 90ರ ದಶಕದಲ್ಲಿ “ಪದವಿ ಪೂರ್ವ’ದ ದಿನಗಳನ್ನು ಕಳೆದಿದ್ದೇ ಆಗಿದ್ದರೆ, ನೀವು ಅದೆಷ್ಟೋ ಬದಲಾವಣೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುತ್ತೀರಿ. ಅತ್ತ ಹಳೆಯದೂ ಅಲ್ಲದ, ಇತ್ತ ಅತ್ಯಾಧುನಿಕವೂ ಅಲ್ಲದ ಪರಿವರ್ತನೆಯ ಕಾಲಘಟ್ಟವದು. ಇಂಥದ್ದೊಂದು ಕಾಲಘಟ್ಟವನ್ನು ಮತ್ತೂಮ್ಮೆ ತೆರೆಮೇಲೆ ನೆನಪಿಸುವಂತಿದೆ ಈ ವಾರ ತೆರೆಗೆ ಬಂದಿರುವ “ಪದವಿ ಪೂರ್ವ’ ಚಿತ್ರ.

ಇನ್ನು “ಪದವಿ ಪೂರ್ವ’ ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಆಗಷ್ಟೇ ಪಿಯುಸಿಗೆ ಪ್ರವೇಶಿಸಿರುವ ಪೀಪಿ ನವೀನನಿಗೆ (ಪೃಥ್ವಿ) ದೋಸ್ತೀನೆ ಆಸ್ತಿ. ತಾನಾಯಿತು, ತನ್ನ ಫ್ರೆಂಡ್ಸ್‌ ಆಯ್ತು ಅಂತ ಲವಲವಿಕೆಯಿಂದಿರುವ ನವೀನನ “ಪದವಿ ಪೂರ್ವ’ ದಿನಗಳು ಹೇಗಿರುತ್ತದೆ ಎನ್ನುವುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. “ಫ್ರೆಂಡ್ಸ್‌ ಇದ್ರೇನೆ ಜೀವನ..’ ಎನ್ನುವ ಸ್ನೇಹಜೀವಿ ನವೀನ ಸ್ನೇಹಕ್ಕಾಗಿ ಏನೆಲ್ಲ ಮಾಡುತ್ತಾನೆ, ಅದಕ್ಕೆ ದೋಸ್ತಿಗಳ ಸಾಥ್‌ ಹೇಗಿರುತ್ತದೆ ಎನ್ನುವುದನ್ನು ಒಂದಷ್ಟು ತರಲೆ, ತುಂಟಾಟಗಳ, ಅಳು-ನಗು ಎಲ್ಲದರ ಜೊತೆ ನವನವೀನವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹರಿಪ್ರಸಾದ್‌ ಜಯಣ್ಣ. ನಮ್ಮ ನಡುವೆಯೇ ನಡೆದಿರುವಂಥ ಒಂದು ಕಥೆಯನ್ನು ಮನಮುಟ್ಟುವಂತೆ ಸಿನಿಮಾದ ಮೂಲಕ ಹೇಳುವಲ್ಲಿ “ಪದವಿ ಪೂರ್ವ’ ಚಿತ್ರತಂಡ ಯಶಸ್ವಿಯಾಗಿದೆ.

“ಪದವಿ ಪೂರ್ವ’ ಕಲಾವಿದರ ಬಗ್ಗೆ ಹೇಳುವುದಾದರೆ, ನವ ಪ್ರತಿಭೆ ಪೃಥ್ವಿ ಶಾಮನೂರು ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆಯುತ್ತಾರೆ. ಉಳಿದಂತೆ ಅಂಜಲಿ, ಯಶಾ ಸೇರಿದಂತೆ ಅನೇಕ ಹೊಸ ಪ್ರತಿಭೆಗಳು ಸಿನಿಮಾದ ಉದ್ದಕ್ಕೂ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೊಸ ಕಲಾವಿದರಿಗೆ ಶರತ್‌ ಲೋಹಿತಾಶ್ವ, ರಂಗಾಯಣ ರಘು ಅವರಂಥ ಅನುಭವಿಗಳೂ ಸಾಥ್‌ ನೀಡಿದ್ದು ಪಾತ್ರಗಳ ತೂಕವನ್ನು ಇನ್ನಷ್ಟು ಹೆಚ್ಚಿಸಿದೆ.

“ಪದವಿ ಪೂರ್ವ’ದ ಎರಡು-ಮೂರು ಹಾಡುಗಳು ಥಿಯೇಟರ್‌ ಹೊರಗೂ ಗುನುಗುವಂತಿದೆ. ಚಿತ್ರದಲ್ಲಿ ಕಾಣುವ ಸುಂದರ ಲೊಕೇಶನ್ಸ್‌, ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ತಾಂತ್ರಿಕವಾಗಿ ತೆರೆಮೇಲೆ ಚಿತ್ರವನ್ನು ಅಂದಗಾಣಿಸುವಂತೆ ಮಾಡಿವೆ. ಒಟ್ಟಾರೆ ಆಡಿಯೋ-ವಿಡಿಯೋ ಕ್ಯಾಸೆಟ್‌, ಬೈಸಿಕಲ್‌ ಸುತ್ತಾಟ, ಕ್ಯಾಂಪಸ್‌ ಕಿರಿಕ್‌, ಕೆರಿಯರ್‌ ಕನಸು ಹೀಗೆ 90ರ ದಶಕದ “ಪದವಿ ಪೂರ್ವ’ ಜೀವನವನ್ನು ಒಮ್ಮೆ ರಿವೈಂಡ್‌ ಮಾಡಿ ನೋಡುವಂತಿರುವ ಸಿನಿಮಾವನ್ನು ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.