ಚಿತ್ರ ವಿಮರ್ಶೆ: ಪ್ರಶ್ನೆಗಳನ್ನು ಮುಂದಿಟ್ಟು  ಮರೆಯಾಗುವ ‘ಪಂಪ’


Team Udayavani, Sep 17, 2022, 2:40 PM IST

ಚಿತ್ರ ವಿಮರ್ಶೆ: ಪ್ರಶ್ನೆಗಳನ್ನು ಮುಂದಿಟ್ಟು  ಮರೆಯಾಗುವ ‘ಪಂಪ’

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿರುವ ಭಾಷಾ ವಿಚಾರ, ಸಾಹಿತಿಗಳು ಮತ್ತು ಚಿಂತಕರ ಹತ್ಯೆ, ಕನ್ನಡಪರ ಹೋರಾಟಗಳ ದಿಕ್ಕು -ದೆಸೆ ಇಂಥ ಪ್ರಸ್ತುತ ಗಂಭೀರ ವಿಷಯಗಳನ್ನು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ಹೇಳಿರುವ ಚಿತ್ರ “ಪಂಪ’.

ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಹೋರಾಡುವ ಪ್ರೊ. ಪಂಚಳ್ಳಿ ಪರಶಿವಮೂರ್ತಿ (ಪಂಪ) ಎಂಬ ಪಾತ್ರದ ಮೂಲಕ ಆರಂಭವಾಗುವ ಸಿನಿಮಾದ ಕಥೆ, ನಂತರ ಭಾಷಾ ಹೋರಾಟ, ಅದರ ಹಿಂದಿನ ರಾಜಕೀಯ, ಎಜುಕೇಷನ್‌ ಮಾμಯಾ, ಸರ್ಕಾರದ ಧೋರಣೆ ಹೀಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತಾ ಸಾಗುತ್ತದೆ. ಅಂತಿಮವಾಗಿ ಇವೆಲ್ಲದಕ್ಕೂ ಮೂಲ ಕಾರಣವೇನು? ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ಬಿಟ್ಟು “ಪಂಪ’ನ ಕಥೆಗೆ ತೆರೆ ಬೀಳುತ್ತದೆ.

ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸೆಂಟಿಮೆಂಟ್‌ ಮತ್ತು ಎಮೋಶನಲ್‌ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ದ ಹಿರಿಯ ನಿರ್ದೇಶಕ ಎಸ್‌. ಮಹೇಂದರ್‌, ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥೆಯನ್ನು ತೆರೆಮೇಲೆ ಹೇಳಿದ್ದಾರೆ.

ಸಾಮಾನ್ಯವಾಗಿ ಸಸ್ಪೆನ್ಸ್‌ ಮತ್ತು ಕ್ರೈಂ-ಥ್ರಿಲ್ಲರ್‌ ಸಿನಿಮಾಗಳಲ್ಲಿ ಚಿತ್ರಕಥೆ, ನಿರೂಪಣೆ ಕೊಂಚ ವೇಗವಾಗಿರುತ್ತದೆ. ಆದರೆ “ಪಂಪ’ನಲ್ಲಿ ಇಂಥದ್ದೊಂದು ವೇಗವನ್ನು ನಿರೀಕ್ಷಿಸುವಂತಿಲಲ್ಲದಿದ್ದರೂ, ಕಥಾಹಂದರ ನಿಧಾನವಾಗಿ ಮನಸ್ಸಿನೊಳಗೆ ಇಳಿಯುವಂತಿದೆ. ಸಾಮಾನ್ಯವಾಗಿ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾಗಳಲ್ಲಿ ಮೂಲ ಕ್ರೈಂ ಕಥಾವಸ್ತು ಅಥವಾ ಘಟನೆಗೆ ಕ್ಲೈಮ್ಯಾಕ್ಸ್‌ನಲ್ಲಿ ತಾರ್ಕಿಕ ಅಂತ್ಯ ಸಿಕ್ಕಿ ಸಿನಿಮಾ ಕೊನೆಯಾಗುತ್ತದೆ. ಪ್ರೇಕ್ಷಕರು ನಿರಾಳರಾಗಿ ಥಿಯೇಟರ್‌ ನಿಂದ ಹೊರಬರುತ್ತಾರೆ. ಆದರೆ “ಪಂಪ’ ಇದಕ್ಕೆ ಅಪವಾದವೆಂಬಂತಿದೆ! “ಪಂಪ’ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾವಾದರೂ, ಸಿದ್ಧಸೂತ್ರದಿಂದ ಹೊರತಾಗಿ ತೆರೆಮೇಲೆ ಬಂದಿದೆ. ಹೀಗಾಗಿ, ಥಿಯೇಟರ್‌ನಿಂದ ಹೊರಗೆ ಬಂದಮೇಲೂ ಒಂದಷ್ಟು ವಿಚಾರಗಳು, ನೋಡುಗರನ್ನು ಕೆಲಹೊತ್ತು ಕಾಡುತ್ತವೆ.

ಇನ್ನು “ಪಂಪ’ನ ಪಾತ್ರಧಾರಿಯಾಗಿ ಕೀರ್ತಿ ಭಾನು, ಕನ್ನಡ ಅಭಿಮಾನಿಯಾಗಿ ಸಂಗೀತಾ ಶೃಂಗೇರಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉಳಿದಂತೆ ಅರವಿಂದ ರಾವ್‌, ಆದಿತ್ಯ ಶೆಟ್ಟಿ, ರಾಘವ್‌ ನಾಯಕ್‌, ರವಿಭಟ್‌ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ, ಕಲರಿಂಗ್‌ ಗುಣಮಟ್ಟದಲ್ಲಿದೆ. ಪ್ರಸ್ತುತ ಚರ್ಚೆಯಲ್ಲಿರುವ ಕನ್ನಡ ವಿಚಾರ, ಪಾತ್ರ ಪೋಷಣೆ, ಕಣ್ಣಿಗೆ ಕಟ್ಟುವಂಥ ಸುಂದರ ಲೊಕೇಶನ್ಸ್‌, ಥಿಯೇಟರ್‌ ಹೊರಗೂ ಗುನುಗುವಂಥ ಒಂದೆರಡು ಹಾಡುಗಳು, ಸಂಭಾಷಣೆ ಸಿನಿಮಾಕ್ಕೆ ಪ್ಲಸ್‌ ಆಗಿರುವ ಪ್ರಮುಖ ಅಂಶಗಳು ಎನ್ನಬಹುದು

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.