Paramvah movie review; ವೀರಗಾಸೆ ಹುಡುಗನ ಕನಸಿನ ಕಥೆ
Team Udayavani, Jul 23, 2023, 4:33 PM IST
ವೀರಗಾಸೆ ಕಲೆಯ ಬೆನ್ನು ಹತ್ತಿದವನಿಗೆ ಏನೇನು ಸವಾಲುಗಳು ಎದುರಾಗುತ್ತವೆ ಎಂಬುದರ ಸುತ್ತ ಸಾಗುವ ಸಿನಿಮಾವೇ “ಪರಂವಃ’
ವೀರಗಾಸೆ ಕಲೆ, ಅದರ ಹಿಂದಿನ ಭಾವನಾತ್ಮಕ ನಂಟು, ಇಂದಿನ ಸಾಮಾಜಿಕ ಸ್ಥಿತಿಗತಿ, ಹುಡುಗರ ಮನಸ್ಥಿತಿ, ಶೈಕ್ಷಣಿಕ ಪರಿಸ್ಥಿತಿ ಎಲ್ಲವನ್ನೂ ಇಟ್ಟುಕೊಂಡು ಎಮೋಶನಲ್ ಆಗಿ “ಪರಂವಃ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಂತೋಷ್ ಕೈದಾಳ. ಕಾಲೇಜ್, ಹಾಸ್ಟೆಲ್, ಫ್ರೆಂಡ್ ಶಿಪ್, ಲವ್, ಕಾಮಿಡಿ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಸೇರಿಸಿ ಒಂದು ಗಂಭೀರ ವಿಷಯವನ್ನು ಹೇಳಿರುವ ಪ್ರಯತ್ನ ಪ್ರಶಂಸನಾರ್ಹ.
ಇನ್ನು ಇಡೀ ಸಿನಿಮಾದ ಬಹುಭಾಗ ಕಥೆ ನಾಯಕ ಮತ್ತು ನಾಯಕಿಯ ಜೊತೆಗೆ ಸಾಗುತ್ತದೆ. ವೀರಗಾಸೆ ಕಲಾವಿದನಾಗುವ ಕನಸು ಕಾಣುವ ಪಾತ್ರದಲ್ಲಿ ನಾಯಕ ನಟ ಪ್ರೇಮ್ ಸೀಡಗಲ್ ಮತ್ತು ಕಾಲೇಜ್ ಹುಡುಗಿಯ ಪಾತ್ರದಲ್ಲಿ ನಾಯಕಿ ಮೈತ್ರಿ ಕಶ್ಯಪ್ ಸಿನಿಮಾದ ಉದ್ದಕ್ಕೂ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಬಹುತೇಕ ಹೊಸ ಪ್ರತಿಭೆಗಳು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಸಿನಿಮಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕಥೆ ಮತ್ತು ಸನ್ನಿವೇಶಗಳಿಗೆ ಪೂರಕವಾಗಿದೆ. ಛಾಯಾಗ್ರಹಣ, ಸಂಕಲನ ಮತ್ತು ಕಲರಿಂಗ್ ಕಡೆಗೆ ಚಿತ್ರತಂಡ ಒಂದಷ್ಟು ಹೆಚ್ಚಿನ ಗಮನ ನೀಡಿದ್ದರೆ, “ಪರಂವಃ’ ದೃಶ್ಯಗಳು ಇನ್ನಷ್ಟು ಕಲರ್‌ಫುಲ್ ಆಗಿ ತೆರೆಮೇಲೆ ಕಾಣುವ ಸಾಧ್ಯತೆಗಳಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.