ಮಧುವನದಲ್ಲಿ ದೇಶಪ್ರೇಮ

ಚಿತ್ರ ವಿಮರ್ಶೆ

Team Udayavani, Mar 24, 2019, 11:17 AM IST

Badri-vs-Madhumathi

“ವೀ ಆರ್‌ ಜಸ್ಟ್‌ ಫ್ರೆಂಡ್ಸ್‌.. ವೀ ಆರ್‌ ಬೆಸ್ಟ್‌ ಫ್ರೆಂಡ್ಸ್‌…’ ಚಿತ್ರದ ನಾಯಕ ಮತ್ತು ನಾಯಕಿ ಇಬ್ಬರೂ ತಮ್ಮ ಕೈ ಕುಲುಕಿಸಿ ಈ ಡೈಲಾಗ್‌ ಹೇಳಿಕೊಳ್ಳುವ ಹೊತ್ತಿಗೆ, ಇಬ್ಬರ ನಡುವೆ ಗೊತ್ತಿಲ್ಲದಂತೆಯೇ ಪ್ರೀತಿ ಚಿಗುರೊಡೆದಿರುತ್ತೆ. ಇದಾದ ಮೇಲೂ ಇಬ್ಬರು ಪರಸ್ಪರ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿರುತ್ತಾರೆ.

ಇನ್ನೇನು ನಾಯಕ ತನ್ನ ನಾಯಕಿ ಮುಂದೆ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಜೋರು ಮಳೆ ಶುರುವಾಗುತ್ತೆ. ಆ ಮಳೆಯ ಹನಿಗಳ ಜೊತೆ ಜೊತೆಗೆ ನಾಯಕನ ಕಣ್ಣಲ್ಲಿ ಮಾತ್ರ ನೀರು ತುಂಬಿರುತ್ತೆ. ಅಲ್ಲೊಂದು ನಿರೀಕ್ಷಿಸದ ಘಟನೆ ನಡೆದು ಹೋಗಿರುತ್ತೆ. ಅದೇನು ಎಂಬುದೇ ಚಿತ್ರದ ಸಸ್ಪೆನ್ಸ್‌.

“ಬದ್ರಿ ವರ್ಸಸ್‌ ಮಧುಮತಿ’ ಚಿತ್ರದದಲ್ಲಿ ರೊಮ್ಯಾಂಟಿಕ್‌ ಆ್ಯಕ್ಷನ್‌ ಕಥೆ ಇದೆ. ಇಲ್ಲಿ ರೊಮ್ಯಾಂಟಿಕ್‌ಗೆ ಜಾಗ ಇರುವಷ್ಟೇ ಆ್ಯಕ್ಷನ್‌ಗೂ ಇದೆ. ಯೂಥ್‌ಗೆ ನಾಯಕ ನಾಯಕಿ ಹಿಂದಿಂದೆ ಸುತ್ತುವ ಮತ್ತು ಅವನ ಲವ್‌ ಎಲಿಮೆಂಟ್ಸ್‌ ಇಷ್ಟವಾದರೆ, ಮಾಸ್‌ ಪ್ರಿಯರಿಗೆ ಹೀರೋನ ಭರ್ಜರಿ ಆ್ಯಕ್ಷನ್‌ ಗಮನಸೆಳೆಯುತ್ತದೆ.

ನಿರ್ದೇಶಕರು ಇಲ್ಲಿ ಮನರಂಜನೆಗೆ ಏನೆಲ್ಲಾ ಇರಬೇಕೋ ಅವೆಲ್ಲ ಅಂಶಗಳನ್ನು ಸೇರಿಸಿ ಒಂದು ಚಿತ್ರ ಕಟ್ಟಿಕೊಟ್ಟಿದ್ದಾರೆ. ಕಥೆಯಲ್ಲಿ ಇನ್ನಷ್ಟು ಹೊಸತನ ಇರಬೇಕಿತ್ತು. ನಿರೂಪಣೆಯಲ್ಲಿ ಆ ಹೊಸತನ ಇದೆಯಾದರೂ, ಕೆಲವು ಕಡೆ ತೂರಿಬರುವ ಹಾಸ್ಯದ ದೃಶ್ಯಗಳನ್ನು ತಡೆಯಬಹುದಾಗಿತ್ತು.

ವಿನಾಕಾರಣ ಹಾಸ್ಯದ ದೃಶ್ಯಗಳು ಚಿತ್ರದ ವೇಗಕ್ಕೆ ಅಡ್ಡಿಯಾಗುತ್ತವೆ. ಅದನ್ನು ಹೊರತುಪಡಿಸಿದರೆ, ಇದು ಹೊಸಬರ ಚಿತ್ರ ಅಂತ ಅನಿಸುವುದಿಲ್ಲ. ಮೇಕಿಂಗ್‌ ವಿಷಯದಲ್ಲಾಗಲಿ, ಹಾಡುಗಳಿರಲಿ, ಸ್ಟಂಟ್ಸ್‌ ಆಗಲಿ ಎಲ್ಲವನ್ನೂ ಕಮರ್ಷಿಯಲ್‌ ದೃಷ್ಟಿಯಿಂದಲೇ ಮಾಡಲಾಗಿದೆ.

ಮೊದಲರ್ಧ ಸ್ವಲ್ಪ ನಿಧಾನ ಎನಿಸುವ ಚಿತ್ರದಲ್ಲಿ ಚಿತ್ರಕಥೆಗೆ ವೇಗ ಕೊಡಬೇಕಿತ್ತು. ಆದರೂ, ಆಗಾಗ ಕಾಣಿಸಿಕೊಳ್ಳುವ ಹಾಡುಗಳು ಆ ವೇಗಕ್ಕೆ ಸಾಥ್‌ ಕೊಟ್ಟಿವೆ. ಇಡೀ ಚಿತ್ರದುದ್ದಕ್ಕೂ ನಾಯಕ ಸಿಗರೇಟ್‌ಗೆ ಅಂಟಿಕೊಂಡಿರುವುದನ್ನು ಸ್ವಲ್ಪ ಅರಗಿಸಿಕೊಳ್ಳುವುದು ಕಷ್ಟ.

ಆದರೂ, ಸ್ಟಂಟ್‌ ಮಾಸ್ಟರ್‌ ಇಲ್ಲೊಂದು ಹೊಸ ಪ್ರಯೋಗ ಮಾಡಿದ್ದಾರೆ. ಹೀರೋ ಇಂಟ್ರಡಕ್ಷನ್‌ ಫೈಟ್ಸ್‌ನಲ್ಲಿ ಸಿಗರೇಟ್‌ ಸೇದುತ್ತಲೇ ಎದುರಾಳಿಗಳನ್ನು ಹೊಡೆದುರುಳಿಸುವ ದೃಶ್ಯಗಳು ತಕ್ಕಮಟ್ಟಿಗೆ ಮಾಸ್‌ ಪ್ರಿಯರಿಗೆ ಇಷ್ಟವಾಗಬಹುದು.

ಕಥೆಗೆ ತಿರುವು ಸಿಗುವುದೇ ದ್ವಿತಿಯಾರ್ಧದಲ್ಲಿ ಅಲ್ಲೊಂದು ಟ್ವಿಸ್ಟ್‌ ಕೊಟ್ಟಿರುವ ನಿರ್ದೇಶಕರು, “ಬದ್ರಿ’ಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ. ಅದೇ ಚಿತ್ರದ ಹೈಲೈಟ್‌. ಅದೇನು ಎಂಬ ಕುತೂಹಲವಿದ್ದರೆ, “ಬದ್ರಿ ಮತ್ತು ಮಧುಮತಿ’ಯ ಲವ್‌ಸ್ಟೋರಿ ಕೇಳಬಹುದು.

ನಾಯಕ ಇಲ್ಲಿ ಆರ್ಮಿ ಅಧಿಕಾರಿ. ರಜೆ ಮೇಲೆ ತನ್ನೂರಿಗೆ ಬರುವ ನಾಯಕ ಮೊದಲ ನೋಟದಲ್ಲೇ ನಾಯಕಿಯನ್ನು ಪ್ರೀತಿಸಲು ಶುರುಮಾಡುತ್ತಾನೆ. ಅವಳ ಹಿಂದೆ ಅಲೆದಾಡಿ, ಅವಳಿಗಾಗಿ ರಾತ್ರಿ-ಹಗಲು ಕಾದು ಹೇಗೋ, ಆಕೆಯಿಂದಲೂ ಗ್ರೀನ್‌ ಸಿಗ್ನಲ್‌ ಪಡೆದುಕೊಳ್ಳುತ್ತಾನೆ.

ಇನ್ನೇನು ತನ್ನವಳನ್ನಾಗಿ ಮಾಡಿಕೊಳ್ಳಬೇಕು ಅಂತ ಯೋಚಿಸಿರುವಾಗಲೇ, ಆಕೆಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾದ ವಿಷಯ ತಿಳಿಯುತ್ತದೆ. ದೇಶ ಪ್ರೇಮಿಯಾಗಿರುವ ನಾಯಕ, ತನ್ನ ಪ್ರೀತಿಯನ್ನು ಬಿಟ್ಟುಕೊಡುತ್ತಾನಾ, ಆ ಹುಡುಗಿಯ ಕುಟುಂಬದ ಹಿತದೃಷ್ಟಿಯಿಂದ ತನ್ನ ಪ್ರೀತಿಯನ್ನೇ ಬದಿಗಿಡುತ್ತಾನಾ ಎಂಬ ಗೊಂದಲ ಎಲ್ಲರಲ್ಲೂ ಕಾಡುತ್ತದೆ.

ಕೊನೆಗೆ ಏನಾಗುತ್ತೆ ಅನ್ನುವುದೇ “ಬದ್ರಿ’ಯ ಕಥೆ. ಪ್ರತಾಪವನ್‌ ನಟನೆಯಲ್ಲಿನ್ನೂ ಸಾಗಬೇಕಿದೆ. ಫೈಟ್ಸ್‌ ಮತ್ತು ಡ್ಯಾನ್ಸ್‌ನಲ್ಲಿ ಈ ಮಾತನ್ನು ಹೇಳುವಂತಿಲ್ಲ. ಬಾಡಿಲಾಂಗ್ವೇಜ್‌ನತ್ತ ಗಮನಹರಿಸಿದರೆ, ಮುಂದೆ ಭವಿಷ್ಯವಿದೆ. ನಾಯಕಿ ಆಕಾಂಕ್ಷ ಗ್ಲಾಮರ್‌ಗಷ್ಟೇ ಸೀಮಿತ.

ಉಳಿದಂತೆ ಇಲ್ಲಿ ಕೆಂಪೇಗೌಡ, ಜಹಾಂಗೀರ್‌, ಗಿರೀಶ್‌ ಜತ್ತಿ ಪಾತ್ರಕ್ಕೆ ಮೋಸ ಮಾಡಿಲ್ಲ. ಅರವಿಂದ್‌ ಬೋಳಾರ್‌ ನಿರ್ದೇಶಕರ ಕಲ್ಪನೆಯಂತೆ ಕೆಲಸ ಮಾಡಿದ್ದಾರೆ. ಎಲ್ವಿನ್‌ ಜೋಶ್ವ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಹಿನ್ನೆಲೆ ಸಂಗೀತಕ್ಕಿನ್ನೂ ಫೋರ್ಸ್‌ ಬೇಕಿತ್ತು. ಶಂಕರ್‌ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ಬದ್ರಿ ವರ್ಸಸ್‌ ಮಧುಮತಿ
ನಿರ್ಮಾಣ: ಪ್ರತಾಪವನ್‌, ಪ್ರದೀಪ್‌ ಜಿ.ಪಿ.ಜೈನ್‌, ಧ್ರುವಜಿತ್‌ ರೆಡ್ಡಿ
ನಿರ್ದೇಶನ: ಶಂಕರ ನಾರಾಯಣ ರೆಡ್ಡಿ
ತಾರಾಗಣ: ಪ್ರತಾಪವನ್‌, ಆಕಾಂಕ್ಷ ಗಾಂಧಿ, ಕೆಂಪೇಗೌಡ, ಜಹಾಂಗೀರ್‌, ಗಿರೀಶ್‌ ಜತ್ತಿ. ಅರವಿಂದ್‌ ಬೋಳಾರ್‌ ಇತರರು

* ವಿಭ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.