ಚಿತ್ರ ವಿಮರ್ಶೆ: ಫಿಸಿಕ್ಸ್ ಟೀಚರ್ ನ ಸಸ್ಪೆನ್ಸ್ ಹಾದಿ
Team Udayavani, May 28, 2022, 4:10 PM IST
ಜಗತ್ತಿನಲ್ಲಿ ಕಾರಣವಿಲ್ಲದೆ ಯಾವ ಘಟನೆಯೂ ಸಂಭವಿಸುವುದಿಲ್ಲ. ಕಾರಣವಿಲ್ಲದೆ ಯಾವ ವಸ್ತುವೂ ಅಲುಗಾಡುವುದಿಲ್ಲ ಎಂಬುದು ಭೌತಶಾಸ್ತ್ರದ ವಾದ. ಅದರಂತೆ ಪ್ರತಿಯೊಂದು ಘಟನೆಗೂ ಒಂದು ಪೂರಕ ಕಾರಣವಿದೆ. ಈ ಭೌತಶಸ್ತ್ರದ ಸೂತ್ರಗಳನ್ನು ಆಧಾರಾವಾಗಿಟ್ಟುಕೊಂಡು ಸೈಕಾಲಾಜಿಕಲ್ ಥ್ರಿಲ್ಲರ್ ಮೂಲಕ ತೆರೆಗೆ ಬಂದಿರುವ ಚಿತ್ರ “ಫಿಸಿಕ್ಸ್ ಟೀಚರ್’.
ಹೆಸರೇ ಹೇಳುವಂತೆ ಇದೊಂದು ಸಾಮಾನ್ಯ ಭೌತಶಾಸ್ತ್ರದ ಶಿಕ್ಷಕನ ಬದುಕಿನ ಕಥೆ. ಭೌತಶಾಸ್ತ್ರವನ್ನು ತನ್ನ ಜೀವನದಲ್ಲಿ ಅವಳಿವಡಿಸಿಕೊಂಡಿರುವ ಈ ಶಿಕ್ಷಕನ ಜೀವನದ ಶಾಸ್ತ್ರ ಏನು? ನಡೆಯುವ ಘಟನೆಗಳ ಹಿಂದಿನ ಮರ್ಮ ಏನು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು.
“ಬದ್ರಿಯನ್ನು ಬಿಟ್ಟು ಭೌತಶಾಸ್ತ್ರ ಇರಬಹುದು, ಆದರೆ ಭೌತಶಾಸ್ತ್ರವನ್ನು ಬಿಟ್ಟು ಬದ್ರಿ ಇರಲ್ಲಾ’. ಎಂಬ ನಾಯಕನ ಮಾತಿನಂತೆ, ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಪಿಟೀಲ್ ಅಭ್ಯಾಸ ಮಾಡಿ ಶಾಲೆಗೆ ಹೊರಡುವುದು ಫಿಸಿಕ್ಸ್ ಟೀಚರ್ ಬದ್ರಿಯ ದಿನ ನಿತ್ಯದ ಕಾರ್ಯ. ಈ ನಿತ್ಯದ ಬದುಕಿನಲ್ಲಿ ಬರುವ ಅನಿರೀಕ್ಷಿತ ಘಟನೆಗಳೇ ಚಿತ್ರಕ್ಕೆ ಹೂರಣ.
ಇದನ್ನೂ ಓದಿ:ಕೆಜಿಎಫ್ 2 ಸ್ಟೈಲ್ ನಲ್ಲಿ ಸಿಗರೇಟ್ ಸೇದಿ ಆಸ್ಪತ್ರೆಗೆ ದಾಖಲಾದ 15 ರ ಬಾಲಕ!
ಐನ್‌ಸ್ಟೈನ್, ನ್ಯೂಟನ್ ನಂತಹ ವಿಜ್ಞಾನಿಗಳನ್ನು ಆರಾಧಿಸುವ ಬದ್ರಿ ಭೌತಶಾಸ್ತ್ರದಲ್ಲಿ ತಾನು ಅವರೆತ್ತರಕ್ಕೆ ಬೆಳೆಯವ ಆಸೆ ಹೊಂದಿರುತ್ತಾನೆ. ಮಕ್ಕಳಿಗೆ ಭೌತಶಾಸ್ತ್ರದ ಮಹತ್ವ, ತತ್ವಗಳನ್ನು ಹೇಳುವ ಬದ್ರಿಯ ಜೀವನದಲ್ಲಿ ಆಗುವ ಆ ವಿಚಿತ್ರ ಅನುಭವಗಳೇನು ಎಂಬುದು ಪ್ರಶ್ನೆ. ಫಿಸಿಕ್ಸ್ ಟೀಚರ್ ಒಂದು ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿನ ಕೆಲ ದೃಶ್ಯಗಳು ಕೊಂಚ ಬೋರ್ ಅನಿಸಿದರು, ಮೊದಲಾರ್ಧವೂ ಕೂತಹಲಕಾರಿ ಅಂಶಗಳಿಂದ ಸಾಗುತ್ತದೆ. ಅಲ್ಲಲ್ಲಿ ಗೊಂದಲ ಸೃಷ್ಟಿಸಿದೆ ಅಂತ ಅನಿಸುವಷ್ಟರಲ್ಲಿ ಚಿತ್ರ ಒಂದು ಘಟ್ಟವನ್ನು ತಲುಪಿಸುತ್ತದೆ.
ಚಿತ್ರ ಕಥೆಯಲ್ಲಿ ಇನ್ನಷ್ಟು ಪಕ್ವತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದಲ್ಲಿ ಕೆಲ ದೃಶ್ಯಗಳನ್ನು ಛಾಯಾಗ್ರಾಹಕ ರಘು ಗ್ಯಾರಹಳ್ಳಿ ಸುಂದರ ಫ್ರೆಮ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಹೊಸ ಪ್ರತಿಭೆ ಸುಮುಖ ನಿರ್ದೇಶಿಸಿ ನಟಿಸಿರುವ ಮೊದಲ ಪ್ರಯತ್ನ ಮೆಚ್ಚುವಂತದ್ದು. ನಾಯಕಿ ಪ್ರೇರಣಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಂಡ್ಯ ರಮೇಶ್ ಎಂದಿನಂತೆ ತಮ್ಮ ಭಿನ್ನ ಕ್ಯಾರೆಕ್ಟರ್ ಮೂಲಕ ಇಷ್ಟವಾಗುತ್ತಾರೆ. ರಾಜೇಶ್ ನಟರಂಗ ಪಾತ್ರವೇ ಅಗಿದ್ದಾರೆ.
ವಾಣಿ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.