Prakarana Tanikha Hantadallide Review: ಕುತೂಹಲ ಘಟ್ಟದಲ್ಲಿ ಪ್ರಕರಣದ ತನಿಖೆ
Team Udayavani, Oct 19, 2024, 11:10 AM IST
ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ಇರಬೇಕಾದ ಮೂಲಗುಣವೆಂದರೆ ಕುತೂಹಲ. ಒಂದು ದೃಶ್ಯದಿಂದ ಮತ್ತೂಂದು ದೃಶ್ಯದಲ್ಲಿ ಏನಾಗುತ್ತದೆ ಎಂಬ ಕುತೂಹಲವನ್ನು ಕಾಯ್ದುಕೊಳ್ಳಬೇಕು. ಇದಕ್ಕೆ ಬೇಕಾಗಿರುವುದು ಬಿಗಿಯಾದ ನಿರೂಪಣೆ ಹಾಗೂ ಚಿತ್ರಕಥೆ. ಚಿತ್ರಕಥೆ ಎಷ್ಟು ಬಿಗಿಯಾಗಿ, ಕುತೂಹಲಕಾರಿಯಾಗಿರುತ್ತದೆ ಅಷ್ಟೇ ನೀಟಾಗಿ ಸಿನಿಮಾ ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ಹೊಸಬರ “ಪ್ರಕರಣ ತನಿಖಾ ಹಂತದಲ್ಲಿದೆ’ ಒಂದೊಳ್ಳೆಯ ಪ್ರಯತ್ನ.
ಕ್ರೈಮ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಹಾಗೂ ಅದರ ಹಿಂದಿನ ಕರಾಳತೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಊರೆಲ್ಲಾ ಡ್ರಗ್ಸ್ ಮಾರಾಟ ಮಾಡುವ ನಟೋರಿಯಸ್ ಗ್ಯಾಂಗ್ ಒಂದು ಕಡೆಯಾದರೆ, ಸರಣಿ ಕೊಲೆಗಳು ಮತ್ತೂಂದು ಕಡೆ, ಅದರ ಹಿಂದೆ ಬೀಳುವ ಪೊಲೀಸರು… ಈ ನಡುವೆಯೇ ಎದುರಾಗುವ ಅಡೆತಡೆ. ಅವೆಲ್ಲವನ್ನು ದಾಟಿ ಡ್ರಗ್ಸ್ ದಂಧೆಯನ್ನು ಮಟ್ಟಹಾಕುತ್ತಾರಾ, ಕಾರ್ಯಾಚರಣೆ ಯಶಸ್ವಿಯಾಗುತ್ತಾ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ಈ ಸಿನಿಮಾದ ಅವಧಿ 95 ನಿಮಿಷ. ಹಾಗಾಗಿ, ಚಿತ್ರ ಅನವಶ್ಯಕ ದೃಶ್ಯಗಳಿಂದ ಮುಕ್ತವಾಗಿದೆ. ಇಡೀ ಸಿನಿಮಾ ಕಥೆ ಬಿಟ್ಟು ಬೇರೆ ಹಾದಿ ಹಿಡಿದಿಲ್ಲ ಎನ್ನುವುದು ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿ ಭಾರ್ಗವ್, ಗೌರವ್ ಎಂಬ ಎರಡು ಪಾತ್ರಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.
ನಿರ್ದೇಶಕ ಸುಂದರ್ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾ ತಾಂತ್ರಿಕವಾಗಿ ಇನ್ನಷ್ಟು ಶ್ರೀಮಂತವಾಗಿದ್ದರೆ ಕಥೆಯ ವೇಗ ಹೆಚ್ಚುತ್ತಿತ್ತು. ಚಿತ್ರದಲ್ಲಿ ಮಹೀನ್ ಕುಬೇರ್, ಮುತ್ತುರಾಜ್. ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.