ಮದುವೆ ಆಗೋಕೆ ನಾಳೇನೇ ರೆಡಿ ಅಂತಾರೆ ರಕ್ಷಿತ್ ಶೆಟ್ಟಿ
Team Udayavani, Nov 9, 2017, 6:59 PM IST
ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕೆಂಬ ಆಸೆ ಇದೆಯೋ, ಅಲ್ಲಿಯವರೆಗೂ ಆಕೆ ನಟಿಸಬಹುದು. ಆಕೆಯ ಅಭಿನಯಕ್ಕೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ರಶ್ಮಿಕಾ ಅವರನ್ನು ಮದುವೆಯಾಗುತ್ತಿರುವ ರಕ್ಷಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ರಕ್ಷಿತ್‌ರೊಂದಿಗೆ ಮದುವೆಯಾದ ನಂತರ ರಶ್ಮಿಕಾ ನಟಿಸುವುದಿಲ್ಲ, “ಚಮಕ್’ ಮತ್ತು “ಅಂಜನಿಪುತ್ರ’ ಚಿತ್ರಗಳೇ ಅವರ ಅಭಿನಯದ ಕೊನೆಯ ಚಿತ್ರಗಳಾಗಬಹುದು ಎಂಬಂತಹ ಮಾತುಗಳು ಇತ್ತೀಚೆಗೆ ಕೇಳಿ ಬಂದಿತ್ತು. ಈ ಕುರಿತು ರಕ್ಷಿತ್ ಅವರನ್ನು ಕೇಳಿದರೆ, ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕು ಎಂಬ ಆಸೆ ಇದೆಯೋ, ಅಲ್ಲಿಯವರೆಗೂ ನಟಿಸಬಹುದು ಎಂದು ಹೇಳಿದ್ದಾರೆ.
“ರಶ್ಮಿಕಾಗೆ ನಟನೆ ಬಿಟ್ಟು ಬೇರೆ ಪ್ರತಿಭೆ ಇದೆ. ಆಕೆ ತುಂಬಾ ಬರೀತಾಳೆ. ಆ ವಯಸ್ಸಿಗೆ ನಾನು ಬಹಳ ಇಮ್ಮೆಚೂÂರ್ ಆಗಿದ್ದೆ. ಆದರೆ, ರಶ್ಮಿಕಾ ಹಾಗಲ್ಲ. ಬಹಳ ಪಕ್ವವಾಗಿ ಬರೀತಾಳೆ. ನೀನೇ ಬರೆದಿದ್ದಾ ಅಂತ ಎಷ್ಟೋ ಸಾರಿ ಕೇಳಿದ್ದೇನೆ. ಅವಳು ಎಷ್ಟು ದಿನ ನಟಿಸಬೇಕು ಎಂದು ಆಕೆಯೇ ನಿರ್ಧಾರ ಮಾಡುತ್ತಾಳೆ. ಆಕೆಯ ನಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಬರೀ ನಟನೆ ಅಷ್ಟೇ ಅಲ್ಲ, ಆಕೆ ಬರೆದರೂ ಸರಿ, ನಿರ್ದೇಶನ ಮಾಡಿದರೂ ಸರಿ, ನಾನು ನಿರ್ಬಂಧ ಮಾಡುವುದಿಲ್ಲ. ಮದುವೆ ಆದಮೇಲೂ ರಶ್ಮಿಕಾ ನಟನೆ ಮುಂದುವರೆಸುತ್ತಾಳೆ’ ಎನ್ನುತ್ತಾರೆ ರಕ್ಷಿತ್.
ಸರಿ, ಮದುವೆ ಯಾವಾಗ ಎಂದರೆ, “ನಾಳೇನೇ ಮದುವೆಯಾಗೋಕೆ ನಾನು ರೆಡಿ’ ಎನ್ನುತ್ತಾರೆ ರಕ್ಷಿತ್. “ನನಗೂ ಕೆಲಸ ಮಾಡೋದಕ್ಕೆ ಒಂದು ಶಕ್ತಿ ಬೇಕು. ಇತ್ತೀಚೆಗೆ ರಿಶಭ್ ಮತ್ತು ಅವನ ಹೆಂಡತಿ, ಸುನಿ, ಹೇಮಂತ್ ತಮ್ಮ ಹೆಂಡತಿಯರ ಜೊತೆಗೂಡಿ ಕೆಲಸ ಮಾಡುವುದನ್ನು ನೋಡಿ, ಇವಳು ಯಾವಾಗ ಬರ್ತಾಳೆ ಅಂತ ಅನಿಸೋದಿದೆ. ಹಾಗಾಗಿ ನಾಳೇನೇ ಮದುವೆಯಾಗೋಕೆ ನಾನು ರೆಡಿ ಅಂತ ಹೇಳಿದೆ. ಅದು ಬಿಟ್ಟು ಇನ್ನೇನೂ ಇಲ್ಲ. ಮದುವೆ ಏನಿದ್ದರೂ, “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರವಷ್ಟೇ’ ಎನ್ನುತ್ತಾರೆ ರಕ್ಷಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.