ರೆಬೆಲ್‌ ಯೋಧನ ಸೇಡಿನ ಕಿಡಿ


Team Udayavani, Feb 25, 2017, 11:34 AM IST

Hebbuli.jpg

“ಯಾರಧ್ದೋ ಕುಟುಂಬಗಳು ಚೆನ್ನಾಗಿರಲಿ ಅಂತ ಜೀವ ಒತ್ತೆಯಿಟ್ಟು ಗಡಿ ಕಾಯುತ್ತಿರುತ್ತೇವೆ. ಇನ್ನು ನಮ್ಮ ಕುಟುಂಬಕ್ಕೇ ತೊಂದರೆ ಆದ್ರೆ ಸುಮ್ನೆ ಇರ್ತಿವಾ …’  ಕ್ಯಾಪ್ಟನ್‌ ರಾಮ್‌ ಸಿಟ್ಟಿನಿಂದ ಬೆಂಕಿಯುಗುಳುವ ಕಣ್ಣುಗಳೊಂದಿಗೆ ವಿಲನ್‌ನ ಮುಖಕ್ಕೆ ಮುಖವಿಟ್ಟು ಹೇಳುವ ಹೊತ್ತಿಗೆ “ತಾವು ಹುಲಿ ಬೋನಿಗೆ ಕೈ ಹಾಕಿ ತಪ್ಪು ಮಾಡಿದೆವೇನೋ’ ಎಂಬ ಭಾವ ವಿಲನ್‌ಗಳ ಮುಖದಲ್ಲಿ. ರಾಮ್‌ ಹೇಳಿದ್ದನ್ನು ಮಾಡುತ್ತಾನೆ. ಗಡಿಯಲ್ಲಿ ದೇಶಕ್ಕಾಗಿ ಗನ್‌ ಹಿಡಿದು ನಿಲ್ಲುವ ರಾಮ್‌, ಊರಲ್ಲಿ ಕುಟುಂಬದ ಬೆನ್ನೆಲುಬಾಗುತ್ತಾನೆ.

ಸೂಕ್ಷ್ಮಅಂಶಗಳನ್ನು ಗಮನಿಸುತ್ತಲೇ ಒಂದು ದೊಡ್ಡ ಕೆಲಸಕ್ಕೆ, ಹುಡುಕಾಟಕ್ಕೆ ರಾಮ್‌ ಕೈ ಹಾಕುತ್ತಾನೆ. ಹಾಗೆ ನೋಡಿದರೆ ರಾಮ್‌ ಕೈ ಹಾಕಿರೋದು ಸುಲಭದ ಕೆಲಸಕ್ಕಲ್ಲ. ಸಾಕಷ್ಟು ರಿಸ್ಕ್ ಎದುರಿಸಬೇಕಾದಂತಹ ಕೆಲಸವದು. “ಹೆಬ್ಬುಲಿ’ ಚಿತ್ರ ನಿಮಗೆ ಖುಷಿಕೊಡೋದೇ ಸೂಕ್ಷ್ಮ ಸಂಗತಿಗಳನ್ನಿಟ್ಟುಕೊಂಡು ಆಟವಾಡಿರುವ ರೀತಿಯಿಂದ. ಯೋಧನ ಬ್ಯಾಕ್‌ಡ್ರಾಪ್‌ನೊಂದಿಗೆ ಆರಂಭವಾಗುವ ಕಥೆ ನೇರವಾಗಿ ಫ್ಯಾಮಿಲಿ ಸೇರಿಕೊಳ್ಳುತ್ತದೆ. “ಹೆಬ್ಬುಲಿ’ಯ ನಿಜವಾದ ಶಕ್ತಿ ತೆರೆದುಕೊಳ್ಳುವುದು ಕೂಡಾ ರಾಮ್‌ ಕುಟುಂಬದ ಮೂಲಕ.

ಪ್ಯಾರಾ ಕಮಾಂಡೋ ಒಬ್ಬನನ್ನು ಕೆಣಕಿದರೆ ಏನಾಗುತ್ತದೆ ಮತ್ತು ಅವನೆಷ್ಟು ಶಕ್ತಿಯುತ ಆಯುಧವಾಗಿ ಪರಿವರ್ತನೆಯಾಗುತ್ತಾನೆ ಎಂಬ ಸೂಕ್ಷ್ಮವಿಚಾರದೊಂದಿಗೆ ಆರಂಭವಾಗುವ ಚಿತ್ರ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ದೂರದ ಗಡಿಯಲ್ಲಿ ತನ್ನ ಪಾಡಿಗೆ ದೇಶ ಕಾಯುತ್ತಿದ್ದ ರಾಮ್‌ಗೆ ಊರಿನಿಂದ ಒಂದು ಸಂದೇಶ ಬರುತ್ತದೆ. ಆ ಕೂಡಲೇ ಊರಿಗೆ ಬರುವ ರಾಮ್‌ ಮನೆಯಲ್ಲಿ ನೋಡುವ ದೃಶ್ಯವೇ ಬೇರೆ. ಅಲ್ಲಿಂದ ಆತ ರೆಬೆಲ್‌ ಆಗುತ್ತಾನೆ.

ಸೇಡಿನ ಕಿಡಿ ಹೊತ್ತಿಕೊಳ್ಳುತ್ತದೆ. ಜಿದ್ದಿಗೆ ಬಿದ್ದ ರಾಮ್‌ನ ಮುಂದಿನ ಕಥೆ ಅಭಿಮಾನಿಗಳನ್ನು ಥಿಯೇಟರ್‌ನಲ್ಲಿ ಕುಣಿಸುತ್ತಾ ಮುಂದೆ ಸಾಗುತ್ತದೆ. “ಹೆಬ್ಬುಲಿ’ ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಒಂದಷ್ಟು ಸೂಕ್ಷ್ಮವಿಚಾರಗಳನ್ನು ಹೇಳಲಾಗಿದೆ. ಹಾಗೆ ನೋಡಿದರೆ ಚಿತ್ರದ ನಿಜವಾದ ಕಥೆ ತೆರೆದುಕೊಳ್ಳುವುದು ಕೂಡಾ ಈ ಅಂಶದೊಂದಿಗೆ. ಅದನ್ನು ಎಷ್ಟು ಬೇಕೋ ಅಷ್ಟೇ ಬಳಸಿಕೊಂಡ ಉಳಿದಂತೆ ಕಮರ್ಷಿಯಲ್‌ ಅಂಶಗಳ ಮೂಲಕ ಸಿನಿಮಾವನ್ನು ಮೆರೆಸಿದ್ದಾರೆ.

ನಿರ್ದೇಶಕ ಕೃಷ್ಣ ತಮ್ಮ ನಿರ್ದೇಶನದ ಎರಡನೇ ಚಿತ್ರದಲ್ಲೇ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಡೀಟೆಲ್ಸ್‌ ಅನ್ನು ಗಮನದಲ್ಲಿರಿಸಿ, ಅದನ್ನು ಕಥೆಗೆ ಲಿಂಕ್‌ ಮಾಡುವಲ್ಲಿ ಕೃಷ್ಣ ಹಿಂದೆ ಬಿದ್ದಿಲ್ಲ. ಮೊದಲೇ ಹೇಳಿದಂತೆ ಕ್ಯಾಪ್ಟನ್‌ ರಾಮ್‌ನ ಹುಡುಕಾಟ ಒಂದು ಹಂತದಲ್ಲಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ, ಸೀಟಿನಂಚಿಯಲ್ಲಿ ಕೂರುವಂತೆ ಮಾಡುತ್ತದೆ. ಹೇಗೆ ಇದು ಹೈವೋಲ್ಟೆàಜ್‌ ಆ್ಯಕ್ಷನ್‌ ಸಿನಿಮಾವೋ ಅದೇ ರೀತಿ ಸೆಂಟಿಮೆಂಟ್‌ ಸಿನಿಮಾ ಕೂಡಾ.

ಇಲ್ಲಿ ಸಂಬಂಧಗಳ ಮೌಲ್ಯವನ್ನು ಕೃಷ್ಣ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರವನ್ನು ಶ್ರೀಮಂತಗೊಳಿಸಿರುವಲ್ಲಿ ತಾಂತ್ರಿಕ ಅಂಶಗಳ ಪಾತ್ರ ಕೂಡಾ ಮಹತ್ವದ್ದಾಗಿದೆ. ಚಿತ್ರದ ಕೆಲವು ದೃಶ್ಯಗಳಂತೂ ಅದ್ಭುತವಾಗಿದೆ. ಆ ದೃಶ್ಯಗಳ ಹಿಂದಿನ ಶ್ರಮ, ಪೂರ್ವತಯಾರಿ ಎದ್ದು ಕಾಣುತ್ತದೆ. ಅಣ್ಣ-ತಮ್ಮನ ಸಂಬಂಧವನ್ನು ಒಂದು ಫ್ಲ್ಯಾಶ್‌ಬ್ಯಾಕ್‌ ಅನ್ನು ಒಂದು ಹಾಡಿನಲ್ಲಿ ಕಟ್ಟಿಕೊಟ್ಟು ಜಾಣ್ಮೆ ಮೆರೆದಿದ್ದಾರೆ ಕೃಷ್ಣ. ಚಿತ್ರದಲ್ಲಿ ನಿಮಗೆ ಬೇರೆಯಾಗಿ ಕಂಡರೆ ಅದು ಕಾಮಿಡಿ ಟ್ರ್ಯಾಕ್‌. ಚಿಕ್ಕಣ್ಣ ಅವರ ಕಾಮಿಡಿ ಟ್ರ್ಯಾಕ್‌ ಅನ್ನು ಹಾಗೇ ಎತ್ತಿಟ್ಟರೂ ಅದರಿಂದ ಚಿತ್ರಕ್ಕೇನು ನಷ್ಟವಾಗದು.

ಚಿತ್ರದ ಅದ್ಧೂರಿತನ ಹಾಡುಗಳಲ್ಲಿ ಎದ್ದು ಕಾಣುತ್ತದೆ. ಕ್ಯಾಪ್ಟನ್‌ ರಾಮ್‌ ಪಾತ್ರದಲ್ಲಿ ಸುದೀಪ್‌ ಅವರನ್ನು ಬಿಟ್ಟರೆ ಮತ್ತೂಬ್ಬರನ್ನು ಊಹಿಸಿಕೊ ಳ್ಳೋದು ಕಷ್ಟ. ಅಬ್ಬರಿಸಿ ಬೊಬ್ಬಿರಿಯುವ ರಾಮ್‌ ಆಗಾಗ ಮುಗ್ಧ ಮಗುವಾಗುತ್ತಾನೆ.  ಒತ್ತರಿಸಿ ಬರುವ ದುಃಖ ಒಂದು ಕಡೆಯಾದರೆ ದ್ವೇಷದ ಜ್ವಾಲೆ ಮತ್ತೂಂದೆಡೆ … ಹೀಗೆ ಪ್ರತಿ ದೃಶ್ಯಗಳಲ್ಲೂ ಸುದೀಪ್‌ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿದಿದ್ದಾರೆ. ಯೋಧನ ಗತ್ತು, ತಮ್ಮನ ಪ್ರೀತಿ, ಮೈದುನನ ಜವಾಬ್ದಾರಿ, ಪ್ರೇಮಿಯ ತುಂಟಾಟ … ಹೀಗೆ ಪ್ರತಿ ಸನ್ನಿವೇಶಗಳಲ್ಲೂ ಸುದೀಪ್‌ ನಿಮಗೆ ಇಷ್ಟವಾಗುತ್ತಾ ಹೋಗುತ್ತಾರೆ.

ಇನ್ನು, ಚಿತ್ರದಲ್ಲಿ ರವಿಚಂದ್ರನ್‌ ಅವರ ಪಾತ್ರ ಆಗಾಗ ಎಂಟ್ರಿಕೊಟ್ಟರೂ ತಮ್ಮದೇ ಶೈಲಿಯಿಂದ ಇಷ್ಟವಾಗುತ್ತಾರೆ.  ನಾಯಕಿ ಅಮಲಾ ಪೌಲ್‌ ಗ್ಲಾಮರಸ್‌ ಆಗಿ ಮಿಂಚಿದ್ದು ಬಿಟ್ಟರೆ ಅವರ ಪಾತ್ರಕ್ಕೆ ಹೆಚ್ಚೇನು ಸ್ಕೋಪ್‌ ಇಲ್ಲ. ವಿಲನ್‌ಗಳಾದ ರವಿಶಂಕರ್‌, ರವಿಕಿಶನ್‌, ಕಬೀರ್‌ ಸಿಂಗ್‌ ಅಬ್ಬರಿಸಿದ್ದಾರೆ. ಇನ್ನು, ಅವಿನಾಶ್‌ ಸೇರಿದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತದ ಹಾಡುಗಳನ್ನು ಕರುಣಾಕರ್‌ ಅಷ್ಟೇ ಸುಂದರವಾಗಿ ಸೆರೆಹಿಡಿದಿದ್ದಾರೆ. 

ಚಿತ್ರ: ಹೆಬ್ಬುಲಿ
ನಿರ್ಮಾಣ: ರಘುನಾಥ್‌-ಉಮಾಪತಿ
ನಿರ್ದೇಶನ: ಕೃಷ್ಣ
ತಾರಾಗಣ: ಸುದೀಪ್‌, ರವಿಚಂದ್ರನ್‌, ಅಮಲಾ ಪೌಲ್‌, ರವಿಶಂಕರ್‌, ರವಿಕಿಶನ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.