ಮಾಲ್ಗುಡಿ ಸುತ್ತಾಟದಲ್ಲೊಂದು ಹಿತಾನುಭವ

Team Udayavani, Feb 8, 2020, 11:59 AM IST

cinema-tdy-1

ಮಗಳು ಅಮೆರಿಕಾಕ್ಕೆ ಕರೆಯುತ್ತಾಳೆ. ಒಲ್ಲದ ಮನಸ್ಸಿನಿಂದಲೇ ಅಮೆರಿಕಾಕ್ಕೆ ಹೋಗಲು ಹಿರಿಯ ಸಾಹಿತಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಒಪ್ಪುತ್ತಾರೆ. ಅಮೆರಿಕಾಕ್ಕೆ ಹೋಗುವ ತಯಾರಿಲ್ಲಿದ್ದ ಲಕ್ಷ್ಮೀನಾರಾಯಣರಿಗೆ ಹಳೆಯ ಸೂಟ್‌ ಕೇಸ್‌ವೊಂದು ಸಿಗುತ್ತದೆ. ಅದರೊಳಗೊಂದು ನೋಟ್‌ಬುಕ್‌. ಪುಟ ತಿರುವಿದಂತೆ ನೆನಪುಗಳ ಮೆರವಣಿಗೆ. 75 ವರ್ಷದ ಲಕ್ಷ್ಮೀನಾರಾಯಣ ಅವರ ಮನಸ್ಸು 16ರ ಹರೆಯಕ್ಕೆ ಜಾರುತ್ತದೆ. ಅಲ್ಲಿಂದ ಅವರ ಜರ್ನಿಯೂ ಶುರುವಾಗುತ್ತದೆ.

“ಮಾಲ್ಗುಡಿ ಡೇಸ್‌’ ಒಂದು ಸುಂದರ ನೆನಪುಗಳ ಬುತ್ತಿ. ಇಲ್ಲಿ ಹಿತವಾದ ಅನುಭವಗಳಿವೆ, ಕಾಡುವ ಭಾವನೆಗಳಿವೆ, ವಾವ್‌ ಎನ್ನುವಂತಹ ಲೊಕೇಶನ್‌ಗಳಿವೆ. ಅದಕ್ಕಿಂತ ಹೆಚ್ಚಾಗಿ ಬಹುತೇಕ ಪಾಸಿಟಿವ್‌ ಎನರ್ಜಿಯೊಂದಿಗೆ ಸಾಗುವ ಕಥೆಯೂ ಇದೆ. ಹೊಡಿಬಡಿ ಕಡಿ ಸಿನಿಮಾಗಳ ಮಧ್ಯೆಯೂ ಅವ್ಯಾವುದರ ಗಂಧಗಾಳಿ ಇಲ್ಲದೇ, ಅಪ್ಪಟ ಭಾವುಕ ಸಿನಿಮಾವೊಂದನ್ನು ನಿರ್ದೇಶಕ ಕಿಶೋರ್‌ ಮೂಡಬಿದ್ರೆ ಕಟ್ಟಿಕೊಟ್ಟಿದ್ದಾರೆ. ಅವಸರದ ಜಗತ್ತಿನ ನಡುವೆ ತುಂಬಾ ಕೂಲ್‌ ಆಗಿ ಮನರಂಜನೆಯ ಲಗಾಮು ಹಾಕುವ ಸಿನಿಮಾವಿದು. ಬಾಲ್ಯ, ಪರಿಶುದ್ಧ ಪ್ರೀತಿ, ಇದರ ನಡುವೆ ಬರುವ ಕೋಮು ದಳ್ಳುರಿಯನ್ನಿಟ್ಟುಕೊಂಡು “ಮಾಲ್ಗುಡಿ ಡೇಸ್‌’ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಇದೊಂದು ಜರ್ನಿ ಸಿನಿಮಾ ಎಂದರೆ ತಪ್ಪಾಗಲಾರದು. ಬೆಂಗಳೂರಿನಿಂದ ಆರಂಭವಾಗುವ ಸಿನಿಮಾ ಮಲೆನಾಡಿನ ಸುಂದರ ಪರಿಸರವನ್ನೆಲ್ಲಾ ಸುತ್ತುಹಾಕಿಕೊಂಡು, ಹಚ್ಚಹಸಿರಿನ ಸೌಂದರ್ಯದ ಮುದವನ್ನು ಪ್ರೇಕ್ಷಕರಿಗೆ ನೀಡುತ್ತಾ ಮುಂದೆ ಸಾಗುತ್ತದೆ. ಇಲ್ಲಿ 75 ವರ್ಷದ ಲಕ್ಷ್ಮೀ ನಾರಾಯಣ ಮಾಲ್ಗುಡಿಯವರದ್ದು ಒಂದು ಕಥೆಯಾದರೆ, ಹರೆಯದ ಹುಡುಗಿಯ ಮತ್ತೂಂದು ಕಥೆ. ಈ ಕಥಾಪಯಣದಲ್ಲಿ ನಿರ್ದೇಶಕರು ಎರಡು ಮನಸ್ಥಿತಿಗಳ ನಡುವಿನ ಭಿನ್ನತೆಯನ್ನು ತೋರಿಸುತ್ತಾ ಸಾಗುತ್ತಾರೆ. ಜೊತೆಗೆ ಕೋಮು-ಗಲಭೆ ಹೇಗೆ ಒಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಮುಗ್ಧ ಮನಸ್ಸುಗಳನ್ನು ಬೇರೆ ಮಾಡುತ್ತದೆ ಎಂಬ ಅಂಶವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಆದರೆ, ಇವೆಲ್ಲದಕ್ಕಿಂತ ಹೆಚ್ಚು ನಿಮ್ಮನ್ನು ಕಾಡೋದು ಲಕ್ಷ್ಮೀ ನಾರಾಯಣರ ಹುಡುಕಾಟ. ಮುಖ್ಯವಾಗಿ ಇಲ್ಲಿ ಕಥೆ ಹೊಸದಾಗಿದೆ ಮತ್ತು ಫ್ರೆಶ್‌ ಎನಿಸುತ್ತದೆ. ಸಾಮಾನ್ಯವಾಗಿ ಹೀರೋ ಎಂದರೆ ಸಖತ್ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು, ಖಡಕ್‌ ಡೈಲಾಗ್‌ ಬೇಕು, ಹೊಡೆದಾಟ ಬೇಕು ಎಂದು ನಂಬಿರುವ ಈ ಸಮಯದಲ್ಲಿ “ಮಾಲ್ಗುಡಿ ಡೇಸ್‌’ ಅವೆಲ್ಲವನ್ನು ದಾಟಿ ಭಿನ್ನವಾಗಿ ಕಾಣಿಸಿಕೊಂಡಿದೆ. ಹೊಸ ಚಿಂತನೆ, ಹೊಸ ಹಾದಿ ಈ ಚಿತ್ರದಲ್ಲಿದೆ. ಅಲ್ಲಲ್ಲಿ ಸಣ್ಣಪುಟ್ಟ ಟ್ವಿಸ್ಟ್‌ಗಳನ್ನು ನೀಡುತ್ತಾ, ಸಂಭಾಷಣೆಯಲ್ಲಿ ನಗೆಬುಗ್ಗೆ ಎಬ್ಬಿಸುತ್ತಾ ಸಾಗುವ ಈ ಜರ್ನಿ ಪ್ರೇಕ್ಷಕರಿಗೆ ಒಂದು ಹಿತಾನುಭವ ನೀಡುತ್ತದೆ. ನಿರ್ದೇಶಕರು ಇಲ್ಲಿ ಅವಸರಕ್ಕೆ ಬಿದ್ದು ಕಥೆ ಹೇಳಿಲ್ಲ. ಏನು ಹೇಳಬೇಕೋ ಅದನ್ನು ನೀಟಾಗಿ ಮತ್ತು ಯಾವ ಜಾಗದಲ್ಲಿ ಹೇಳಬೇಕಿತ್ತೋ ಅಲ್ಲೇ ಹೇಳಿದ್ದಾರೆ. ಅದೇ ಕಾರಣದಿಂದ ಮಲೆನಾಡಿನ ಬಹುತೇಕ ಪರಿಸರವನ್ನು “ಮಾಲ್ಗುಡಿ’ ಸುತ್ತಿಕೊಂಡಿದೆ. ಈ ತರಹದ ಸಿನಿಮಾ ನಿರ್ಮಾಣಕ್ಕೆ ಹಾಗೂ ಕಥೆಗೆ ಪೂರಕವಾದ ಎಲ್ಲವನ್ನೂ ನೀಡಿರುವ ನಿರ್ಮಾಪಕರ ಅಭಿರುಚಿಯನ್ನು ಮೆಚ್ಚಲೇಬೇಕು. ಇನ್ನು, ನೈಜತೆಗೆ ಹೆಚ್ಚು ಒತ್ತು ನೀಡಿರೋದು ಚಿತ್ರದುದ್ದಕ್ಕೂ ಕಾಣಸಿಗುತ್ತದೆ.

ಅದರಲ್ಲೂ ಹೈಸ್ಕೂಲ್‌ ದಿನಗಳು ನಿಮ್ಮ ಬಾಲ್ಯವನ್ನು ನೆನಪಿಸದೇ ಇರದು. ಅತಿಯಾದ ಮಾತು ಕಿರಿಕಿರಿ ಎನಿಸುತ್ತದೆ ಎನ್ನುವುದು ನಿರ್ದೇಶಕರಿಗೆ ಗೊತ್ತಿದೆ. ಅದೇ ಕಾರಣದಿಂದ ಮೌನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಮುಖ್ಯವಾಗಿ ಈ ಚಿತ್ರದ ಹೈಲೈಟ್‌ ನಾಯಕ ವಿಜಯ ರಾಘವೇಂದ್ರ. ಇಡೀ ಸಿನಿಮಾವನ್ನು ಹೊತ್ತುಕೊಂಡು ಸಾಗಿದ್ದಾರೆ. 75ವರ್ಷದ ಪಾತ್ರದಲ್ಲಿ ಅವರ ಪ್ರಬುದ್ಧ ಅಭಿನಯ ಸಿನಿಮಾದ ತೂಕ ಹೆಚ್ಚಿಸಿದೆ. ಅದಕ್ಕೆ ಅವರ ಮೇಕಪ್‌ ಕೂಡಾ ಹೊಂದಿಕೊಂಡಿದ್ದು, ಆ ಮೇಕಪ್‌ ಆರ್ಟಿಸ್ಟ್‌ಗೂ ಕ್ರೆಡಿಟ್‌ ಸಲ್ಲುತ್ತದೆ. ವಿಜಯರಾಘವೇಂದ್ರ ಅವರ ಹಾವ-ಭಾವ, ಮಾತು ಎಲ್ಲವೂ ಪಾತ್ರಕ್ಕೆ ಹೊಂದಿಕೆಯಾಗಿದೆ. ತುಂಟ ಹೈಸ್ಕೂಲ್‌ ಹುಡುಗನಾಗಿಯೂ ಅವರು ಇಷ್ಟವಾಗುತ್ತಾರೆ. ನಾಯಕಿ ಗ್ರೀಷ್ಮಾ ಶ್ರೀಧರ್‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಅರ್ಜುನ್‌ ಕಾಪಿಕಾಡ್‌ ಸೇರಿದಂತೆ ಕಥೆಯುದ್ದಕ್ಕೂ ಬಂದು ಹೋಗುವ ಕಲಾವಿದರು ಸಿನಿಮಾದ ಮೂಲ ಆಶಯವನ್ನು ದಡ ಸೇರಿಸಿದ್ದಾರೆ. ಗಗನ್‌ ಬಡೇರಿಯಾ ಸಂಗೀತದ ಹಾಡುಗಳು, ಉದಯ್‌ ಲೀಲಾ ಛಾಯಾಗ್ರಹಣ ಮಾಲ್ಗುಡಿ ಸೊಬಗನ್ನು ಹೆಚ್ಚಿಸಿದೆ. ಒಂದು ಸುಂದರ ಅನುಭವನ್ನು ಕಣ್ತುಂಬಿಕೊಳ್ಳುವ ಆಸೆ ನಿಮಗಿದ್ದರೆ “ಮಾಲ್ಗುಡಿ’ಯಲ್ಲೊಂದು ಸುತ್ತ ಹಾಕಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.